ಖಾಲಿ ಹೊಟ್ಟೆಯಲ್ಲಿ ನಾವು ಮಾಡಲೇಬಾರದ 6 ಕೆಲಸಗಳು..

0
14258

ಖಾಲಿ ಹೊಟ್ಟೆಯಲ್ಲಿ ನಾವು ಮಾಡುವ ಕೆಲಸಗಳು ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ.. ಅದಕ್ಕಾಗಿಯೇ ಈ ಮಾಹಿತಿ.. ಈ 6 ಕೆಲಸವನ್ನು ಯಾವುದೇ ಕಾರಣಕ್ಕೂ ಊಟದ ಮುನ್ನ ಮಾಡಲೇಬೇಡಿ.. ಔಷಧಿ ತೆಗೆದುಕೊಳ್ಳುವಾಗ ಎಚ್ಚರವಹಿಸಿ ಆಸ್ಪಿರಿನ್, ಪಾರಾಸಿಟೆಮಲ್ ಅಥವಾ ಇನ್ಯಾವುದೇ ರೀತಿಯ ಆಂಟಿ ಬಯೋಟಿಕ್ ಗಳಾಗಲಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಾರದು.. ಈ ರೀತಿಯಾಗಿ ಮಾಡಿದರೆ ಔಷಧಿಯ ಎಫೆಕ್ಟಿವ್ ನೆಸ್ ಕಡಿಮೆಯಾಗುವುದಷ್ಟೇ ಅಲ್ಲ.. ಇದರಿಂದ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ.. ಗ್ಯಾಸ್ಟ್ರಿಕ್ ಬ್ಲೀಡಿಂಗ್ ರೀತಿಯ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ..

ಕಾಫಿಯನ್ನು ಕುಡಿಯುವುದು

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಆಸಿಡಿಕ್ ಅಂಶ ಉತ್ಪತ್ತಿಯಾಗುತ್ತದೆ.. ಇದರಿಂದ ಹಾರ್ಟ್ ಬರ್ನ್ ಆಗುವ ಸಾಧ್ಯತೆ ಇದೆ.. ಜೊತೆಗೆ ಅಜೀರ್ಣ ತೊಂದರೆಗಳು ಕಾಣಿಸಿಕೊಳ್ಳುತ್ತವೆ.. ಅಕಸ್ಮಾತ್ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದು ಬ್ರೇಕ್ ಫಾಸ್ಟ್ ಮಾಡದಿದ್ದರೆ ಸ್ಟೆರೊಟೊನಿನ್ ಅಂತಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ..

ಆಲ್ಕೋಹಾಲ್ ಕುಡಿಯುವುದು.

ಖಾಲಿ ಹೊಟ್ಟೆಯಲ್ಲಿ ಅಲ್ಕೋಹಾಲ್ ಕುಡಿದರೆ ನಮ್ಮ ದೇಹ ಆಲ್ಕೋಹಾಲ್ ನ ಅಂಶವನ್ನು ಸಾಮಾನ್ಯಕ್ಕಿಂತ ಎರಡರಷ್ಟು ತೆಗೆದುಕೊಳ್ಳುತ್ತದೆ.. ಇದರಿಂದ ಲಿವರ್ ಹಾರ್ಟ್ ಕಿಡ್ನಿಗಳ ಮೇಲೆ ತೀವ್ರತರನಾದ ಪರಿಣಾಮ ಬೀರುತ್ತದೆ..

ಚಿವಿಂಗ್ ಗಮ್ ತಿನ್ನುವುದು.

ಖಾಲಿ ಹೊಟ್ಟೆಯಲ್ಲಿ ಚಿವಿಂಗ್ ಗಮ್ ತಿನ್ನುವುದರಿಂದ ಅದು ಗ್ಯಾಸ್ಟ್ರಿಕ್‌ ತೊಂದರೆಗೆ ಎಡೆಮಾಡಿಕೊಡುತ್ತದೆ.. ಕೇವಲ ಚಿವಿಂಗ್ ಗಮ್ ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಜಂಕ್ ಫುಡ್ ತಿಂದರೂ ಇದೇ ತೊಂದರೆಯನ್ನು ಎದುರಿಸಬೇಕಾಗುತ್ತದೆ..

ಖಾಲಿಹೊಟ್ಟೆಯಲ್ಲಿ ಮಲಗುವುದು.

ಹಸಿವಿದ್ದಾಗ ನಮ್ಮ ದೇಹದಲ್ಲಿ ಗ್ಲೂಕೋಸ್ ಲೆವೆಲ್ ಕಡಿಮೆ ಇರುತ್ತದೆ.. ಇದು ನಿದ್ರೆಯನ್ನು ಬೇಗ ತರಿಸುತ್ತದೆ.. ಇದರಿಂದ ಹಸಿವಿನ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ..

ವ್ಯಾಯಾಮ ಮಾಡುವುದು.

ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಇದು.. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಕ್ಯಾಲೊರಿ ಬರ್ನ್ ಆಗುವುದು ಸತ್ಯ ಆದರೆ ಯಾವುದೇ ರೀತಿಯ ಫ್ಯಾಟ್ ಲಾಸ್ ಆಗಲಿ ಮಸಲ್ ಲಾಸ್ ಆಗಲಿ ಆಗುವುದಿಲ್ಲ‌.

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಮಾಹಿತಿ ಹಂಚುವುದಕ್ಕಿಂತ ಮಹತ್ವ ವಾದದ್ದು ಬೇರೇನಿದೆ..