ವಾಹನ ಚಲಾಯಿಸುವ ಮುನ್ನ ಈ ಮಾಹಿತಿ ನೋಡಿ; ರೂಲ್ಸ್ ಉಲ್ಲಂಘನೆ ಮಾಡಿದ ಬೈಕಿಗೆ 24 ಆಟೋಗೆ 32 ಸಾವಿರ ರೂ. ದಂಡ ಬಿತ್ತು.!

0
283

ಕೇಂದ್ರ ಸರ್ಕಾರ ಸಂಚಾರ ನಿಯಮಕ್ಕೆ ಹೊಸ ಕಾಯ್ದೆಯನ್ನು ಜಾರಿಗೆ ತಂದಿದ್ದು ಇದೆ ತಿಂಗಳ 1 ರಿಂದ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದವರಿಗೆ ಭಾರಿ ದಂಡ ಬಿಳ್ಳಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು, ಅದರಂತೆ ನಿಯಮ ಉಲ್ಲಂಘನೆ ಮಾಡಿದ ಬೈಕ್ ಮತ್ತು ಆಟೋ ಸವಾರರಿಗೆ ಟ್ರಾಪಿಕ್ ಪೊಲೀಸ್ ವಿಧಿಸಿದ ದಂಡ ಕುರಿತು ಮಾಹಿತಿ ಹರಿದಾಡುತ್ತಿದ್ದು. ಅದನ್ನು ಕೇಳಿದರೆ ಒಂದು ನಿಮಿಷ ಹೃದಯ ನಿಂತೇ ಹೋಗುವ ರೀತಿಯಲ್ಲಿದೆ. ಹಾಗಾದ್ರೆ ವಾಹನ ಸವಾರರು ಮಾಡಿರುವ ಉಲ್ಲಘನೆ ಆದರು ಏನು? ಪೊಲೀಸರು ವಾಹನ ಸವಾರರಿಗೆ ಹಾಕಿದ ದಂಡವಾದ್ರು ಎಷ್ಟು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಬೈಕ್ ಸವಾರರಿಗೆ 23 ಸಾವಿರ ದಂಡ?

ಹೌದು ಬೈಕ್ ಸವಾರ ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿ ಸೆಪ್ಟೆಂಬರ್‌ 1ರಿಂದ ಜಾರಿಯಾದ ಬಳಿಕ ದಾಖಲೆಗಳಿಲ್ಲದೆಯೇ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿಯ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ. ಮೂಲಗಳ ಪ್ರಕಾರ ಸ್ಕೂಟಿ ಚಾಲಕ ಹೆಲ್ಮೆಟ್‌ ಇಲ್ಲದೆಯೇ ವಾಹನ ಚಲಾಯಿಸಿದ್ದು ಹಾಗೂ ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದಿನೇಶ್‌ ಮದನ್‌ ಎಂಬುವವರಿಗೆ ಗುರುಗ್ರಾಮ ಸಂಚಾರ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ದಿನೇಶ್, ನನ್ನ ಸ್ಕೂಟಿಯ ಮೌಲ್ಯ 15 ಸಾವಿರ ರೂ. ದಂಡವಾಗಿ 23 ಸಾವಿರ ರೂ. ಪಾವತಿಸೋದು ಹೇಗೆ ಸಾಧ್ಯ. ದಿನೇಶ್ ಬಳಿ ಲೈಸೆನ್ಸ್, ಆರ್ ಸಿ ಇರಲಿಲ್ಲ. ಎಮಿಸನ್ ಟೆಸ್ಟ್, ವಿಮೆ ಸಹ ಮಾಡಿಸದೇ ಹೆಲ್ಮೆಟ್ ಧರಿಸದೇ ಸ್ಕೂಟಿ ಚಲಾಯಿಸುತ್ತಿದ್ದರು. ಅದರಂತೆ ಇನ್ನೊಬ್ಬ ಗುರುಗ್ರಾಮದ ಜೈಕಂಪುರ ವ್ಯಾಪ್ತಿಯಲ್ಲಿ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ರಾಜೀವ್ ಚೌಕ್ ಗೆ ತೆರಳುತ್ತಿದ್ದರು. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ಒಟ್ಟು 24 ಸಾವಿರ ರೂ. ದಂಡದ ಚಲನ್ ನೀಡಿದ್ದಾರೆ. ಸಹ ಸವಾರ ಹೆಲ್ಮೆಟ್ ಧರಿಸದಕ್ಕೆ ಆತನಿಗೂ 1 ಸಾವಿರ ರೂ. ದಂಡ ಹಾಕಿದ್ದಾರೆ.

