ಉದಯ್ ಶವ ಪತ್ತೆ: ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ

0
1589

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ನಟ ಉದಯ್ ಶವ ಎರಡು ದಿನಗಳ ಶೋಧ ಕಾರ್ಯ ನಂತರ ಪತ್ತೆಯಾಗಿದೆ. ಮತ್ತೊಬ್ಬ ನಟ ಅನಿಲ್ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.

ಬೆಂಗಳೂರು ಹೊರವಲಯದ ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ೨.೩೦ರ ಸುಮಾರಿಗೆ ನಡೆದ ಚಿತ್ರೀಕರಣದ ವೇಳೆ ಹೆಲಿಕಾಫ್ಟರ್ ನಿಂದ ಜಿಗಿಯುವ ಸಾಹಸದ ವೇಳೆ ಮೃತಪಟ್ಟಿದ್ದರು.
ಬುಧವಾರ ಮಧ್ಯಾಹ್ನ ಉದಯ್ ಅವರ ಶವ ಮುಳುಗಿದ ಜಾಗದಲ್ಲೇ ತೇಲಿದ್ದು ಕಂಡು ಬಂದಿತು. ಶವ ಊದಿಕೊಂಡಿದ್ದು, ಕೆರೆ ಬಳಿ ನಿರ್ಮಿಸಲಾಗಿರುವ ಪೆಂಡಾಲ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಲಾಗುವುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನಿಂದ ಆಗಮಿಸಿರುವ ಮುಳುಗುವ ತಜ್ಞರು ಇದೀಗ ಉದಯ್ ಶವ ದೊರೆತ ಜಾಗದಲ್ಲೇ ಅನಿಲ್ ಅವರ ಶವಕ್ಕಾಗಿ ಹುಟುಕಾಟ ಆರಂಭಿಸಿದ್ದಾರೆ.

ಇದೇ ವೇಳೆ ಕಳೆದೆರಡು ದಿನಗಳಿಂದ ಮಾಧ್ಯಮಗಳ ಕೈಗೆ ಸಿಗದ ನಟ ದುನಿಯಾ ವಿಜಿ, ಕ್ಷಮೆಯಾಚಿಸಿದ್ದಾರೆ.
ಎರಡು ದಿನಗಳಿಂದ ಮಾತನಾಡುವ ಸ್ಥಿತಿಯಲ್ಲೇ ಇರಲಿಲ್ಲ. ಹಾಗಾಗಿ ಘಟನೆ ಬಗ್ಗೆ ಪ್ರತಿಕ್ರಿಯಲಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಅವರನ್ನು ಬಂಧಿಸಿರುವ ತಾವರೆಕೆರೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.