ಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್, ಇನ್ನುಮುಂದೆ ಪೊಲೀಸರು ಸುಮ್ಮನೆ ಡಿಎಲ್ ಚೆಕ್ ಮಾಡಲು ವಾಹನಗಳನ್ನು ತಡೆಯುವಂತಿಲ್ಲ. ಕಣ್ಣಿಗೆ ಕಾಣುವಂತಹ ನಿಯಮ ಉಲ್ಲಂಘನೆಯಾದರೆ ಮಾತ್ರ ಕ್ರಮಕ್ಕೆ ಮುಂದಾಗಬೇಕೆಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.
ಪ್ರವೀಣ್ ಸೂದ್ ಅವರು ಪೊಲೀಸ್ ಕಮಿಷನರ್ ಆಗಿ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ಪ್ರಮುಖ ನಿರ್ಧಾರಗಳು ಈ ಕೆಳಗಿನಂತಿವೆ.
ಡಿಎಲ್ ಪರಿಶೀಲಿಸಲು ವಾಹನಗಳನ್ನು ತಡೆಯುವಂತಿಲ್ಲ.
‘ಸಂಚಾರ ಉಲ್ಲಂಘನೆ ಸಂಬಂಧ ತಿಂಗಳಿಗೆ ಇಂತಿಷ್ಟು ಪ್ರಕರಣ ದಾಖಲಿಸಲೇಬೇಕು ಅಥವಾ ಇಂತಿಷ್ಟು ದಂಡ ಸಂಗ್ರಹಿಸಲೇಬೇಕು ಎಂದು ಯಾವುದೇ ಟಾರ್ಗೆಟ್ ನೀಡುವುದಿಲ್ಲ.
ನಿಯಮ ಉಲ್ಲಂಘಿಸುವ ಸವಾರರ ವಾಹನಗಳನ್ನು ಮಾತ್ರ ತಡೆದು ಪ್ರಕರಣ ದಾಖಲಿಸಬೇಕು.
ಪಾಸ್ ಪೋರ್ಟ್ ಸೇರಿಯಾವುದೇ ದಾಖಲೆಗಳ ಪೊಲೀಸ್ ಪರಿಶೀಲನೆಗೆ 15 ದಿನಗಳ ಕಾಲಮಿತಿ ನಿಗದಿ.
ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಟ್ರಾಫಿಕ್ ಕಡೆಯೂ ಹೆಚ್ಚಿನ ಗಮನ.
ಸಂಚಾರ ವಿಭಾಗವನ್ನು ಬಲಪಡಿಸಲಾಗುವುದು.
ಸವಾರರಿಗೆ ತೊಂದರೆ ಕೊಡಬೇಡಿ: ಡಿಎಲ್ ಚೆಕ್ ಮಾಡಲು ವಾಹನಗಳನ್ನು ತಡೆಯುವಂತಿಲ್ಲ ಎಂದು ಸೂಚಿಸಿದ್ದೇನೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ದಾಖಲೆಗಳನ್ನು ನೋಡಲು ವಾಹನಗಳನ್ನು ತಡೆಯದಂತೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧದ ಕಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಪಾಸ್ ಪೋರ್ಟ್ ಪರಿಶೀಲನೆ: ಪಾಸ್ ಪೋರ್ಟ್ ಸೇರಿದಂತೆ ಇನ್ನಿತರೆ ದಾಖಲೆಗಳ ಪರಿಶೀಲನೆ ವಿಚಾರದಲ್ಲಿ ಸಿಬ್ಬಂದಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳ ಹಿನ್ನಲೆಯಲ್ಲಿ. 15 ದಿನದೊಳಗೆ ಪಾಸ್ ಪೋರ್ಟ್ ಪರಿಶೀಲನೆ ಮುಗಿಯಬೇಕು. ಕ್ರಮೇಣ ಈ ಕಾಲಮಿತಿಯನ್ನು 10 ದಿನಕ್ಕೆ ಇಳಿಸಲಾಗುವುದು. ಒಂದು ವೇಳೆ 15 ದಿನಗಳಲ್ಲಿ ನಿಮಗೆ ಪಾಸ್ಪೋರ್ಟ್ ಸಿಕ್ಕಿಲ್ಲ ಅದ್ರೆ ನೇರವಾಗಿ ಪೊಲೀಸರನ್ನು ಸಂಪರ್ಕಿಸಿ. ಅನವಶ್ಯಕವಾಗಿ ಯಾರೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬಾರದು ಎಂದು ಹೇಳಿದರು.
ಯಾರೇ ತಪ್ಪು ಮಾಡಿದರೂ ಶಿಕ್ಷೆ ಸಮಾನಾಗಿರುತ್ತದೆ. ಪೊಲೀಸ್ ಇಲಾಖೆ ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಟ್ರಾಫಿಕ್ ಕಡೆಯೂ ಹೆಚ್ಚಿನ ಗಮನ ಹರಿಸುತ್ತಿದೆ. ಪ್ರಮುಖವಾಗಿ ನಾಗರಿಕರು ಟ್ರಾಫಿಕ್ ರೂಲ್ಸ್ಗಳಿಗೆ ಗೌರವ ಕೊಡಬೇಕು. ಇದಕ್ಕಾಗಿ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.