ಆಟೋ ಚಾಲಕನಿಗೆ 32, 500 ರೂ ದಂಡ?

ಆಟೋ ಚಾಲಕನಿಗೆ 32, 500 ರೂ ದಂಡ ವಿಧಿಸಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಆಟೋ ಚಾಲಕ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದೇ ಕಾರಣಕ್ಕೆ ಆತನ ಎಲ್ಲ ಪ್ರಕರಣಗಳಿಗೆ ಒಟ್ಟು 32,500 ಸಾವಿರ ರೂ ದಂಡ ವಿಧಿಸಲಾಗಿದೆ. ಪೂರ್ವ ದೆಹಲಿಯ ಗೀತಾ ಕಾಲೋನಿ ನಿವಾಸಿ ಮೊಹಮದ್ ಮುಸ್ತಾಕಿನ್ ಎಂಬ ಚಾಲಕನಿಗೆ ಪೊಲೀಸರು 32,500 ಸಾವಿರ ರೂ ದಂಡ ವಿಧಿಸಿದ್ದಾರೆ. ಪೊಲೀಸರು ಮೊಹಮದ್ ಮುಸ್ತಾಕಿನ್ ರನ್ನು ನಿಲ್ಲಿಸಿದಾಗ ಅವರ ಬಳಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಪರವಾನಿಗೆ, ನೋಂದಣಿ, ಅತಿ ವೇಗ, ವಿಮೆ ಮತ್ತು ಎಮಿಷನ್ ಟೆಸ್ಟ್ ಮಾಡಿಸದಕ್ಕೆ ಒಟ್ಟು 32 ಸಾವಿರ ರೂ. ದಂಡ ಹಾಕಲಾಗಿದೆ.

ಈ ಎಲ್ಲ ದಂಡ ವಾಹನದ ಮೌಲ್ಯಕ್ಕಿಂತ ಹೆಚ್ಚಿದೆ, ದಂಡ ಕಟ್ಟಲು ವಾಹನ ಮಾರಿದರು ಕೂಡ ದಂಡ ಕಟ್ಟಲು ಸಾಧ್ಯವಾಗುವುದಿಲ್ಲ ಎನ್ನುವುದು ಚಾಲಕರ ವಾದವಾಗಿದೆ. ಸರ್ಕಾರ ಮಾಡಿರುವ ನಿಯಮ ಒಂದು ರೀತಿಯಲ್ಲಿ ಒಳ್ಳೆಯದು ಆದರು ಬಡ ಚಾಲಕರಿಗೆ ಭಾರಿ ಕಿರೀಕಿರಿ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆಯಾಗಿ ವಾಹನಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಇಟ್ಟಕೊಂಡು ಸವಾರಿ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ವಾಹನ ಮೌಲ್ಯಕ್ಕಿಂತ ಹೆಚ್ಚಿನ ದಂಡ ಕಟ್ಟಬೇಕಾಗುತ್ತೆ.

Also read: ಮಾಜಿ ಸಚಿವ ಡಿಕೆ ಶಿವಕುಮಾರ್‌ ಬಂಧನದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹತ್ತಿದ ಹೋರಾಟದ ಬೆಂಕಿ; ಮುಂದೇನಾಗುತ್ತೆ??