ಕೆ ಆರ್ ಮಾರ್ಕೆಟ್ ಬಳಿ ಸಂಬಳವಿಲ್ಲದೆ ಟ್ರಾಫಿಕ್ ನಿಯಂತ್ರಿಸುವ ಹಿರಿಯ ನಾಗರೀಕ

0
1230

ಬೆಂಗಳೂರಿನ ಮಾರ್ಕೆಟಿನ ಟ್ರಾಫಿಕ್ ಸಿಗ್ನಲ್ ನಲ್ಲಿ ಟ್ರಾಫಿಕ್ ಪೋಲಿಸರೇ ಇಲ್ಲವಂತೆ. ಯಾಕೆಂದರೆ ಆ ಕೆಲಸದಲ್ಲಿ ಒಬ್ಬ ಹಿರಿಯ ನಾಗರೀಕ ಜಿ ನಾಗರಾಜ್ ಸಂಬಳವಿಲ್ಲದೆ ಕೆಲಸಮಾಡುತ್ತಿದ್ದಾರೆ. ಇಂತಹ ಒಂದು ಕೆಲಸವನ್ನು ಪದಗಳಲ್ಲಿ ಹೇಳುವುದಕ್ಕಿಂತ ಒಮ್ಮೆ ಈ ವಿಡಿಯೋ ನೋಡಿ.

67 ವರ್ಷದ ನಾಗರಾಜ್ ರವರು ತಮ್ಮ ಕೆಲಸಕ್ಕೆ ನಿವೃತ್ತಿಯಾದ ನಂತರದಿಂದ ಸ್ವಯಂ ಪ್ರೇರಿತರಾಗಿ ಟ್ರಾಫಿಕ್  ನಿಯಂತ್ರಿಸುವ ಕೆಲಸಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದಿನದ 6 ತಾಸು ಇವರು ಮಾರ್ಕೆಟ್ ಬಳಿ ಟ್ರಾಫಿಕ್ ಅನ್ನು ನಿಯಂತ್ರಿಸುತ್ತಿದ್ದಾರೆ. ಮೊದಮೊದಲು ಅವರನ್ನು ಟ್ರಾಫಿಕ್ ನಿಯಂತ್ರಿಸುವಲ್ಲಿ ತರಬೇತಿ ಅನ್ನು ನೀಡಲಾಗಿತ್ತು, ಟ್ರೇನಿಂಗ ಪಡೆದ ನಂತರ vip ಗಳಿಗೋಸ್ಕರ ಕೆಲಸಮಾಡುವುದಾಗಿ ತಿಳಿದು, ಸಂಬಳ ಪಡೆದು vip ಗಾಳಿಗೋಸ್ಕರ ಕೆಲಸ ಮಾಡುವುದಿಲ್ಲ ಎಂದು ಕೇವಲ ೩ ದಿನ ತರಬೇತಿ ಪಡೆದು ಸಂಬಳ ವಿಲ್ಲದೆ ಜನಗಳಿಗೋಸ್ಕರ ಕೆಲಸ ಮಾಡಲು ಮುಂದಾದರು. ತಮ್ಮ 67 ನೆಯ ಹರಯದಲ್ಲೂ ಅವರ ಈ ಕೆಲಸದ ನಿಷ್ಠೆ ಮತ್ತು ಅವರಿಗೆ ಇರುವ ಸಾಮಜಿಕ ಕಳಕಳಿ ನೋಡಿ ಹೆಮ್ಮೆಯಾಗುತ್ತದೆ.

ನಮ್ಮ ನಡುವೆ, ಕೆಲವು ಜನ ಯಾವ ನಿರೀಕ್ಷೆಯಿಲ್ಲದೇ ತಮ್ಮಷ್ಟಕ್ಕೆ ತಾವು ಸೇವಾನಿಷ್ಠರಾಗಿರುವದನ್ನು ಕಾಣುತ್ತೇವೆ. ಇವರು ಯಾವುದೇ ಆರ್ಥಿಕ ಲಾಭವಿಲ್ಲದಿದ್ದರೂ, ತಮ್ಮ ಆರೋಗ್ಯ, ಯೋಗಕ್ಷೇಮ ಮತ್ತು ಜೀವನೋಪಾಯವನ್ನೂ ಅಲಕ್ಷಿಸಿ  ಕೆಲಸ ಮಾಡುತ್ತಾರೆ ಅಂತಹರ ಗುಂಪಿಗೆ ಜಿ ನಾಗರಾಜ್ ಸೇರಿದ್ದಾರೆ. thenewsism.com ತಂಡ ಇವರ ನಿಸ್ವಾರ್ಥ ಸೇವೆಗೆ ಹೃತ್ಪೂರಕವಾದ ಅಭಿನಂದನೆಗಳನ್ನು ಕೋರುತ್ತದೆ.