ಸಲಿಂಗಿಗಳ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಹಿನ್ನೆಲೆಯಲ್ಲಿ, ದೇಶದಲ್ಲಿ ಲಿಂಗ ಪರಿವರ್ತನೆಗೆ ಹೆಚ್ಚು ಬೇಡಿಕೆ ಇದ್ದು, ಮೊದಲು ಕದ್ದು ಮುಚ್ಚಿ ನಡೆಯಿತ್ತಿದ್ದ ಚಿಕಿತ್ಸೆ ಈಗ ಓಪನ್ ಆಗಿ ನಡೆಯುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರು ಧೈರ್ಯವಾಗಿ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಅನೇಕ ಸಣ್ಣ ಪುಟ್ಟ ಚಿಕಿತ್ಸಾಲಯಗಳು ಈ ಸರ್ಜರಿಗಳನ್ನು ಸರಿಯಾಗಿ ಮಾಡದೇ ಅವಾಂತರ ಮಾಡುತ್ತಿದ್ದವು. ಆದರೆ ಈಗ ಹಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡುತ್ತಿವೆ. ಬೆಂಗಳೂರಿನಲ್ಲಿ ಕೂಡ ಇಂತಹ ಚಿಕಿತ್ಸೆ ಬಾರಿ ಬೇಡಿಕೆ ಇದೆ ಎನ್ನುವುದು ತಿಳಿದು ಬಂದಿದೆ.
ಹೌದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೆಯ್ಟಿಂಗ್ ಲಿಸ್ಟ್-ನಲ್ಲಿ ಇದ್ದು. ನಗರದಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಬೇಡಿಕೆ ಹಿಂದೆಂದಿಗಿಂತಲೂ ಅಧಿಕವಾಗಿದ್ದು, ಹಲವು ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಎಂದು ತಿಳಿದುಬಂದಿದೆ. ಹೀಗೆ ಶಸ್ತ್ರಚಿಕಿತ್ಸೆಗೆ ಮುಂದಾಗಿರುವ ಬಹುತೇಕ ಮಂದಿ ಮಧ್ಯಮ ವರ್ಗದವರಾಗಿದ್ದು. ದಶಕದ ಹಿಂದೆ ಇಡೀ ವರ್ಷದಲ್ಲಿ ಒಂದು ಅಥವಾ ಎರಡು ಇಂಥ ಬೇಡಿಕೆಗಳು ಇತ್ತು ಆದರೆ ಇದೀಗ ಪ್ರತೀ ತಿಂಗಳು 5 ರಿಂದ 10 ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ.
ಸುಪ್ರೀಂ ಕೋರ್ಟ್ ತೀರ್ಪು ಏನು?
158 ವರ್ಷಗಳಿಂದ ಸಲಿಂಗಕಾಮವನ್ನು ಅಪರಾಧ ಎಂದಿದ್ದ ಸೆಕ್ಷನ್ 377ನ್ನು ಸರ್ವೋಚ್ಛ ನ್ಯಾಯಾಲಯದ ತೀರ್ಪು ತೊಡೆದುಹಾಕಿ. ಸೆಕ್ಷನ್ 377 ಪ್ರಕಾರ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಯ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಶಿಕ್ಷಾರ್ಹ ಅಪರಾಧ ಎನ್ನಲಾಗಿತ್ತು. ಇದಕ್ಕೆ 10 ವರ್ಷಗಳವರಗೆ ಕಠಿಣ ಸಜೆ ಕೂಡಾ ವಿಧಿಸಬಹುದಾಗಿತ್ತು. ಆದರೆ ಅನೇಕ ಸಂಘಟನೆಗಳು 2001ರಿಂದ ನಡೆಸಿದ್ದ ನ್ಯಾಯಾಂಗ ಹೋರಾಟಕ್ಕೆ ಸಿಕ್ಕ ಜಯದ ಪರಿಣಾಮವಾಗಿ ಸೆಪ್ಟೆಂಬರ್ 6, 2018ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸಲಿಂಗಿಗಳು, ದ್ವಿಲಿಂಗಿಗಳು, ಅಥವಾ ಲಿಂಗ ಪರಿವರ್ತನೆ ಮಾಡಿಕೊಂಡವರು ಇತರ ನಾಗರಿಕರು ಹೊಂದಿರುವಂತೆ ಸಮಾನ ಹಕ್ಕು ಪಡೆದಿರುತ್ತಾರೆ ಎಂದಿದೆ. ಇದೆಲ್ಲ ಜಯ ಕಂಡ ಬಳಿಕ ನಂತರ ಸಮಾಜವನ್ನು ಎದುರಿಸಲು ಭಯಪಡುತ್ತಿದ್ದ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಧೈರ್ಯವಾಗಿ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ.
