ನುಗ್ಗೆಕಾಯಿ ಮತ್ತು ಸೊಪ್ಪು ಇಷ್ಟೊಂದು ಖಾಯಿಲೆನ ವಾಸಿ ಮಾಡುತ್ತೆ ಅಂತ ಗೊತ್ತಾದ್ರೆ ಈಗ್ಲೇ ಮನೆಗೆ ತರ್ತೀರಾ..

0
4948

Kannada News | Health tips in kannada

ನುಗ್ಗೆಕಾಯಿ ಮತ್ತು ಸೊಪ್ಪಿನಲ್ಲಿ ಉತ್ತಮ ಔಷಧೀಯ ಗುಣಗಳು ಇರುವುದರಿಂದ ಇದನ್ನು ಯಾವ ರೀತಿಯಲ್ಲಿ ಸೇವಿಸಿದರೂ ದೇಹಾರೋಗ್ಯ ಉತ್ತಮಗೊಳ್ಳುವುದು. ನುಗ್ಗೆಕಾಯಿಯನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಸಾಧ್ಯ ರೋಗಗಳಿಗೂ ಸಹ ಇದು ಪಥ್ಯಕರವಾಗಿರುತ್ತದೆ.

1. ನುಗ್ಗೆ ಸಪ್ಪು ಬೇಯಿಸಿ ತೆಗೆದ ರಸಕ್ಕೆ ಹಾಲು ಬೆಲ್ಲ ಬೆರೆಸಿ ಮಕ್ಕಳು ಕುಡಿಯುವುದರಿಂದ ರಕ್ತಶುದ್ಧಿಯಾಗಿ ಆರೋಗ್ಯ ವೃದ್ಧಿಯಾಗುವುದು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

2. ಬೇಯಿಸಿ ಬಸಿದ ನುಗ್ಗೆ ಸೊಪ್ಪಿನ ರಸಕ್ಕೆ ನಿಂಬೆ ರಸ ಹಿನಿ ಪ್ರತಿ ದಿನ ಬೆಳಿಗ್ಗೆ ಸೇವಿಸುತ್ತಾ ಬಂದಲ್ಲಿ ತಲೆಸುತ್ತುವಿಕೆ ನಿವಾರಣೆಯಾಗುವುದು.

3. ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿದರೆ ಮೊಳಕೆಗಳು ನಿವಾರಣೆಯಾಗುವುದು.

4. ಪೆಟ್ಟು ಬಿದ್ದು ಊದಿದ್ದರೆ ನುಗ್ಗೆ ಸೊಪ್ಪನ್ನು ಹುರಿದು ಬಟ್ಟೆಯಲ್ಲಿ ಕಟ್ಟಿ ಊದಿದ ಜಾಗಕ್ಕೆ ಶಕ ಕೊಟ್ಟರೆ ಊತ ಮತ್ತು ನೋವು ಶಮನವಾಗುವುದು.

5. ತಲೆನೋವು ಬಂದಾಗ ನುಗ್ಗೆ ಸೊಪ್ಪಿನ ರಸಕ್ಕೆ ಒಂದೆರಡು ಮೆಣಸು ಕಾಳು ಅರೆದು ಕಪಾಲದ ಮೇಲೆ ಹಚ್ಚಿದ್ದಲ್ಲಿ ನೋವು ಕಡಿಮೆಯಾಗುತ್ತದೆ.

6. ನುಗ್ಗೆ ಸೊಪ್ಪಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಲೈಂಗಿಕ ಕ್ರಿಯಾಶಕ್ತಿ ಹೆಚ್ಚುತ್ತದೆ.

Also Read:

7. ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ, ಮಲಬದ್ಧತೆ ಇತ್ಯಾದಿ ರೋಗಗಳಿಂದ ನರಳುವವರು ನುಗ್ಗೆ ಕಾಯಿ ಊತ ಮಾಡುವುದರಿಂದ ಗುಣವಾಗುವರು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಒಣದ್ರಾಕ್ಷಿ ಇರ್ಬೇಕಾದ್ರೆ ಬೇರೆ ಸಪ್ಪ್ಲಿಮೆಂಟ್ಸ್ ಯಾಕ್ರೀ ಬೇಕು?