ಪ್ರತಿಯೊಬ್ಬರೂ ಕ್ಯಾನ್ಸರ್ ಬಗ್ಗೆಗಿನ ಈ ಸಂಗತಿಗಳನ್ನು ತಿಳಿದಿರಲೇಬೇಕು!!!

0
4965

Kannada News | kannada Useful Tips

ಕ್ಯಾನ್ಸರ್ ಎಂಬ `ಪೆಡಂಭೂತ’

ಇಂದು ಲಕ್ಷಾಂತರ ಯುವಕರು ಕ್ಯಾನ್ಸರ್ ರೋಗಕ್ಕೆ ಗೊತ್ತಿಲ್ಲದೆಯೇ ಬಲಿಯಾಗುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಕೇವಲ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಕ್ಯಾನ್ಸರ್ ಕಾಯಿಲೆ, ಈಗ ಚಿಕ್ಕ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಎಲ್ಲರಲ್ಲೂ ಆಂತಕ ಉಂಟು ಮಾಡಿದೆ. ದುಷ್ಚಟಗಳಿಂದ ಕ್ಯಾನ್ಸರ್ ಕಾಯಿಲೆ ಬರುತ್ತದೆ ಎಂಬ ಮಾತು ಅಂದು ಇತ್ತು. ಆದರೆ ಇಂದು ಆರೋಗ್ಯಕರವಾಗಿ ಜೀವನ ನಡೆಸುವರೂ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇ.2-3ರಷ್ಟು ಹೆಚ್ಚುತ್ತಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್) ವರದಿ ನೀಡಿದೆ. ಪ್ರತಿವರ್ಷ ದೇಶದಲ್ಲಿ 14.28 ಲಕ್ಷ ಜನ ಕ್ಯಾನ್ಸರ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪ್ರತಿ 10 ಜನ ಕ್ಯಾನ್ಸರ್ ಪೀಡಿತರಲ್ಲಿ ನಾಲ್ವರು ಮೃತ ಪಡುತ್ತಿರುವುದು ಐಸಿಎಂಆರ್ ದಾಖಲೆಗಳಿಂದ ತಿಳಿದುಬಂದಿದೆ.

ವಾಯುಮಾಲಿನ್ಯ ಮತ್ತು ಅತಿಯಾದ ತಂಬಾಕು ಸೇವನೆಯಿಂದ ಕ್ಯಾನ್ಸರ್ ಪ್ರಮಾಣ ಅಧಿಕವಾಗುತ್ತಿದೆ. ಶೇ.80ರಷ್ಟು ಪ್ರಕರಣಗಳಿಗೆ ತಂಬಾಕು ಸೇವನೆ, ಧೂಮಪಾನ, ಧೂಮಪಾನಿಗಳು ಸೇವಿಸಿ ಬಿಟ್ಟ ಹೊಗೆಯನ್ನು ಇತರರು ಸೇವಿಸುವುದು (ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್)  ಇದರ ಜತೆಗೆ ವಿಪರೀತ ಕಲುಷಿತಗೊಳ್ಳುತ್ತಿರುವ ವಾತಾರಣದ ಗಾಳಿಯೂ ಕೂಡ ಒಂದು ಕಾರಣವಾಗಿದೆ.

Image result for indian cancer
Image Credit: CGHR

ಜೊತೆಗೆ ಭಾರತದಲ್ಲಿ ವಿಳಂಬವಾದ ಕ್ಯಾನ್ಸರ್ ಪತ್ತೆಯು ಶೇ.70ರಷ್ಟು ಕ್ಯಾನ್ಸರ್ ಮರಣಕ್ಕೆ ಕಾರಣವಾಗಿದೆ. ಜಾಗತಿಕವಾಗಿ ಶೇ.50ರಷ್ಟು ಮರಣಗಳು 70ವರ್ಷ ವಯಸ್ಸು ಮೀರಿದವರಲ್ಲಿಯೂ ಕಂಡುಬಂದಿವೆ. ಆದರೆ, ಭಾರತದಲ್ಲಿ ಶೇ.71ರಷ್ಟು ಮರಣಗಳು 30ರಿಂದ 69 ವಯೋಮಾನದವರು ಪ್ರಾಣ ತೆರುತ್ತಿದ್ದಾರೆ.

