ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ…..ಆಸಕ್ತರು ಭಾಗವಹಿಸಬಹುದಾಗಿದೆ..!!

0
705

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (ಯುಎಎಸ್)ದಲ್ಲಿ ಖಾಲಿ ಇರುವ ಫಾರ್ಮ್ ಮ್ಯಾನೇಜರ್ ಮತ್ತು ಪ್ರೋಗ್ರಾಂ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಸಂದರ್ಶನ ಕರೆಯಲಾಗಿದೆ.

ಸಂದರ್ಶನ ದಿನಾಂಕ ನವೆಂಬರ್ 13ರಂದು 11ಗಂಟೆ

ಸಂದರ್ಶನ ನೆಡೆಯುವ ವಿಳಾಸ:
ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (ಯುಎಎಸ್)

ಹುದ್ದೆಗಳ ವಿವರ:
01 ಫಾರ್ಮ್ ಮ್ಯಾನೇಜರ್ ಹಾಗೂ 01 ಪ್ರೋಗ್ರಾಂ ಅಸಿಸ್ಟೆಂಟ್ ಒಟ್ಟು ಎರಡು ಹುದ್ದೆಗಳಿಗೆ ವಾಕ್ ಇನ್ ಸಂದರ್ಶನಕ್ಕೆ ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದು.

ವಿದ್ಯಾರ್ಹತೆ:
* ಫಾರ್ಮ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಅಥವಾ ತೋಟಗಾರಿಕೆ ಪದವಿ ಪಡೆದಿರಬೇಕು.
* ಪ್ರೋಗ್ರಾಂ ಅಸಿಸ್ಟೆಂಟ್ ಹುದ್ದೆ: ಬ್ಯಾಚುಲರ್ ಇನ್ ಕಂಪ್ಯೂಟರ್ ಅಪ್ಲಿಕೇಷನ್ / ಬಿ.ಎಸ್,ಸಿ ಮತ್ತು ಪಿ.ಜಿ. ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ಸ್ .

ಆಯ್ಕೆ ವಿಧಾನ: ಮೇಲೆ ತಿಳಿಸಲಾಗಿರುವ ಎರಡೂ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.