ಬೆಂಗಳೂರಿಗು ಬರಲಿವೆ ಹಕ್ಕಿಯಂತೆ ಹಾರುವ UBER ಕಂಪನಿಯ ಫ್ಲೈಯಿಂಗ್ ಕಾರ್-ಗಳು..

0
895

ಎಲ್ಲಿನೋಡಿದರು UBER , OLA ಕ್ಯಾಬ್ ಗಳದೇ ಹವಾ ಬರಿ ಮೊಬೈಲ್ App ಮೂಲಕ ಜನರಿಗೆ ಹತ್ತಿರವಾಗಿ ಸುರಕ್ಷಿತ ಪ್ರಯಾಣಕ್ಕೆ ನೇರವಾಗುತ್ತಿರುವ ಈ ಕ್ಯಾಬ್-ಗಳ ಸೇವೆ ಹೆಚ್ಚುತ್ತಿದೆ. ಕಡಿಮೆ ಹಣದಲ್ಲಿ ಗುಣಮಟ್ಟದ ಪ್ರಯಾಣಕ್ಕೆ ಜನರು ಮುಗಿಬಿದ್ದಿದ್ದಾರೆ. ಈ ಎರಡು ಕಂಪೆನಿಗಳಲ್ಲಿ UBER ಕಂಪನಿ ಒಂದು ಹೆಜ್ಜೆ ಮುಂದಿಟ್ಟು ಹಾರಾಡುವ ಕ್ಯಾಬ್ ಗಳನ್ನು ತರುತ್ತಿದೆ. ಈ ಸೇವೆ ಸದ್ಯದಲ್ಲೇ ಶುರುವಾಗಲಿದೆ.


Also read: ಬೆಂಗಳೂರಿನ ಈ ಮಾರುಕಟ್ಟೆಯಲ್ಲಿ ಕದ್ದ ಮೊಬೈಲ್-ಗಳ ವ್ಯಾಪಾರ ಜೋರ್ ಅಂತೆ; ಇಲ್ಲಿ ಸಿಗುವ ಮೊಬೈಲ್ ಖರೀದಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ.!

ಹೌದು ಸಾಧಕ-ಬಾಧಕಗಳನ್ನೆಲ್ಲ ಗಣನೆಗೆ ತೆಗೆದುಕೊಂಡಿರುವ ಉಬರ್, ಜಪಾನ್, ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಹಾರಾಟದ ಕ್ಯಾಬ್ ಸೇವೆ ಒದಗಿಸಲು ತೀರ್ಮಾನ ಕೈಗೊಂಡಿದೆ. ಈ ವಿಚಾರವನ್ನು ಟೊಕಿಯೋದಲ್ಲಿ ನಡೆದ ಮೊದಲ ಉಬರ್ ಎಲಿವೇಟ್ ಏಷ್ಯಾ ಪೆಸಿಫಿಕ್ ಎಕ್ಸ್ ಪೋನಲ್ಲಿ ಘೋಷಣೆ ಮಾಡಿದು ಗೊತ್ತೇ ಇದೆ. ಇಂಥ ಹಾರಾಟ ಸೇವೆಗೆ ಭಾರತವನ್ನು ಕೂಡ ಆಯ್ಕೆ ಮಾಡಿಕೊಂಡಿದ್ದು ಜನರಲ್ಲಿ ಸಂತಸ ತಂದಿತ್ತು ಈಗ ಆ ಸೇವೆ ಪ್ರಾರಂಬಿಸಲು ಚಿಂತನೆ ನಡೆಸಿದ್ದು ಮೊದಲು ಅಮೆರಿಕ, ಬಳಿಕ ಇತರೆಡೆ ವಿಸ್ತರಣೆ ಮಾಡಲಿದೆ.

ಏನಿದು ಹಾರಾಡುವ ಕ್ಯಾಬ್ ಸೇವೆ?

ವಿದ್ಯುತ್‌ ಚಾಲಿತ ವಿಮಾನಗಳನ್ನು ಬಳಸಿಕೊಂಡು, ಪ್ರಯಾಣಿಕರನ್ನು ಶೀಘ್ರವಾಗಿ ತಲುಪಿಸುವ ಯೋಜನೆ ಇದಾಗಿದೆ. ಮೊಬೈಲ್‌ ಮೂಲಕ ಉಬರ್‌ ಆ್ಯಪ್‌ನಲ್ಲಿ ಕೋರಿಕೆ ಇಡುತ್ತಿದ್ದಂತೆ ಪ್ರಯಾಣಿಕರು ಇರುವ ಎತ್ತರದ ಕಟ್ಟಡ, ಬಹುಮಹಡಿ ವಾಹನ ನಿಲುಗಡೆ ತಾಣ ಅಥವಾ ಶಾಪಿಂಗ್‌ ಕೇಂದ್ರದಿಂದಲೇ ಪಿಕಪ್‌ ಮಾಡಲಾಗುತ್ತದೆ. 4 ಆಸನಗಳನ್ನು ಹೊಂದಿರುವ ವಿಮಾನಗಳು ಇವಾಗಿದ್ದು, ನೆಲಮಟ್ಟದಿಂದ 1000ರಿಂದ 2000 ಅಡಿ ಎತ್ತರದಲ್ಲಿ ಹಾರಾಡುತ್ತವೆ. ಪ್ರಯಾಣ ದರ ಈಗ ಇರುವ ಟ್ಯಾಕ್ಸಿ ದರಕ್ಕಿಂತ ಕೇವಲ ಮೂರನೇ ಒಂದರಷ್ಟುಅಧಿಕವಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


Also read: ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ; 2019 ರ ಬಜೆಟ್​ನಲ್ಲಿ ರೈತರಿಗೆ ಸಿಗಲಿದೆ ಬಂಪರ್ ಕೊಡುಗೆ..