ವಿಷಾದದ ಸಂಗತಿಯಂದರೆ, ಶೇ.0.5ರಷ್ಟು ಜಾಗತಿಕ ಸರಾಸರಿಗೆ ಹೋಲಿಸಿದರೆ, ಶೇ.15ರಷ್ಟು ಕ್ಯಾನ್ಸರ್ ರೋಗಿಗಳು ಮಕ್ಕಳು.

ಇದೇ ಪರಿಸ್ಥಿತಿ ಮುಂದುವರೆದಲ್ಲಿ 2020ರವೇಳೆಗೆ ಕ್ಯಾನ್ಸರ್ ಪ್ರಕರಣ ಮತ್ತು ಮರಣಗಳ ಪ್ರಮಾಣ 20ಲಕ್ಷಕ್ಕೆ ತಲುಪಲಿದೆ. ಭಾರತದಲ್ಲಿ ಈ ರೀತಿ ಕ್ಯಾನ್ಸರ್ ಪ್ರಕರಣಗಳ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ ವೈದ್ಯರ ಕೊರತೆ. ಹೌದು, ಭಾರತದಲ್ಲಿ ಪ್ರತಿ 2 ಸಾವಿರ ಕ್ಯಾನ್ಸರ್ ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ. ಸರ್ಕಾರ ವೈದ್ಯರ ಸಂಖ್ಯೆ ಹೆಚ್ಚಿಸದೇ ಕ್ಯಾನ್ಸರ್ ಪ್ರಮಾಣವನ್ನು ತಗ್ಗಿಸಲು ಸಾಧ್ಯವಿಲ್ಲ.

ಮಹಿಳೆಯರಲ್ಲಿ ಕ್ಯಾನ್ಸರ್

ಭಾರತ ಅಷ್ಟೇ ಅಲ್ಲದೇ ವಿಶ್ವ ಮಟ್ಟದಲ್ಲಿಯೂ ಸ್ತನ ಕ್ಯಾನ್ಸರ್‍ಗೆ ತುತ್ತಾಗುವ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ಶೇ. 35.9, ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ನಂತರ ಸರ್ವೈಕಲ್(18.7), ಅಂಡಾಶಯದ(6.9), ಅನ್ನನಾಳದ(6.9), ಬಾಯಿ ಕ್ಯಾನ್ಸರ್(6.6), ಗರ್ಭಾಕೋಶ (6.6), ಜಠರ(5.5), ಶ್ವಾಸಕೋಶದ (4.6) ಸೇರಿದಂತೆ ಹಲವು ಬಗೆಯ ಕ್ಯಾನ್ಸರ್‍ಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ.

ಪುರುಷರಲ್ಲಿ ಕ್ಯಾನ್ಸರ್

ಪುರುಷರಲ್ಲಿ ಕ್ಯಾನ್ಸರ್ ಹೆಚ್ಚಾಗಲು ಮುಖ್ಯ ಕಾರಣ ಅವರ ದುಷ್ಚಟಗಳೇ ಆಗಿವೆ. ಹೌದು ಮದ್ಯಪಾನ, ತಂಬಾಕು ಸೇವನೆಯಿಂದ ಪುರಷರಿಗೆ ಹಲವಾರು ವಿಧದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು, ಚರ್ಮ, ಮೂತ್ರಕೋಶ, ಶ್ವಾಸಕೋಶ, ದೊಡ್ಡ ಕರುಳು, ಸಣ್ಣ ಕರುಳು, ಮೆದೋಜೀರಕಗ್ರಂಥಿ ಕ್ಯಾನ್ಸರ್ ಕಂಡು ಬರುತ್ತಿದೆ. ಅದರಲ್ಲಿ ಜನನಾಂಗ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು, ವರದಿಗಳ ಪ್ರಕಾರ 8 ಪುರುಷರಲ್ಲಿ ಪ್ರತಿದಿನ ಒಬ್ಬನಿಗೆ ಜನನಾಂಗ ಕ್ಯಾನ್ಸರ್ ಕಂಡು ಬರುತ್ತಿದೆ.

