ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಈ ಬಡ ಮುಖ್ಯಮಂತ್ರಿ ಚುನಾವಣೆಯಲ್ಲಿ ಸೋತ ನಂತರ ಈಗ ಒಂದು ಚಿಕ್ಕ ಮನೆಯಲ್ಲಿ ವಾಸಕ್ಕೆ ಹೋಗುತ್ತಿದ್ದಾರೆ…

0
731

Kannada News | Karnataka News

ಇತ್ತೀಚಿಗೆ ನಡೆದ ಮೂರು ರಾಜ್ಯಗಳ ಚನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಜಯಭೇರಿ ಬಾರಿಸಿತು. ಇನ್ನು ತ್ರಿಪುರದ ಚುನಾವಣೆಯಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ CPM ಸೋಲಿನ ನಂತರ ದೇಶದ ಬಡ ಮುಖ್ಯಮಂತ್ರಿ ಎಂದೇ ಹೆಸರುವಾಸಿಯಾಗಿದ್ದ ಮಾಣಿಕ್ ಸರ್ಕಾರ್ ಈಗ ತಮ್ಮ ನಿವಾಸ ಬದಲಿಸಿದ್ದಾರೆ.

ಹೌದು, ಬಿಜೆಪಿಯ ವಿರುದ್ಧ ಸೋಲಿನ ನಂತರ ಕಮ್ಯುನಿಸ್ಟ್ ಪಕ್ಷ ಸಿಪಿಎಂ ನಿಂದ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ತಮ್ಮ ಸಿಎಂ ನಿವಾಸವನ್ನು ಖಾಲಿ ಮಾಡಿ ಈಗ ಪಕ್ಷದ ಅತಿಥಿ ಗೃಹಕ್ಕೆ ಶಿಫ್ಟ್ ಆಗಿದ್ದಾರೆ. ಮಾಣಿಕ್ ಸರ್ಕಾರ್ ಮತ್ತು ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯ ಇನ್ನು ಮುಂದೆ ಪಕ್ಷದ ಅತಿಥಿ ಗೃಹದಲ್ಲಿ ವಾಸಿಸುತ್ತಾರಂತೆ.

ಪಕ್ಷದ ಅತಿಥಿ ಗೃಹದಲ್ಲಿ ಶಿಫ್ಟ್ ಆದ ನಂತರ ನನಗೆ ಪಕ್ಷದ ಕಚೇರಿಯಲ್ಲಿ ಮಾಡುವ ಅಡುಗೆಯನ್ನೇ ಕೊಡಿ ಎಂದು ಅಡುಗೆ ಮಾಡುವ ಸಿಬ್ಬಂದಿಗೆ ಹೇಳಿದ್ದರಂತೆ. ಪಾಂಚಾಲಿ ತಮ್ಮ ಪುಸ್ತಕಗಳನ್ನು ಪಕ್ಷದ ಗ್ರಂಥಾಲಯ ಮತ್ತು ಅಗರ್ತಲದ ಬಿರ್‍ಚಂದ್ರ ಕೇಂದ್ರ ಗ್ರಂಥಾಲಯಕ್ಕೆ ಕೊಡಲಾಗುವುದು ಎಂದು ಹೇಳಿದ್ದರು.

ಸತತ ಐದು ಬಾರಿ ಮುಖ್ಯಮಂತ್ರಿಯಾದರು ಮಾಣಿಕ್ ಸರ್ಕಾರ್ ಅವರ ಬಳಿ ಕೇವಲ 2410 ರೂ. ಇದೆಯಂತೆ ಚುನಾವಣಾ ಘೋಷಣೆಯಲ್ಲಿ ತಿಳಿಸಿದ್ದರು. ಸರ್ಕಾರ್ 1998 ರಿಂದ ಇಂದಿನವರೆಗೂ, ಸತತ ಐದು ಅವಧಿಯವರೆಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮಾಣಿಕ್ ಸರ್ಕಾರ್ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ಬಳಿಯಲ್ಲಿ 1,520 ರೂ. ನಗದು ಮತ್ತು ರಾಷ್ಟ್ರೀಯ ಖಾತೆಯಲ್ಲಿರುವ ಬ್ಯಾಂಕಿನಲ್ಲಿ 2,410 ರೂ. ಬ್ಯಾಂಕ್ ಬ್ಯಾಲೆನ್ಸ್ ಇದೆ. ಇದಲ್ಲದೆ ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿಯಾದ ಸರ್ಕಾರ್ ಅವರ ಪತ್ನಿ ಪಂಚಾಲಿ ಭಟ್ಟಾಚಾರ್ಜಿ ಅವರು 20,140 ರೂಪಾಯಿ ನಗದು ಮತ್ತು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 12,15,714.78 ರೂ. ಮೊತ್ತದ ಹಣವಿದೆಯಂತೆ.

ಸ್ವಂತ ಮನೆಯನ್ನು ಕೂಡ ಹೊಂದದ ಮಾಣಿಕ್ ಅವರು, ಅಗರ್ತಲದ ಕೃಷ್ಣ ನಗರದಲ್ಲಿ ಇರುವ ಸ್ಥಿರ ಆಸ್ತಿಯಾದ 0.0118 ಎಕರೆ ಕೃಷಿಯೇತರ ಭೂಮಿಯ ಹೊಂದಿದ್ದಾರೆ. ಈ ಆಸ್ತಿಯು ಸ್ವಾಮ್ಯ ಹಕ್ಕನ್ನು ಅವರ ಸಹೋದರ ಮತ್ತು ಸಹೋದರಿಯರು ಹೊಂದಿದ್ದಾರೆ. ಮೊಬೈಲ್ ಫೋನ್ ಇಲ್ಲದ ಇವರು ತಮ್ಮ ಪ್ರತಿ ತಿಂಗಳ ವೇತನವನ್ನು (26,315 ರೂ) ಪಕ್ಷದ ನಿಧಿಗೆ ದಾನ ಮಾಡಿ ಉಳಿದ 9,700 ರೂ ಗಳನ್ನು ಬಳಸುತ್ತಿದ್ದರು.

Also Read: ನೀವು ಮಾರ್ನಿಂಗ್ ಟೈಮ್ ನಲ್ಲಿ ಟೀ ಕುಡಿಯೋದು ಡೇಂಜರ್ ಅಂತೆ…!