ಮನೆಯಲ್ಲಿ ನಿತ್ಯ ಬಳಸೋ ಕಾಳು ಮೆಣಸು, ನಿಂಬೆ ಮತ್ತು ಉಪ್ಪಿನಿಂದ ಇಷ್ಟೆಲ್ಲಾ ಆರೋಗ್ಯಕ್ಕೆ ಉಪಕಾರಿ ಆಗುತ್ತೆ ಅಂತ ಗೊತ್ತಾದ್ರೆ ಇಂದೇ ಉಪಯೋಗಿಸೋಕ್ಕೆ ಶುರು ಮಾಡ್ತಿರ!!

0
888

ಪ್ರತಿಯೊಬ್ಬರೂ ಒಂದಲ್ಲ ಒಂದು ಅರೋಗ್ಯ ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ, ಏಕೆಂದರೆ ವಾತಾವರಣದ ಬದಲಾವಣೆ, ಪ್ರಯಾಣ ಸೇರಿದಂತೆ ಹಲವು ಕಾರಣಗಳಿಂದ ಅರೋಗ್ಯ ಸಮಸ್ಯೆಗಳು ಕಂಡು ಬರುತ್ತೇವೆ, ಇವುಗಳಿಗೆ ಸರಳವಾಗಿ ಮನೆಯಲ್ಲಿಯೇ ಇರುವ ವಸ್ತುಗಳಿಂದ ಔಷಧಿ ಕಂಡು ಕೊಳ್ಳಬಹುದು, ಅದರಲ್ಲಿ ನಿಂಬೆ, ಕಾಳು ಮೆಣಸು, ಉಪ್ಪು ಮಿಶ್ರಣದ ಮನೆಮದ್ದಿನಲ್ಲಿ ಅದ್ಭುತ ಆರೋಗ್ಯಕರ ಗುಣಗಳಿವೆ, ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಗಂಟಲು ಕೆರೆತ ಹಾಗೂ ಗಂಟಲಿನ ನೋವಿಗೆ ಮನೆಮದ್ದಾಗಿ ನಿಂಬೆಹಣ್ಣು, ಕಾಳು ಮೆಣಸು, ಉಪ್ಪು ಉತ್ತಮ ಚಿಕಿತ್ಸೆಯಾಗಿದೆ.

ಹೌದು ನಿಂಬೆಹಣ್ಣಿನಲ್ಲಿ ಸಿಟ್ರಸ್ ಅಂಶ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಬಯೋಫ್ಲೇವೋನಾಯ್ಡ್, ಪೆಕ್ಟಿನ್, ಲೈನೋನೆನೆ, ಸಿಟ್ರಿಕ್ ಆಮ್ಲ, ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ, ವಿಮಟಿನ್ಸ್ ಇವೆ. ಕಾಳು ಮೆಣಸಿನಲ್ಲಿ ಆ್ಯಂಟಿ ಬ್ಯಾಕ್ಟಿರಿಯಾ, ಆ್ಯಂಟಿಆಕ್ಸಿಡೆಂಟ್, ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಜ್ವರ ಕಡಿಮೆ ಮಾಡುವ ಗುಣವಿದೆ. ನಿಂಬೆರಸ, ಕಾಳು ಮೆಣಸ್ಸು, ಉಪ್ಪು ಮಿಶ್ರ ಮಾಡಿ ಸೇವಿಸುವುದರಿಂದ ಏನೆಲ್ಲಾ ಅರೋಗ್ಯ?

1. ವಾಂತಿ, ವಾಕರಿಕೆ ನಿಲ್ಲಿಸಲು;

ನೀವು ಆಹಾರ ಸೇವಿಸಿದಾಗ ಹೊಟ್ಟೆ ಹಾಳಾಗುತ್ತದೆ, ಇದರಿಂದ ಬಾಯಲ್ಲಿ ನೀರು ಬರುವುದು, ವಾಕರಿಕೆ ಬಂದಂತೆ ಅನಿಸುವುದು. ಇದನ್ನು ಹೋಗಲಾಡಿಸಲು ಒಂದು ಚಮಚ ನಿಂಬೆರಸಕ್ಕೆ, ಒಂದು ಚಮಚ ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಮಿಶ್ರ ಮಾಡಿ, ಈ ಮಿಶ್ರಣಕ್ಕೆ ಒಂದು ಲೋಟ ನೀರು ಹಾಕಿ ಕುಡಿಯಿರಿ. ಇದರಿಂದ ಸಮಧಾನವಾಗುವುದು.

2. ನಿರಂತರ ಜ್ವರ ಶೀತಕ್ಕೆ ರಾಮಬಾಣ;

ಕೆಲವರಿಗೆ ಪ್ರತಿನಿತ್ಯವೂ ಜ್ವರ, ಶೀತದ ಸಮಸ್ಯೆ ಕಾಡುತ್ತೆ ಅದಕ್ಕೆ, ಒಂದು ಲೋಟ ಬಿಸಿಯಾದ ನೀರಿಗೆ ಅರ್ಧ ನಿಂಬೆಹಣ್ಣು ಹಿಂಡಿ, ನಂತರ ನಿಂಬೆ ಹಣ್ಣಿನ ಸಿಪ್ಪೆ ಕೂಡ ಅದೆ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಅದರ ಸಿಪ್ಪೆ ತೆಗೆಯಿರಿ, ಈಗ ಆ ನೀರಿಗೆ ಒಂದು ಚಮಚ ಜೇನು, ಚಿಟಿಕೆಯಷ್ಟು ಕಾಳು ಮೆನಸಿನ ಪುಡಿ ಹಾಕಿ ಮಿಶ್ರ ಮಾಡಿ, ಈ ಮಿಶ್ರಣವನ್ನು ದಿನದಲ್ಲಿ 2-3 ಬಾರಿ ಕುಡಿಯಿರಿ.

3. ಮೂಗು ಕಟ್ಟಿ ಉಸಿರಾಟಕ್ಕೆ ತೊಂದರೆ;

ಆಗಾಗ ಸೀನು ಬರುವುದು, ಮೂಗು ಕಟ್ಟಿ ಉಸಿರಾಡಲು ತೊಂದರೆ ಉಂಟಾಗಿದ್ದರೆ ಈ ಮನೆಮದ್ದು ಬಳಸಿ. ಚಕ್ಕೆ , ಕಾಳು ಮೆಣಸು, ಏಲಕ್ಕಿ , ಜೀರಿಗೆ ಇವುಗಳನ್ನು ಸಮ ಪ್ರಮಾಣದಲ್ಲಿ ಹಾಕಿ ಪುಡಿ ಮಾಡಿ, ಅದರ ವಾಸನೆ ತೆಗೆದುಕೊಂಡರೆ ಕಟ್ಟಿದ ಮೂಗು ಸರಿಯಾಗುವುದು ಹಾಗೂ ಸೀನು ಬರುವುದು ಕೂಡ ಕಡಿಮೆಯಾಗುವುದು.

4. ತೂಕ ಇಳಿಕೆಗೆ ಸಹಕಾರಿ;

ನಿಂಬೆಹಣ್ಣಿನಲ್ಲಿ ಪಾಲಿಪಿನೋಲ್ ಅಂಶವಿದ್ದು ತೂಕ ಇಳಿಕೆಗೆ ಸಹಕಾರಿ. ಇದು ಇನ್ಸುಲಿನ್ ಪ್ರಮಾಣ ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿ ಹಾಗೂ ಚಯಾಪಚಯ ಕ್ರಿಯೆ ಕೂಡ ಉತ್ತಮ ಪಡಿಸುತ್ತದೆ. ತೂಕ ಇಳಿಕೆ ಮಾಡಲು ಒಂದು ಲೋಟಕ್ಕೆ 1/4 ಚಮಚ ಕಾಳು ಮೆಣಸಿನ ಪುಡಿ, ಒಂದು ಚಮಚ ಜೇನು, 2 ಚಮಚ ನಿಂಬೆರಸ ಮಿಶ್ರ ಮಾಡಿ ಅದಕ್ಕೆ ಬಿಸಿ ನೀರು ಹಾಕಿ, ಉಪ್ಪು ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

5. ಅಸ್ತಮಾ ಸಮಸ್ಯೆ ದೂರವಿಡುತ್ತದೆ

ಇದು ಒಂದೇ ದಿನ ಅಥವಾ ಇನ್ನಾವುದೇ ಬದಲಾವಣೆಯಿಂದ ಬರುವ ಅರೋಗ್ಯ ಸಮಸ್ಯೆಕ್ಕಿಂತ ಭಿನ್ನವಾಗಿದ್ದು, ಮನೆಮದ್ದಾಗಿ ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ. ಅದಕ್ಕೆ 10 ಕಾಳು ಮೆಣಸು, 15 ತುಳಸಿ ಎಲೆ, 2 ಲವಂಗ ಹಾಕಿ ಕುದಿಸಿ. ಈ ನೀರನ್ನು ಒಂದು ಜಾರ್‌ಗೆ ಹಾಕಿ ಅದರ ಮುಚ್ಚಳ ಬಿಗಿಯಾಗಿ ಹಾಕಿರಿ. ಆ ನೀರಿನಲ್ಲಿ ಸ್ವಲ್ಪ ನೀರನ್ನು ಲೋಟಕ್ಕೆ ಹಾಕಿ ನಂತರ ಅದಕ್ಕೆ ಜೇನು, ನಿಂಬೆ ರಸ, ಉಪ್ಪು ಹಾಕಿ ಮಿಶ್ರ ಮಾಡಿ ಪ್ರತಿದಿನ ಕುಡಿಯಿರಿ. ಇದರಿಂದ ಅಸ್ತಮಾ ಕಡಿಮೆಯಾಗುವುದು.

6. ಹಲ್ಲು ನೋವು ಮನೆಮದ್ದು;

ವಿರೋಧಿಗಳಿಗೂ ಬೇಡವಾದ ನೋವು ನೀಡುವ ಹಲ್ಲು ನೋವು ಬಂದರೆ ಸಹಿಸಲು ಅಸಾಧ್ಯವಾದ ನೋವುಂಟಾಗುವುದು. ಈ ಸಮಯದಲ್ಲಿ ನೋವು ತಕ್ಷಣ ಕಡಿಮೆಯಾಗಲು ಅರ್ಧ ಚಮಚ ಆಲೀವ್ ಎಣ್ಣೆಗೆ, ಕಾಳು ಮೆಣಸಿನ ಪುಡಿ, ಉಪ್ಪು, ನಿಂಬೆ ರಸ ಹಾಕಿ ಮಿಶ್ರ ಮಾಡಿ ಅದನ್ನು ನೋವು ಇರುವ ಕಡೆ ಹಚ್ಚಿ. ಹೀಗೆ ಮಾಡುವುದರಿಂದ ನೋವು ತಕ್ಷಣ ಕಡಿಮೆಯಾಗುವುದು.

Also read: ನಿಮ್ಮ ಚರ್ಮದಲ್ಲಿ Pigmentation ಉಂಟಾಗಿ ಸಮಸ್ಯೆ ಎದುರಿಸುತ್ತಿದ್ದರೆ, ದುಬಾರಿ ಕ್ರೀಮ್-ಗಳನ್ನು ಬಿಟ್ಟು ಈ ಸುಲಭ ಮನೆಮದ್ದನ್ನು ಪಾಲಿಸಿ, ಕೆಲವೇ ದಿನದಲ್ಲಿ ಪರಿಹಾರ ಸಿಗುತ್ತೆ!!