ಮನುಷ್ಯತ್ವ ಮರೆತ ಮಾನವ: ಮರಕ್ಕೆ ಕಟ್ಟಿ ಮಂಗನಿಗೆ ಹಲ್ಲೆ, ನರಳಾಡಿ ಪ್ರಾಣ ಬಿಟ್ಟ ವಾನರ..

0
1126

ದಿನದಿಂದ ದಿನಕ್ಕೆ ಮನುಷ್ಯ ಕ್ರೂರವಾಗುತ್ತಿದ್ದಾನೆ ತನ್ನ ಸುತ್ತ-ಮುತ್ತಲಿನ ಪರಿಸರ, ನದಿಗಳು ಪ್ರಾಣಿಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಇದಕ್ಕೆ ಅಂತ್ಯವೇ ಇಲ್ಲದಂತಾಗಿದೆ, ಈ ಘಟನೆಯನ್ನು ಕೇಳಿದರೆ ನಿಮಗೆ ಈ ಪ್ರಾಣಿಯ ಬಗ್ಗೆ ಕರುಣೆ ಬರೋದಂತು ಖಚಿತ.

ಯುವಕನೊಬ್ಬ ಮನುಷ್ಯತ್ವ ಮರೆತು ಮಂಗವೊಂದರ ಮೇಲೆ ಮೃಗೀಯವಾಗಿ ವರ್ತಿಸಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವಕ ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದಿದ್ದಾನೆ. ಸಾಲದ್ದಕ್ಕೆ ಕೆಳಗಿಸಿ ಅಮಾನುಷವಾಗಿ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾನೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ, ರಿಸೋದ್ ತೆಹ್ಸಿಲ್ ಗ್ರಾಮದ ಪವನ್ ಬಂಗಾರ್ ಎಂಬ 23 ವರ್ಷದ ಯುವಕ ಮತ್ತು ಆತನ ಇಬ್ಬರು ಅಪ್ರಾಪ್ತ ಗೆಳೆಯರು ಸೇರಿ ಕೋತಿಯನ್ನು ಮರಕ್ಕೆ ಕಟ್ಟಿ ಸಾಯುವ ತನಕ ಹೊಡೆದ್ದಿದಾರೆ. ಈ ಘಟನೆಯನ್ನು ಮತ್ತೊಬ್ಬ ಸ್ನೇಹಿತ ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿದ್ದಾನೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಡಿಸೆಂಬರ್ 16 ರಂದು ತೋಟಕ್ಕೆ ಬಂದಿದ್ದ ಮಂಗನನ್ನು ಹಿಡಿದು ಮರಕ್ಕೆ ಹಗ್ಗದಿಂದ ನೇತು ಹಾಕಿ ಅಮಾನುಷವಾಗಿ ಹೊಡೆದ್ದಿದಾನೆ, ಇಷ್ಟಕ್ಕೆ ನಿಲ್ಲಿಸದೆ ಮರದಿಂದ ಅದನ್ನು ಇಳಿಸಿ ಕೋಲಿನಿಂದ ಹೊಡೆದಿದ್ದಾರೆ, ಸತತ ಹೊಡೆತಗಳನ್ನು ತಡೆಯಲಾಗದೆ ಅಮಾಯಕ ಪ್ರಾಣಿ ಜೀವ ಬಿಟ್ಟಿದೆ.

ಇಷ್ಟೆಲ್ಲ ಘಟನೆಯನ್ನು ವಿಡಿಯೋ ಮಾಡಿ ಅದನ್ನು ವಾಟ್ಸಪ್-ನಲ್ಲಿ ಶೇರ್ ಮಾಡಿದ್ದಾರೆ ಇದನ್ನು ನೋಡಿ ಎಚ್ಚತ್ತ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಲೀಸರು ಈ ಯುವಕರನ್ನು ಬಂಧಿಸಿದ್ದಾರೆ. ಅರಣ್ಯ ಅಧಿಕಾರಿಗಳು ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9ರಡಿ ದೂರು ಧಾಖಲಿಸಿ, ಸ್ಥಳಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ನಂತರ ಕೋರ್ಟ್ ಇವರನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ, ಇವರಲ್ಲಿ ಇಬ್ಬರು ಅಪ್ರಾಪ್ತರಾಗಿರುವುದರಿಂದ ಇವರನ್ನು ಜುವಿನೈಲ್ ಜಸ್ಟಿಸ್ ಹೋಮ್‍ಗೆ ಕಳಿಸಲಾಗಿದೆ.

ಒಟ್ಟಿನಲ್ಲಿ ಮನುಷ್ಯ ಕಾಡು ನಾಶ ಮಾಡುತ್ತ ಹೋದರೆ ಪ್ರಾಣಿಗಳು ಬದುಕುವುದಾದರು ಎಲ್ಲಿ, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ವಿಕೃತ ಕೃತ್ಯವನ್ನು ವೆಸಗಿರುವ ಇವರಿಗೆ ನಮ್ಮ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕು…!