ಇದು ಹೆಣ್ಣು ಗಂಡಾಗಿ ಪರಿವರ್ತನೆ ಆಗುವ ಶಸ್ತ್ರಚಿಕಿತ್ಸೆಗಿಂತ ಸ್ವಲ್ಪ ಸುಲಭದ್ದು. ಯಾವುದೇ ವ್ಯಕ್ತಿ ಲಿಂಗ ಪರಿವರ್ತನಾ ಸರ್ಜರಿ ಮಾಡಿಸಿಕೊಳ್ಳಬೇಕಾದರೆ ಅವರಿಗೆ 21 ವರ್ಷ ವಯಸ್ಸಾಗಿರಬೇಕು. ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ಮೊದಲಿಗೆ ಒಬ್ಬ ಮನಃಶಾಸ್ತ್ರಜ್ಞರನ್ನು ಅವರು ಭೇಟಿಯಾಗಬೇಕು. ಅವರಿಗೆ ನಿಜಕ್ಕೂ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಇಚ್ಛೆಯಿದೆ ಮತ್ತು ಮಾನಸಿಕವಾಗಿ ಆ ವ್ಯಕ್ತಿ ಬೇರೆ ಲಿಂಗದಂತೆಯೇ ಚಿಂತಿಸುತ್ತಿದ್ದಾರೆ ಎನ್ನುವುದು ದೃಢಪಟ್ಟಮೇಲಷ್ಟೇ ಶಸ್ತ್ರಚಿಕಿತ್ಸೆಗೆ ತಯಾರಿ ಮಾಡಿಕೊಳ್ಳಲಾಗುತ್ತೆ ಎಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯ ಡಾ. ಎಚ್.ಕೆ ನಾಗರಾಜ್ ಹೇಳಿದ್ದಾರೆ.
ಹೇಗೆ ನಡೆಯುತ್ತೆ ಚಿಕಿತ್ಸೆ?
ಗಂಡು ಹೆಣ್ಣಾಗಿ ಬದಲಾಗುವ ಚಿಕಿತ್ಸೆಯಲ್ಲಿ ಬ್ರೆಸ್ಟ್ ಇಂಪ್ಲಾಂಟ್ಗಳನ ಅಳವಡಿಕೆ ಸೇರಿದಂತೆ ಈ ಚಿಕಿತ್ಸೆಯಲ್ಲಿ ದೈಹಿಕವಾಗಿ ಒಂದಷ್ಟು ಅಂಗಗಳನ್ನು ಬದಲಿಸಲಾಗುತ್ತದೆ. ಇದರ ಜೊತೆ ಜೊತೆಗೇ ಜೀವನವಿಡೀ ಅವರು ಹೆಣ್ಣಿನಲ್ಲಿ ಉತ್ಪತ್ತಿಯಾಗೋ ಅನೇಕ ಹಾರ್ಮೋನುಗಳನ್ನು ನಿಯಮಿತವಾಗಿ ಬದಲಾಗುತ್ತೇವೆ. ಸಂಪೂರ್ಣ ಸರ್ಜರಿ ಮುಗಿಯಲು ಸುಮಾರು 6 ತಿಂಗಳ ಸಮಯ ಹಿಡಿಯುತ್ತೆ. ಅದೇ ಹೆಣ್ಣು ಗಂಡಾಗಿ ಬದಲಾಗುವ ಸರ್ಜರಿಗಳಾದರೆ ಅವು ಅನೇಕ ಹಂತಗಳಲ್ಲಿ ನಡೆಯುತ್ತವೆ ಮತ್ತು ಹೆಚ್ಚು ಕ್ಲಿಷ್ಟಕರವಾಗಿರುತ್ತವೆ. ಇದರಲ್ಲಿ ಮನಃಶಾಸ್ತ್ರಜ್ಞರು, ಪ್ಲಾಸ್ಟಿಕ್ ಸರ್ಜನ್ಗಳು, ಯುರಾಲಜಿ ವಿಭಾಗ ಮತ್ತು ಎಂಡೋಕ್ರೈನ್ ವಿಭಾಗದ ತಜ್ಞರು ಸೇರಿ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ.