ಯಾವುದೇ ವಿಷಯದಲ್ಲಿ ಪದವಿ ಪಡೆದವರಿಗೆ ಯುನೈಟೆಡ್ ಇಂಡಿಯಾದಲ್ಲಿ ಉದ್ಯೋಗ ಅವಕಾಶ..!!

0
1077

ಭಾರತ ಸರ್ಕಾರದ ಸಂಪೂರ್ಣ ಅಧೀನದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಪ್ರಮುಖ ವಿಮಾ ಕಂಪನಿ ‘ಯುನೈಟೆಡ್ ಇಂಡಿಯಾ’ ಇನ್ಶೂರೆನ್ಸ್ ಕಂಪನಿ ಲಿಮಿಟಡ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಆನ್-ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: uiic.co.in

ದೇಶಾದ್ಯಂತ ಒಟ್ಟು 696 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಕರ್ನಾಟಕದಲ್ಲಿ 61 ಹುದ್ದೆಗಳು ಖಾಲಿ ಇವೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 28 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ
ಹುದ್ದೆಯ ಹೆಸರು: ಅಸಿಸ್ಟೆಂಟ್
ಒಟ್ಟು ಹುದ್ದೆಗಳು 696
ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು: 61 (ಸಾಮಾನ್ಯ-35, ಎಸ್.ಸಿ-9, ಎಸ್.ಟಿ-5, ಒಬಿಸಿ-12)

ವಿದ್ಯಾರ್ಹತೆ
ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಕರ್ನಾಟಕಕ್ಕೆ ಮೀಸಲಿರಿಸಿದ ಹುದ್ದೆಗಳಿಗೆ ಕನ್ನಡ ಬಲ್ಲವರು ಮಾತ್ರ ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ:
ರೂ.14435-840 (1)-15275-915 (2)-17105-1030 (5)-22255-1195 (2)-24645-1455 (3)-29010-1510 (2)-32030-1610(5)/-

ವಯೋಮಿತಿ
ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ
ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು 2 ಹಂತದ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಿಲಿಮ್ಸ್ 100 ಅಂಕಗಳಿಗೆ ಮತ್ತು ಮೇನ್ಸ್ ಪರೀಕ್ಷೆಯು 250 ಅಂಕಗಳಿಗೆ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಭಾಷಾ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕದ ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬೀದರ್, ಧಾರವಾಡ, ಹಾಸನ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ

ಪರೀಕ್ಷಾ ಕರೆಪತ್ರ
ಅಭ್ಯರ್ಥಿಗಳು ಪರೀಕ್ಷಾ ಕರೆ ಪತ್ರವನ್ನು ಪರೀಕ್ಷೆ ನಡೆಯಲಿರುವ ಹತ್ತು ದಿನದ ಮುಂಚಿತವಾಗಿ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು. ಪರೀಕ್ಷೆಯ ಸಮಯ ಮತ್ತು ಅಭ್ಯರ್ಥಿಗಳು ಹಾಜರಾಗಬೇಕಾದ ಸ್ಥಳವನ್ನು ಪರೀಕ್ಷಾ ಕರೆ ಪತ್ರದಲ್ಲಿ ನಮೂದಿಸಲಾಗಿರುತ್ತದೆ.

ಅರ್ಜಿ ಶುಲ್ಕ
ಎಸ್.ಸಿ/ಎಸ್.ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-08-2017