ಸಾಹಸಮಯ ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಮಾಡಲು ಹೋಗಿ ಅದೇ ರೈಲಿಗೆ ಸಿಕ್ಕು ಪ್ರಾಣ ಕಳೆದುಕೊಂಡ ಯುವಕರು.!

0
309

ಯುವಪಿಳಿಗೆ ಟಿಕ್ ಟಾಕ್ ನಶೆಯಲ್ಲಿ ಮುಳುಗಿದ್ದು ಪ್ರಾಣದ ಭಯವಿಲ್ಲದೆ ಮೊಬೈಲ್ ಹಿಡಿದು ವೀಡಿಯೋ ಮಾಡುತ್ತಿದ್ದಾರೆ. ಅದಕ್ಕೆ ಹೆಚ್ಚಿನ ಲೈಕ್ ಬರಲ್ಲೆಂದು ಏನೆಲ್ಲಾ ಸಾಹಸ ಮಾಡುತ್ತಿದ್ದಾರೆ ಈ ನಡುವೆ ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಇನ್ನೂ ಕೆಲವರು ಕೈಕಾಲು ಮುರಿದುಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರು ಸುಮ್ಮನಾಗದ ಯುವಕರು ಸಾವಿನ ಹುತ್ತದಲ್ಲಿ ಕೈ ಹಾಕಿದೆ, ಹರಿತವಾದ ಆಯುದಗಳನ್ನು ಬಳಸಿದೆ ಎಂದು ಹವಾ ಮಾಡಲು ಹೋಗುತ್ತಿದ್ದಾರೆ. ಇಂತಹದೆ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಮಾಡಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

Also read: ಪಾಲಕರೇ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರ; ಮೊಬೈಲ್ ಬಳಕೆ ಮಕ್ಕಳ ಮೆದುಳಿನ ಬೆಳೆವಣಿಗೆಯನ್ನು ಕುಂಟಿತಗೊಳಿಸುತ್ತೆ..

ಹೌದು ಟಿಕ್ ಟಾಕ್ ವಿಡಿಯೋ ಹುಚ್ಚಿನಿಂದಾಗಿ ದೇಶ-ವಿದೇಶಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಶುಕ್ರವಾರ ಬೆಂಗಳೂರಿನಲ್ಲೂ ಇಬ್ಬರು ಯುವಕರ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಜಕ್ಕೂರು ಮುಖ್ಯರಸ್ತೆ ಶಿವರಾಮಕಾರಂತ ಬಡಾವಣೆಯ 2ನೇ ಹಂತದ ಶ್ರೀರಾಮಪುರ ರೈಲ್ವೆ ಗೇಟ್‌ ಬಳಿ ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಸಾಹಸ ಮಾಡುವಾಗ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಫುಡ್‌ ಡೆಲಿವರಿ ಕೊಡುವ ಕೆಲಸ ಮಾಡುತ್ತಿದ್ದ ಹೆಗಡೆ ನಗರ ನಿವಾಸಿ ಅಫ್ತಾಬ್‌ ಶರೀಫ್‌ (19) ಮತ್ತು ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ಮೊಹಮ್ಮದ್‌ ಮತೀನ್‌ (23) ಮೃತರು. ಜಬೀವುಲ್ಲಾ(21) ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also read: ಪಾಲಕರೆ ನಿಮ್ಮ ಮಕ್ಕಳನ್ನು ಟಿಕ್​ಟಾಕ್​ ಚಟದಿಂದ ಈಗಲೇ ಹೊರತನ್ನಿ, ಇಲ್ಲದಿದ್ದರೆ ಏನಾಗುತ್ತೆ ನೋಡಿ..

ಶುಕ್ರವಾರ ಸಂಜೆ 5.30ರಿಂದ 6 ಗಂಟೆ ನಡುವೆ ಈ ಮೂವರು ಟಿಕ್‌ಟಾಕ್‌ ವಿಡಿಯೋ ಮಾಡಲು ರೈಲ್ವೆ ಹಳಿ ಮೇಲೆ ಹೋಗಿದ್ದರು. ಹಳಿ ಮೇಲೆ ನಿಂತು, ರೈಲು ಬರುವ ಸಂದರ್ಭದಲ್ಲಿ ಹೊರಗೆ ಜಿಗಿಯಬೇಕು ಎಂಬ ಪ್ಲಾನ್‌ ಮಾಡಿದ್ದರು. ಕೋಲಾರ-ಬೆಂಗಳೂರು ಪ್ಯಾಸೆಂಜರ್‌ ರೈಲು ಯಲಹಂಕ ನಿಲ್ದಾಣದಿಂದ ನಗರದ ಕಡೆ ಬರುತ್ತಿತ್ತು. ಯುವಕರು ಹೊರಗೆ ಜಂಪ್‌ ಹೊಡೆಯುವಷ್ಟರಲ್ಲಿ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯುವಕರು ಹಳಿಯಿಂದ ಸಾಕಷ್ಟು ದೂರಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬನಿಗೆ ಗಂಭೀರ ಗಾಯಗಳಾಗಿವೆ.

ಕಣ್ಣೆದುರೇ ನಡೆಯಿತು ಘಟನೆ;

Also read: ಟಿಕ್‍ಟಾಕ್ ಹುಚ್ಚಿಗೆ ಗೃಹಿಣಿ ಬಲಿ; ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ..

ಮೃತ ಯುವಕರು ಈಗಾಗಲೇ ಸಾಹಸ ರೀತಿಯ ಹಲವು ವೀಡಿಯೋಗಳನ್ನು ಮಾಡಿದ್ದಾರೆ. ಅದರಂತೆ ರೈಲು ಬರುವಾಗ ಅದರ ಮುಂದೆ ಓಡುವುದು ಮತ್ತು ಹಳಿಯ ಮೇಲೆ ನಿಂತು ಸ್ವಲ್ಪದರಲ್ಲೇ ತಪ್ಪಿಸಿಕೊಳ್ಳುವ ಸಿನಿಮಾ ದೃಶ್ಯಗಳಂತೆ ಸಾಹಸ ಮಾಡಲು ಹೋಗಿದ್ದಾರೆ. ಮೂವರು ಟಿಕ್‌ಟಾಕ್‌ ವಿಡಿಯೋ ಮಾಡುತ್ತಿದ್ದ ವೇಳೆ ಇನ್ನೂ ಕೆಲ ಯುವಕರು ಅಲ್ಲೇ ನಿಂತು ನೋಡುತ್ತಿದ್ದರು. ತಮ್ಮ ಕಣ್ಣೆದುರೇ ಯುವಕರು ಸಾವನ್ನಪ್ಪಿದ್ದನ್ನು ಕಂಡು ತೀವ್ರ ಆಘಾತಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೈಯ್ಯಪ್ಪನಹಳ್ಳಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.