ಬೇಕಾಗುವ ಸಾಮಗ್ರಿಗಳು:
ಟೊಮೆಟೊ ಹಣ್ಣು-3,
ಹಾಲು-4 ಕಪ್,
ಸಕ್ಕರೆ-2 ಕಪ್,
ಏಲಕ್ಕಿ ಪುಡಿ-1/2 ಟೀ ಚಮಚ,
ಲವಂಗದ ಪುಡಿ-1/4 ಟೀ ಚಮಚ.
ಮಾಡುವ ವಿಧಾನ:
ಟೊಮೆಟೊ ಹಣ್ಣುಗಳು, ಸಕ್ಕರೆ, ಲವಂಗದ ಪುಡಿಗಳನ್ನು ಸೇರಿಸಿ, ನುಣ್ಣಗೆ ಅರೆದು ಸೋಸಿ, ಬೀಜಗಳಿಂದ ಬೇರ್ಪಡಿಸಿ. ಸೋಸಿದ ಮಿಶ್ರಣಕ್ಕೆ, ತಂಪಾದ ಹಾಲು, ಏಲಕ್ಕಿ ಪುಡಿಗಳನ್ನು ಹಾಕಿ ಕಲಕಿ. ಬೇಕೆನಿಸಿದರೆ ಐಸ್ ಕ್ಯೂಬ್ಗಳನ್ನು ಸೇರಿಸಿ.
ರುಚಿಯಾದ, ಸ್ವಾದಿಷ್ಟವಾದ ಟೊಮೆಟೊ ಮಿಲ್ಕ್ ಬಿಸಿಲಿಗೆ ಚೇತೋಹಾರಿ.