ಮುಖ್ಯ ಉದ್ದೇಶವೇನು?

ಮುಂಬೈ, ದೆಹಲಿ ಹಾಗೂ ಬೆಂಗಳೂರು ಸೇರಿದಂತೆ ಜಗತ್ತಿನ ಬಹಳ ಕಿರಿದಾದ ನಗರಗಳಲ್ಲಿ ಕೆಲವೇ ಕಿಲೋಮೀಟರ್ ಸಾಗಲು ಸಹ ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಇಂಥ ಸಮಸ್ಯೆಯಿಂದ ಹೊರಬರುವುದಕ್ಕೆ ಉಬರ್ ಏರ್ ಸೇವೆ ಬಹಳ ಸಹಾಯಕ ಆಗಿರುತ್ತದೆ. ಈ ಸೇವೆಯನ್ನು ಮುಂದಿನ ಐದು ವರ್ಷಗಳಲ್ಲಿ ಈಗ ಅಂತಿಮಗೊಳಿಸಿರುವ ದೇಶದ ಉಬರ್ ಬಳಕೆದಾರರು ಬೇಡಿಕೆ ಆಧಾರದಲ್ಲಿ ಫ್ಲೈಯಿಂಗ್ ಕಾರ್ ನಲ್ಲಿ ಸಂಚರಿಸಬಹುದು. ಈ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಾಹನ ತಯಾರಕರು, ರಿಯಲ್ ಎಸ್ಟೇಟ್ ಉದ್ಯಮದವರು ಹಾಗೂ ತಾಂತ್ರಿಕ ಪರಿಣತರ ಜತೆಗೆ ಉಬರ್ ಮಾತುಕತೆ ನಡೆಸಿದೆ.


Also read: ಚಿಕ್ಕ ಮಕ್ಕಳಿಗೆ ಹಲ್ಲು ಹುಳುಕಾಗಿ ನರಕಯಾತನೆ ಪಡುವುದನ್ನ ತಪ್ಪಿಸಬೇಕೆಂದರೆ ಇದನ್ನು ತಪ್ಪದೇ ಓದಿ!

ದುಬಾರಿಯಾಗುತ್ತ ಪ್ರಯಾಣ ದರ?

ಶ್ರೀಮಂತರು ಮಾತ್ರವೇ ಅಲ್ಲದೇ ಎಲ್ಲರೂ ಪ್ರಯಾಣಿಸುವಂತೆ ಮಾಡಲು ಉಬರ್‌ ಪ್ರಯತ್ನಿಸುತ್ತಿದೆ. ಬುಕ್‌ ಮಾಡಿದ, ಐದೇ ನಿಮಿಷದಲ್ಲಿ ಉಬರ್‌ ಟ್ಯಾಕ್ಸಿ ಹತ್ತಬಹುದಾಗಿರುತ್ತದೆ. 40 ಕಿ.ಮೀ. ದೂರದ ಟ್ಯಾಕ್ಸಿ ಪ್ರಯಾಣಕ್ಕೆ ಉಬರ್‌ನಲ್ಲಿ 4200 ರು. ಆಗುತ್ತಿದೆ ಎಂದಾದಲ್ಲಿ ‘ಹಾರುವ ಟ್ಯಾಕ್ಸಿ’ಯಲ್ಲಿ 6400 ರು. ಪಾವತಿಸಬೇಕಾಗುತ್ತದೆ. ಮತ್ತು ಗಂಟೆಗೆ 240ರಿಂದ 320 ಕಿ.ಮೀ. ವೇಗದಲ್ಲಿ ಈ ವಿಮಾನಗಳು ಸಂಚರಿಸುತ್ತವೆ. ಒಮ್ಮೆ ಚಾಜ್‌ರ್‍ ಮಾಡಿದರೆ ಸುಮಾರು 100 ಕಿ.ಮೀ. ದೂರ ಕ್ರಮಿಸಬಹುದು. ಆ ಬಳಿಕ ಬೇರೆ ಬ್ಯಾಟರಿ ಬಳಸಿ ಪ್ರಯಾಣ ಮುಂದುವರಿಸಬಹುದು. 2023ಕ್ಕೆ ಅಮೆರಿಕದ ಲಾಸ್‌ ಏಂಜಲೀಸ್‌ ಹಾಗೂ ಡಲ್ಲಾಸ್‌ನಲ್ಲಿ ಈ ಸೇವೆ ಆರಂಭವಾಗಲಿದೆ. ಆನಂತರ ಇತರೆಡೆಗೆ ವಿಸ್ತರಿಸಲಾಗುತ್ತದೆ. ಹಾರುವ ಟ್ಯಾಕ್ಸಿಗಳ ವಿನ್ಯಾಸ ಕುರಿತಂತೆ ಐದು ಕಂಪನಿಗಳ ಜತೆ ಈಗಾಗಲೇ ಉಬರ್‌ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿ ತಿಳಿಸಿದೆ.