‘ಟ್ರಿಪ್’ ಹೋಗುವವರಿಗೆ ಹೇಳಿ ಮಾಡಿಸಿದ ವರ್ಷ ‘2017’

0
1624

ಈಗಿನಿಂದಲೇ ಪ್ಲಾನ್ ಮಾಡಿ ನಿಮ್ಮ ಟ್ರಿಪ್ ವೇಳಾಪಟ್ಟಿಯನ್ನು ರೆಡಿಮಾಡಿಕೊಳ್ಳಿ. ಯಾಕೆ ಗೊತ್ತಾ..? 2016 ನಲ್ಲಿ ನೋಟು ಕೈ ಕೊಟ್ಟು ಟ್ರಿಪ್ ಹೋಗದೆ ಮಿಸ್ ಮಾಡ್ಕೊಂಡಿದ್ದ ನಿಮಗೆ, ಬೋನಸ್ ಎಂಬಂತೆ ಸಾಲು ಸಾಲು ರಾಜ ದಿನಗಳು 2017 ನಲ್ಲಿ ಸಿಗಲಿವೆ… ಹೌದು, 2017 ರಲ್ಲಿ ರಜೆಗಳ ಸುಗ್ಗಿ. ವಾರಾಂತ್ಯದ ಜೊತೆಗೆ ಹೆಚ್ಚಿನ ರಜೆಗಳು ಬಂದಿದ್ದು, ನೌಕರರಿಗೆ, ಐಟಿ ಉದ್ಯೋಗಿಗಳಿಗೆ ಸಂಭ್ರಮಿಸಲು ಇನ್ನೇನು ಬೇಕು.

 • ಜನವರಿ 14 ರಂದು ಶನಿವಾರ ಸಂಕ್ರಾಂತಿ ಹಬ್ಬದ ರಜೆ ಇದೆ. ಮರುದಿನ ಭಾನುವಾರ ಎಂದಿನಂತೆ ರಜೆ ಇರುತ್ತದೆ.
 • ಫೆಬ್ರವರಿ 24 ರಂದು ಶುಕ್ರವಾರ ಮಹಾಶಿವರಾತ್ರಿ. so ಮೂರು ದಿನ ರಜೆ ಸಿಗಲಿದೆ.

 

 • ಮಾರ್ಚ್ 13 ರಂದು ಸೋಮವಾರ ಹೋಳಿ ಹಬ್ಬ. ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.
 • ಏಪ್ರಿಲ್ 14 ರಂದು ಗುಡ್ ಫ್ರೈಡೇ ಜೊತೆಗೆ ಅಂಬೇಡ್ಕರ್ ಜಯಂತಿ. ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.
 • ಮೇ 1 ಸೋಮವಾರ ಕಾರ್ಮಿಕರ ದಿನಾಚರಣೆಗೆ ರಜೆ ಇರುತ್ತದೆ. ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.
 • ಜೂನ್ 26 ಸೋಮವಾರ ಈದ್ ಉಲ್ ಫಿತರ್, ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.
 • ಆಗಸ್ಟ್ 15 ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ, ಸೋಮವಾರ leave ಹಾಕಿದರೆ ಶನಿವಾರ ಭಾನುವಾರ ಸೇರಿ ನಾಲ್ಕು ದಿನ ರಜೆ.
 • ಆಗಸ್ಟ್ 25 ರಂದು ಶುಕ್ರವಾರ ಗಣೇಶ ಚತುರ್ಥಿ, ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.
 • ಸೆಪ್ಟಂಬರ್ 19 ಮಂಗಳವಾರ ಮಹಾಲಯ ಅಮಾವಾಸ್ಯೆ, ಸೋಮವಾರ leave ಹಾಕಿದರೆ ಶನಿವಾರ ಭಾನುವಾರ ಸೇರಿ ನಾಲ್ಕು ದಿನ ರಜೆ.
 • ಸೆಪ್ಟಂಬರ್ 28 ಗುರುವಾರ ಆಯುಧ ಪೂಜೆ, ಮರುದಿನ ವಿಜಯದಶಮಿ, ಶನಿವಾರ ಭಾನುವಾರ ಸೇರಿ ನಾಲ್ಕು ದಿನ ರಜೆ.
 • ಅಕ್ಟೋಬರ್ 1 ಭಾನುವಾರ ಮೊಹರಂ, 2 ರಂದು ಸೋಮವಾರ ಗಾಂಧಿ ಜಯಂತಿ, ಸೋಮವಾರ ಸೇರಿ ಮೂರು ದಿನ ರಜೆ.
 • ಡಿಸೆಂಬರ್ 1 ರಂದು ಶುಕ್ರವಾರ ಮಿಲದ್ ಉನ್ ನಬಿ, ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.
 • ಡಿಸೆಂಬರ್ 25 ಸೋಮವಾರ ಕ್ರಿಸ್ ಮಸ್ ರಜೆ ಇರುತ್ತದೆ. ಶನಿವಾರ ಭಾನುವಾರ ಸೇರಿ ಮೂರು ದಿನ ರಜೆ.

ಬಹುತೇಕ ರಜೆಗಳು ವಾರಾಂತ್ಯದ ಹಿಂದೆ ಮುಂದೆ ಬಂದಿರುವುದರಿಂದ ನಿಮ್ಮ ಪ್ರವಾಸಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ… ಮತ್ತೆ ಮತ್ತೆ ಇಂತಹ ಆಫರ್ ಸಿಗೋದಿಲ್ಲ…