ಮಕ್ಕಳನ್ನೂ ಕಾಡುವ ಕಾನ್ಸರ್

ಮಕ್ಕಳಲ್ಲಿ ಕಂಡು ಬರುವಂತಹ ಕ್ಯಾನ್ಸರ್‍ಗಳು ವಯಸ್ಕರಲ್ಲಿ ಕಂಡು ಬರುವ ಕ್ಯಾನ್ಸರ್‍ಗಿಂತ ಭಿನ್ನವಾಗಿರುತ್ತವೆ. ಮಕ್ಕಳಲ್ಲಿ ಲುಕೇಮಿಯಾ (ಬಹಳ ಸಾಮಾನ್ಯ)

Image result for indian cancer
Image Credits: Scroll.in[/captio

ಮಿದುಳು ಹಾಗೂ ಇತರೆ ಕೇಂದ್ರೀಯ ನರ ವ್ಯವಸ್ಥೆಯ ಗಡ್ಡೆಗಳು, ನ್ಯೂರೊಬ್ಲಾಸ್ಟೊಮಾ, ವಿಲ್ಮ್ಸ್ ಟ್ಯೂಮರ್, ರೆಟಿನೊಬ್ಲಾಸ್ಟೊಮಾ, ಮೂಳೆಗಳ ಕ್ಯಾನ್ಸರ್ ಸಾಮಾನ್ಯವಾಗಿ ಕಂಡು ಬರುವಂತಹ ಕ್ಯಾನ್ಸರ್‍ಗಳಾಗಿವೆ.

ಮಕ್ಕಳಲ್ಲಿ ಕ್ಯಾನ್ಸರ್ ಗೋಚರಿಸಲು ಕಾರಣಗಳು ತಿಳಿದಿಲ್ಲ. ಆದರೆ ಶೇ. 5ರಷ್ಟು ಮಕ್ಕಳಲ್ಲಿ ಕ್ಯಾನ್ಸರ್ ಬರಲು, ಅನುವಂಶಿಕ ಮಾರ್ಪಾಡುಗಳು ಕಾರಣವಾಗಿದೆ. ಮಕ್ಕಳಲ್ಲಿ ಕಂಡು ಬರುವ ಬಹುಪಾಲು ಕ್ಯಾನ್ಸರ್‍ಗಳು ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆ ಹಾಗೂ ಮುಂದೆ ಕ್ಯಾನ್ಸರ್‍ಗೆ ತಿರುಗಲು ಕಾರಣವಾಗುವಂತಹ, ಜೀನ್ಸ್‍ಗಳಲ್ಲಾಗುವ ಮಾರ್ಪಾಡುಗಳೇ ಕಾರಣವಾಗಿದೆ.

ಕಾಯಿಲೆಗಳ ಲಕ್ಷಣಗಳು: ಕ್ಯಾನ್ಸರ್ ಕಾಯಿಲೆ ಯಾವ ವಯೋಮಾನದಲ್ಲಿಯೂ ಕಂಡು ಬಂದರೂ, ಅದರ ಪ್ರಾಥಮಿಕ ಲಕ್ಷಣಗಳು ಮಾತ್ರ ಎಲ್ಲರಲ್ಲಿಯೂ ಒಂದೇ ರೀತಿಯಲ್ಲಿರುತ್ತದೆ. ಸಾಮಾನ್ಯವಾಗಿ ಅತಿಯಾದ ರಕ್ತಸ್ರಾವ. ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಊತ ಇರುವುದು. ಆಹಾರ ಸೇವನೆ ಕಷ್ಟಕರವಾಗುವುದು. ಯಾವುದೇ ಹುಟ್ಟು ಮಚ್ಚೆಗಳಲ್ಲಿ ಬದಲಾವಣೆ ಕಂಡುಬರುವುದು. ಬಹಳ ದಿನಗಳ ಕೆಮ್ಮು ಮತ್ತು ಉಸಿರಾಟದಲ್ಲಿ ತೊಂದರೆ. ವ್ಯಕ್ತಿಯು 3ರಿಂದ 6 ತಿಂಗಳಲ್ಲಿ ಶೇ. 10ರಷ್ಟು ತೂಕ ಕಡಿಮೆಯಾಗುವುದು. ಬಹಳ ದಿನಗಳಿಂದ ಹೊಟ್ಟೆ ನೋವು ಕಾಣಿಸುವುದು. ಸತತ ತಲೆನೋವು, ಮೂಳೆನೋವು ಮತ್ತು ವಾಂತಿ ಆಗುವುದು. ಸ್ತನಗಳಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು. ಇಂತಹ ಯಾವುದೇ ಬದಲಾವಣೆ ದೇಹದಲ್ಲಿ ಕಂಡು ಬಂದಲ್ಲಿ, ವೈದ್ಯರ ಬಳಿ ಪರೀಕ್ಷೆ ಮಾಡಿಸುವುದು ಒಳಿತು.

