ಅಂಜೂರ ತಿನ್ನೋದ್ರಿಂದ ಇಷ್ಟೊಂದೆಲ್ಲ ವಿಟಮಿನ್-ಗಳು ಸಿಗುತ್ತೆ ಅಂತ ಗೊತ್ತಾದ್ರೆ, ದುಡ್ಡು ಜಾಸ್ತಿಯಾದ್ರು ಕೊಟ್ಟು ದಿನವೂ ತಿನ್ನೋಕ್ಕೆ ಶುರು ಮಾಡ್ತೀರ!!

0
2837

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ,ತಾಮ್ರ ಮತ್ತು ಎ,ಬಿ,ಸಿ,ಡಿ ವೈಟಮಿನ್‍ಗಳು ಹೇರಳವಾಗಿವೆ.

energy-booster-fruits--3
source: shughal.com

ಪೌಷ್ಟಿಕಾಂಶಗಳು

*ಇದೊಂದು ಪೌಷ್ಟಿಕವಾದ ಹಣ್ಣು. ಇದರಲ್ಲಿ ಎ, ಬಿ, ಸಿ ಮತ್ತು ಡಿ ಅನ್ನಾಂಗಗಳು ಇವೆ. ಮಾಂಸವನ್ನು ಬೇಗ ಕುದಿಸಲಿಕ್ಕೆ ಇದರ ಕಾಯಿಯನ್ನು ಸೇರಿಸುವರು.

*ಹಣ್ಣುಗಳಲ್ಲಿ ಅನೇಕ ಪೌಷ್ಠಿಕಾಂಶಗಳಿವೆ. ಸುಮಾರು 84ರಷ್ಟು ತಿರುಳಿರುತ್ತದೆ. ಹಣ್ಣುಗಳಲ್ಲಿ ಖನಿಜಾಂಶ ಮತ್ತು ಸಕ್ಕರೆಗಳಿರುವುದರಿಂದ ಪುಷ್ಟಿಕರವಾದ ಆಹಾರವೆನಿಸಿದ್ದು ಬೇಡಿಕೆ ಹೆಚ್ಚು.

*ಕಬ್ಬಿಣದ ಮತ್ತು ತಾಮ್ರದ ಅಂಶ ಇತರ ಹಣ್ಣುಗಳಲ್ಲಿರುವುದಕ್ಕಿಂತಲೂ ಇವುಗಳಲ್ಲಿ ಹೆಚ್ಚಾಗಿವೆ. ಸತುವಿನ ಅಂಶವೂ ಸ್ವಲ್ಪ ಇರುತ್ತದೆ. ಎ ಮತ್ತು ಸಿ ಅನ್ನಾಂಗಗಳು ಹೆಚ್ಚು ಪ್ರಮಾಣದಲ್ಲೂ ಬಿ ಮತ್ತು ಡಿ ಅನ್ನಾಂಗಗಳು ಕಡಿಮೆ ಪ್ರಮಾಣದಲ್ಲೂ ಇರುತ್ತವೆ.

source: yogarose.net

*ಇವುಗಳಲ್ಲದೆ ಸಿಟ್ರಿಕ್ ಮತ್ತು ಅಸಿಟಿಕ್ ಆಮ್ಲಗಳೂ ಇರುತ್ತವೆ.

*ಸಂಸ್ಕರಿಸದ ಅಂಜೂರ Nutritional value per 100 g (3.5 oz)

*ಆಹಾರ ಚೈತನ್ಯ –  310 kJ (74 kcal)

*ಶರ್ಕರ ಪಿಷ್ಟ – 19.18 g

*ಸಕ್ಕರೆ – 16.26 g

*ಆಹಾರ ನಾರು – 2.9 g

*ಕೊಬ್ಬು – 0.30 g

*Protein – 0.75 g

*Thiamine (vit. B1) – 0.060 mg (5%)

*Riboflavin (vit. B2) – 0.050 mg (4%)

*Niacin (vit. B3) – 0.400 mg (3%)

*Pantothenic acid (B5) – 0.300 mg (6%)

*Vitamin B6 – 0.113 mg (9%)

*Folate (vit. B9) – 6 μg (2%)

*Choline – 4.7 mg (1%)

*Vitamin C – 2.0 mg (2%)

*ವಿಟಮಿನ್ ಕೆ – 4.7 μg (4%)

*ಕ್ಯಾಲ್ಸಿಯಂ – 35 mg (4%)

*ಕಬ್ಬಿಣ ಸತ್ವ – 0.37 mg (3%)

*ಮೆಗ್ನೇಸಿಯಂ – 17 mg (5%)

*ಮ್ಯಾಂಗನೀಸ್ – 0.128 mg (6%)

*ರಂಜಕ – 14 mg (2%)

*ಪೊಟಾಸಿಯಂ – 242 mg (5%)

*ಸೋಡಿಯಂ – 1 mg (0%)

*ಸತು – 0.15 mg (2%)

*ಔಷಧೀಯ ಗುಣಗಳು*

*ಇದೊಂದು ಔಷಧೀಯ ವಸ್ತುವೂ ಹೌದು ಅಂಜೂರದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

*ಹಣ್ಣು ಮೂತ್ರಸ್ರಾವಕ್ಕೆ ಉತ್ತೇಜನಕಾರಿ. ಹೆಚ್ಚುಕಾಲ ಬಳಸಿದರೆ ಆಹಾರದ ಕೊರತೆಯಿಂದ ರಕ್ತಹೀನತೆಯುಂಟಾಗುವುದನ್ನು ತಪ್ಪಿಸುತ್ತದೆ.

*ಫಸಲು ಬಂದಮೇಲೆ ಎಲೆಗಳನ್ನು ಕಿತ್ತು ದನಗಳಿಗೆ ಹಾಕುವುದುಂಟು. ಗಿಣ್ಣು ಉತ್ಪನ್ನದಲ್ಲಿ ಅಂಜೂರದ ಹಾಲನ್ನು ಹೆಪ್ಪುಗಟ್ಟಿಸುವುದಕ್ಕೆ ಉಪಯೋಗಿಸುತ್ತಾರೆ.

*ಹಾಲು ಕರುಳಿನಲ್ಲಿರುವ ಜಂತುಹುಳುಗಳನ್ನು ನಾಶಮಾಡುತ್ತದೆ. ಹಣ್ಣನ್ನು ಪೋಲ್ಟೀಸುಮಾಡಿ ಕೀವು ಬರುವ ಗಾಯಕ್ಕೆ ಕಟ್ಟುತ್ತಾರೆ. ಚರ್ಮದಮೇಲೆ ಹಾಲು ಬಿದ್ದರೆ ಗಂದೆ ಮತ್ತು ಗುಳ್ಳೆಗಳಾಗುತ್ತದೆ. ಆಲ್ಕೋಹಾಲ್ ನೀರಿನಲ್ಲಿ ಇವು ಕರಗುತ್ತವೆ.