ಈ ಶಾಲೆಯಲ್ಲಿ ಹಿಂದೂ, ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ; ಹಸಿ ಮನಸ್ಸಿನ ಮಕ್ಕಳಿಗೆ ಶಿಕ್ಷಕರಿಂದಲೇ ಧರ್ಮ ಬೇಧದ ಪಾಠ..

0
514

ಹಿಂದೂ- ಮುಸ್ಲಿಂ ಧರ್ಮ ಯುದ್ದ ಬಹಳಷ್ಟು ಹಳೆಯದು ದೇಶದ ತುಂಬಾ ವರ್ಷದಲ್ಲಿ ಏನಿಲ್ಲ ಅಂದ್ರು ನೂರಾರು ಹಿಂದೂ ಮುಸ್ಲಿಂ ಗಲಾಟೆಗಳು ಕಂಡು ಬರುತ್ತೆವೆ ಇದರಲ್ಲಿ ಕೆಲವೊಂದು ಘಟನೆಗಳು ಅಂತು ಸಾವಿನ ವರೆಗೂ ಹೋಗಿ ಎಷ್ಟೋ ದಿನಗಳು ಪೊಲೀಸ್, ಕೋರ್ಟ್ ಅಂತ ಅಲೆಯಬೇಕಾಗಿ ಬರುತ್ತೆ ಇದರಿಂದ ವ್ಯಯಕ್ತಿವಾಗಿ ಯಾವುದೇ ಲಾಭಗಳು ಇಲ್ಲದಿದ್ದರೂ ಧರ್ಮದ ಹೆಸರಿನಲ್ಲಿ ಹೊಡೆಡಾವುದು ಸಾಮಾನ್ಯವಾಗಿ ಬಿಟ್ಟಿದೆ ಇದಕೆಲ್ಲ ಪರಿಹಾರವೇ? ಎಂಬ ಪ್ರಶ್ನೆಗೆ ಉತ್ತರ ವೆಂದರೆ ಮಕ್ಕಳು ಚಿಕ್ಕವರು ಇದ್ದಾಗೆನೆ ಧರ್ಮದ ಬಗ್ಗೆ ಭೇದಭಾವದ ಬೆಂಕಿಯನ್ನು ಹಚ್ಚಬಾರದು ಇದನೆಲ್ಲ ಶಾಲೆಯಲ್ಲೇ ತಿಳಿಹೇಳಿ ಒಳ್ಳೆಯ ಮಾರ್ಗದಲ್ಲಿ ಒಂದಾಗಿರಲು ಕಲಿಸುವುದ್ದನ್ನು ಕಳಿಸುವುದು ಒಳ್ಳೆಯ ದೇಶದ ಲಕ್ಷಣವಾಗಿದೆ ಆದರೆ ಇಲ್ಲೊಂದು ಶಾಲೆಯಲ್ಲಿ ಚಿಕ್ಕ- ಚಿಕ್ಕ ಮಕ್ಕಳಿಗೆ ಹಿಂದೂ ಮುಸ್ಲಿಂ ಎಂಬ ಮನೋಭಾವನೆಯನ್ನು ಬಿತ್ತುತ್ತಿದೆ. ಅದು ಎಲ್ಲಿ ಹೇಗೆ ಎಂಬುದು ಇಲ್ಲಿದೆ ನೋಡಿ.

Also read: ಹೆಣ್ಣು ಹುಟ್ಟಿದರೆ ಶಾಪವೆನ್ನುವ ಕಾಲದಲ್ಲಿ ಮಗಳ ನೆನಪಿಗೋಸ್ಕರ ಇಡಿ ಶಾಲೆಯ ಬಡ ಹೆಣ್ಣುಮಕ್ಕಳ ಫೀಸ್ ಕಟ್ಟಿದ ಸಾಧಾರಣ ಕ್ಲರ್ಕ್ ಬಸವರಾಜ್..

ನವದೆಹಲಿಯ ವಾಜಿರಾಬಾದ್​ನ ಪ್ರಾಥಮಿಕ ಶಾಲೆಯಯಲ್ಲಿ ಶಿಕ್ಷಕರೇ ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ನಾವೆಲ್ಲರೂ ಒಂದೇ ಎಂದು ಹೇಳಿಕೊಡಬೇಕಾದ ಶಿಕ್ಷಕರು ಧರ್ಮ ಭೇದವನ್ನು ಹುಟ್ಟು ಹಾಕುತ್ತಿರುವ ಆತಂಕಕಾರಿ ಘಟನೆ ನಡೆಯುತ್ತಿದೆ. ಇಲ್ಲಿನ ಶಾಲೆಯ ಶಿಕ್ಷಕರು ಉದ್ದೇಶಪೂರ್ವಕವಾಗಿ ಹಿಂದೂ ಹಾಗೂ ಮುಸ್ಲಿಂ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸುತ್ತಿರುವ ಘಟನೆ ನಡೆದಿದೆ ಎಂದು ಉತ್ತರ ದೆಹಲಿ ಮುನ್ಸಿಪಲ್​ ಕಾರ್ಪೊರೇಷನ್​ ಆರೋಪಿಸಿದೆ.
ಅದು ಹೇಗೆ ಅಂದ್ರೆ ಒಂದನೇ ತರಗತಿಯನ್ನು ‘ಎ’ ಮತ್ತು ‘ಬಿ’ ಎಂದು ಎರಡು ವಿಭಾಗವಾಗಿ ಮಾಡಿದರೆ, ‘ಎ’ ತರಗತಿಯಲ್ಲಿ 26 ಮಂದಿ ವಿದ್ಯಾರ್ಥಿಗಳಿದ್ದರೆ ಅವರೆಲ್ಲಾ ಹಿಂದೂಗಳಾಗಿರುತ್ತಾರೆ. ಇನ್ನು ‘ಬಿ’ ತರಗತಿಯಲ್ಲಿ 36 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಉಲ್ಲೇಖಿಸಿದೆ. ಇದೆಲ್ಲ ನಡೆಯುತ್ತಿರುವುದು ಹೊಸದಾಗಿ ನೇಮಕವಾದ “ಮುಖ್ಯೋಪಧ್ಯಾಯ ಸಿಬಿ ಸಿಂಗ್​ ಸೆಹ್ರವತ್​” ನೇಮಕಗೊಂಡ ನಂತರ ಈ ರೀತಿ ವಿಭಾಗೀಕರಣ ನಡೆಯುತ್ತಿದೆ ಎಂದು ಈ ಕೆಲವು ಶಿಕ್ಷಕರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.

Also read: ಆಯುಷ್ಮಾನ್ ಯೋಜನೆಯ ಷರತ್ತು ಅನೇಕರನ್ನು ಹೊರಗಿಟ್ಟಿದೆ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಬರಿ ಬೊಬ್ಬೆ ಅನ್ನಿಸುತ್ತೆ..

ಈ ಆರೋಪವನ್ನು ಸೆಹ್ರವತ್​ ನಿರಾಕರಿಸಿದ ಅವರು. ಧರ್ಮದ ಆಧಾರದ ಮೇಲೆ ನಡೆಯುತ್ತಿರುವ ಜಗಳ ಕುರಿತು ಮಾತನಾಡಿ, ಮಕ್ಕಳಿಗೆ ಧರ್ಮದ ಬಗ್ಗೆ ಏನು ಗೊತ್ತಿರುತ್ತದೆ. ಕೆಲವು ಮಕ್ಕಳು ಸಸ್ಯಹಾರಿಗಳಾಗಿರುವುದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ನಾವು ಎಲ್ಲಾ ಮಕ್ಕಳು ಮತ್ತು ಶಿಕ್ಷಕರ ಆಸಕ್ತಿಯನ್ನು ಗಮನಿಸಬೇಕಾಗುತ್ತದೆ, ಹಾಗೆಯೇ ಎಲ್ಲಾ ಶಾಲೆಗಳಲ್ಲಿ ತರಗತಿಗಳನ್ನು ವಿಭಾಗಿಸುವುದು ಸಹಜ ಪ್ರಕ್ರಿಯೆ. ಇದು ನಿರ್ವಹಣಾ ತಂಡದ ಪ್ರಕ್ರಿಯೆ. ಮಕ್ಕಳ ಕಲಿಕೆಗೆ ಶಿಸ್ತುಬದ್ಧ ಉತ್ತಮ ವಾತಾವರಣ ನಿರ್ಮಾಣ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

Also read: ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಲಿರುವ; ಇನ್ಫೋಸಿಸ್ ಫೌಂಡೇಷನ್ಸ್ ಅಧ್ಯಕ್ಷರಾದ ಡಾ. ಸುಧಾ ಮೂರ್ತಿ…!

ಈ ಬಗ್ಗೆ ಶಿಕ್ಷರ ಅಭಿಪ್ರಾಯ:

ಈ ಶಾಲೆಯಲ್ಲಿ ಸೆಹ್ರವತ್​ ನಡೆಗೆ ಶಿಕ್ಷಕರಲ್ಲೇ ಅಸಮಾಧಾನ ಮೂಡಿದ್ದು, ಪ್ರತಿಭಟನೆ ವ್ಯಕ್ತವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಮಕ್ಕಳ ಅಭಿಪ್ರಾಯ:

ನಾಲ್ಕನೇ ತರಗತಿ ಮಗು, ನಮ್ಮ ತರಗತಿಯಲ್ಲಿ ಯಾವುದೇ ಹಿಂದೂ ಮಗುವಿಲ್ಲ. ಕೆಲವು ತಿಂಗಳ ಹಿಂದೆ ನಾವು ಎಲ್ಲಾ ಒಟ್ಟಾಗಿದ್ದೇವೆ. ಆದರೆ ಪ್ರತಿಯೊಂದು ವಿಭಾಗದಲ್ಲೂ ಬದಲಾವಣೆಯಾಗಿದ್ದು ನನ್ನ ಒಳ್ಳೆಯ ಸ್ನೇಹಿತ ಈಗ ನನ್ನ ಜೊತೆ ಇಲ್ಲ ಎಂದಿದ್ದಾನೆ.

ಈ ಬಗ್ಗೆ ಶಿಕ್ಷಣ ಇಲಾಖೆಯ ಅಭಿಪ್ರಾಯ:

ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.