[caption id="" align="alignnone" width="600"]Image result for indian cancer Image Credit: Governance Today

ಮುನ್ನೆಚ್ಚರಿಕೆ ಕ್ರಮಗಳು: ಹಣ್ಣು ತರಕಾರಿಗಳ ಸೇವನೆ, ಸ್ವಚ್ಚ ಪರಿಸರ, ದೇಹದ ತೂಕ ನಿಯಂತ್ರಣ, ಧೂಮಪಾನ, ಮದ್ಯಪಾನ, ಜಂಕ್‍ಫುಡ್‍ಗಳನ್ನು ತ್ಯಜಿಸುವುದು. ಎಲ್ಲದಕ್ಕಿಂತ ಮುಖ್ಯವಾಗಿ ನಿತ್ಯ ಒಂದೆರೆಡು ಗಂಟೆಗಳು ವ್ಯಾಯಾಮ ಮಾಡುವುದು. ಈ ರೀತಿ ಚಟುವಟಿಕೆ ರಹಿತ ಅವರಲ್ಲಿ ಹೋಲಿಸಿದಾಗ ಕ್ಯಾನ್ಸರಿನ ಅಪಾಯದ ಸಾಧ್ಯತೆಗಳು ಶೇ.18ರಷ್ಟು ಕಡಿಮೆ ಕಂಡು ಬಂದಿದೆ. ಹಲವು ಅಧ್ಯಯನಗಳು ದೃಢಪಡಿಸಿರುವಂತೆ ವ್ಯಾಯಾಮ ದೊಡ್ಡ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಅದಷ್ಟು ತಡೆಯುತ್ತದೆ ಎಂದು ಧೃಡ ಪಡಿಸಿವೆ.

ಧೂಮಪಾನ ಮಾಡುವವರಿಗಿಂತ, ಧೂಮಪಾನಿಗಳು ಸೇವಿಸಿ ಬಿಟ್ಟ ಹೊಗೆಯ ಕುಡಿಯುವವರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಅದಕ್ಕಾಗಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಾನೂನು ಹೊರಡಿಸಿದೆ. ಆದರೂ ಬಸ್ ನಿಲ್ದಾಣ, ಮಾರುಕಟ್ಟೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅವರಪಾಡಿಗೆ ಅವರು ಧೂಮಪಾನ ಮಾಡುತ್ತ ಬಿಟ್ಟ ಹೊಗೆಯಿಂದ ಸಹವರ್ತಿಗಳ ಆರೋಗ್ಯವನ್ನೂ ಕೆಡಿಸುತ್ತಿರುವುದು ವಾಸ್ತವ ಸಂಗತಿಯಾಗಿದೆ.

ಶಾಲಾ ಪ್ರದೇಶದ ನೂರು ಮೀಟರ್ ಸುತ್ತ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಹಲವೆಡೆ ತಂಬಾಕು ಉತ್ಪನ್ನ ಮಾರಾಟ ಮತ್ತು ಸೇವನೆ ಅವ್ಯಾಹತವಾಗಿ ನಡೆಯುತ್ತಿದೆ. ಎಲ್ಲಿವರೆಗೆ ಕ್ಯಾನ್ಸರ್ ತರುವ ವಸ್ತುಗಳಿಂದ ಮನುಷ್ಯ ದೂರ ಉಳಿಯುವುದಿಲ್ಲವೋ ಅಲ್ಲಿಯವರಗೆ ಕ್ಯಾನ್ಸರ್ ಎಂಬ ಪೆಡಂಭೂತ ಮನುಷ್ಯ ಕುಲದ ಬೆನ್ನ ಹಿಂದೆಯೇ ಇರುತ್ತದೆ.

Also Read: ಅಪರೂಪದ ಪಕ್ಷಿ ಕಲ್ಲುಗೌಜಲು’!!!

Watch: