ಇನ್ಸ್ಟಾಗ್ರಾಮ್-ನಲ್ಲಿ ಲವ್, ಪ್ರಿಯಕರನ ನಂಬಿದ್ದ ಆಂಟಿಗೆ ಪ್ರಿಯಕರ ಏನ್ ಮಾಡಿದ ಗೊತ್ತಾ?

0
187

ಒಂದೂವರೆ ತಿಂಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ತನ್ನನ್ನು ಕಾಣಲು ಬಂದ ಪ್ರೆಯಸಿಯನ್ನು 60 ಅಡಿ ಆಳದ ಪಾಳುಬಾವಿಯಲ್ಲಿ ದೂಡಿ ಪರಾರಿಯಾದ ಘಟನೆ ದೇವನಹಳ್ಳಿ ಸಮೀಪ ನಡೆದಿದೆ. ಎ. ರಂಗನಾಥ ಪುರದ ಬಳಿಯ ಪಾಳುಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ಬುಧವಾರ ಕ್ರೇನ್ ಮೂಲಕ ಮೇಲೆತ್ತಿ ರಕ್ಷಿಸಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ಪ್ರಿಯಕರನನ್ನು ಬಂಧಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ರಂಗನಾಥಪುರ ಗ್ರಾಮದ ಆದರ್ಶ್ ಮತ್ತು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸೊಣ್ಣಹಳ್ಳಿಯ 22 ವರ್ಷದ ಅಮೃತಾ ವಿವಾಹಿತ ಮಹಿಳೆ ಇನ್ಸ್ಟಾಗ್ರಾಂ ಮೂಲಕ ಪರಿಚಿತರಾಗಿದ್ದರು. ಪರಿಚಯ ಸಲುಗೆಗೆ ಬೆಳೆದು, ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು ಎಂದು ತಿಳಿದು ಬಂದಿದೆ. ಪ್ರಿಯಕರನ ಮಾತನ್ನ ನಂಬಿ ಗಂಡನ ಮನೆಯನ್ನ ಬಿಟ್ಟು ಬಂದಿದ್ದಳೂ. ಆದರೆ ಆದರ್ಶ್‌ ಮತ್ತು ಅಮೃತಾ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಮಹಿಳೆಯನ್ನು ಪ್ರಿಯಕರನೇ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾನೆ. ಕಳೆದ ಮೂರು ದಿನಗಳಿಂದ ಬಾವಿಯಲ್ಲಿಯೇ ಬಿದ್ದಿದ್ದ ಅಮೃತಾ ಮೇಲೆ ಬರಲು ಆಗದೆ ಕಾಪಾಡುವಂತೆ ಕೂಗಿಕೊಂಡಿದ್ದಾಳೆ. ಆದರೆ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ.

ಇತ್ತ ಅಂದು ನಾಪತ್ತೆಯಾಗಿದ್ದ ಅಮೃತಾಳಿಗಾಗಿ ಗಂಡನ ಮನೆ ಕಡೆಯವರು ಹುಡುಕಾಟವನ್ನ ನಡೆಸಿದ್ದರು. ಬಾವಿಯಿಂದ ನಿರಂತರ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅಸ್ವಸ್ಥವಾಗಿರುವ ಅಮೃತಾಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಅವರು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು, ಅಸ್ವಸ್ಥಳಾಗಿರುವ ಕಾರಣ ಚಿಕಿತ್ಸೆ ಬಳಿಕ ಆಕೆಯ ಹೇಳಿಕೆಯನ್ನು ಪೊಲೀಸರು ಪಡೆಯಲಿದ್ದಾರೆ.

ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿಯನ್ನ ಪಡೆದಿರುವ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ. ಆದರೆ ಬಾವಿಗೆ ನಾನು ತಳ್ಳಿಲ್ಲ ಎನ್ನುತ್ತಿರುವ ಆರೋಪಿ ಎ.ರಂಗನಾಥಪುರ ನಿವಾಸಿ ಆದರ್ಶ ಎಂಬುವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.