ಯುನೆಸ್ಕೊ ಕಾರ್ಯ ವೈಕರಿಯೇನು?

0
927

ಯುನೆಸ್ಕೊ

ಯುನೆಸ್ಕೊದ ವಿಶ್ವಪಾರಂಪರಿಕ ಸ್ಥಳಗಳ ಪಟ್ಟಿಗೆ ಭಾರತ ಚಂಡೀಗಢ, ಕಾಂಚನಜುಂಗ ನ್ಯಾಷನಲ್ ಪಾರ್ಕ್ ಸೇರ್ಪಡೆ ಯಾಗಿದೆ. ಏನಿದು ಯುನೆಸ್ಕೊ, ಇದರ ಕಾರ್ಯವೈಖರಿ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಏನಿದು ಯುನೆಸ್ಕೊ: ಯುನೆಸ್ಕೊ ಎಂದರೆ ವಿಶ್ವಸಂಸ್ಥೆಉ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ.

ಸ್ಥಾಪನೆಯಾಗಿದ್ದು ಯಾವಾಗ?

ಯುನೆಸ್ಕೊ ಸ್ಥಾಪನೆ ಕುರಿತಂತೆ 1945 ನವೆಂಬರ್ 16ರಂದು ಲಂಡನ್ ನಲ್ಲಿ ಸಹಿ ಹಾಕಲಾಯಿತು. 1946 ನವೆಂಬರ್ 4ರಿಂದ ಕಾರ್ಯಾರಂಭ ಮಾಡಿತು. ಯುನೆಸ್ಕೊದ ಪ್ರಧಾನ ಕಛೇರಿ ಫ್ರಾನ್ಸ್’ನ ರಾಜಧಾನಿ ಪ್ಯಾರಿಸ್’ನ ಪ್ಲೇಸ್ ಡೆ ಫಾಂಟೆನಾಯ್’ನಲ್ಲಿದೆ. 195 ದೇಶಗಳು ಯುನೆಸ್ಕೊದ ಸದಸ್ಯತ್ವ ಹೊಂದಿವೆ.

ಕಾರ್ಯ ವೈಕರಿಯೇನು?

ಯುನೆಸ್ಕೊ ಪ್ರತಿನಿಧಿಗಳು ಪ್ರತಿ ವರ್ಷ ಸಭೆ ಸೇರಿ, ಅಳಿವಿನಂಚಿನಲ್ಲಿರುವ ಸಂರಕ್ಷಿಸಬೇಕಾಗಿರುವ ಐತಿಹಾಸಿಕ ಮಹತ್ವಹುಳ್ಳ ಸ್ಥಳಗಳ ಬಗ್ಗೆ ವರದಿ ತರಿಸಿಕೊಂಡು, ಅವುಗಳನ್ನು ಪಟ್ಟಿಗೆ ಸೇರಿಸಿವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರತಿ ವರ್ಷ ಪಟ್ಟಿಯಲ್ಲಿರುವ ಸ್ಥಳಗಳಿಗೆ 4 ಮಿಲಿಯನ್ ಎಂದರೆ 40 ಲಕ್ಷ ಡಾಲರ್ ಒದಗಿಸಲಾಗುತ್ತದೆ. (ಹೆಚ್ಚು ಕಡಿಮೆ 20 ಕೋಟಿ ರೂಪಾಯಿ). ಈ ಫಂಡ್ ಬಿಡುಗಡೆಯಾಗಬೇಕಾದರೆ ಸ್ಥಳೀಯ ಸರಕಾರ, ಖಾಸಗಿ ದಾನಿಗಳು ಕೂಡ ಕೊಡಬೇಕು. ಇಲ್ಲದಿದ್ದರೆಇಲ್ಲ. ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಯುನೆಸ್ಕೊನ ಸೂಚನೆಯಂತೆಯೇ ಎಲ್ಲ ಅಭಿವೃದ್ಧಿ ಅಥವಾ ಸಂರಕ್ಷಾಣ ಕೆಲಸಗಳು ನಡೆಯಬೇಕು.

ವಿಶ್ವ ಪರಂಪರೆ ಎಂದರೇನು?

ಮನುಕುಲಕ್ಕೆ ಮಹೋನ್ನತ ಸಾರ್ವತ್ರಿಕ ಮೌಲ್ಯವನ್ನು ತಂದುಕೊಟ್ಟು ಭೂಮಿ ಮೇಲಿನ ಐತಿಹಾಸಿಕ ಹಿನ್ನಲೆ ಹೊಂದಿರುವ. ವೈವಿದ್ಯಮಯ ಮತ್ತು ವೈಶಿಷ್ಟ್ಯತೆಯ ಸ್ಥಳಗಳನ್ನು ವಿಶ್ವಪರಂಪರೆ ತಾಣಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಿಡಬೇಕಾದ ಉದ್ದೇಶದಿಂದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಕೊಳ್ಳಲಾಗಿದೆ.

ಭಾರತದ ಸ್ಥಳಗಳು

ನೈಸರ್ಗಿಕ ತಾಣಗಳ ಪಟ್ಟಿಯಲ್ಲಿ ಅಸ್ಸಾಂನ ಕಾಜಿರಂಗ, ರಾಜಸ್ಥಾನದ ಕಿಯೊಲಾಡಿಯೊ ಘಾನ, ಅಸ್ಸಾಂನ ಮಾನಸ ವನ್ಯಜೀವಿ ಅರಣ್ಯಧಾಮ, ಉತ್ತರಖಂಡದ ನಂದಾದೇವಿ ನ್ಯಾಷನಲ್ ಪಾರ್ಕ್, ಕರ್ನಾಟಕ, ಮಹಾರಾಷ್ಟ್ರ ಗೋವಾ, ತಮಿಳುನಾಡು ಮತ್ತು ಕೇರಳದ ಪಶ್ಚಿಮ ಘಟ್ಟಗಳ, ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾಕ್, ಸಾಂಸ್ಕೃತಿಕ ತಾಣಗಳ ಪಟ್ಟಿಯಲ್ಲಿ ಆಗ್ರಾ ಕೋರ್ಟ್, ಅಜಂತಾ ಗುಹೆಗಳ, ಸಾಂಚಿಯ ಬೌದ್ಧ ಸ್ಮಾರಕಗಳು, ಛತ್ರಪತಿ ಶಿವಾಜಿ ಟರ್ಮಿನಸ್, ಗೋವಾದ ಚರ್ಚ್ ಗಳು, ಎಲಿಫೆಂಟ್, ಎಲ್ಲೋರ ಗುಹೆಗಳು, ಫತೇಪುರ ಸಿಕ್ರಿ, ಗ್ರೆಟ್ ಲೀವಿಂಗ್ ಚೋಳ ದೇವಾಲಯ, ಮಹಾಬಲಿಪುರಂ, ಕರ್ನಾಟಕದ ಹಂಪಿ, ಪಟ್ಟದಕಲ್ಲು, ರಾಜಸ್ಥಾನದ ಕೋಟೆಗಳು, ಹುಮಾಯೂನ್ ಗೋರಿ, ಕುತಾಬ್ ಮಿನಾರ್, ಕೆಂಪು ಕೋಟೆ, ಕೊನಾರ್ಕದ ಸೂರ್ಯ ದೇಗುಲ, ತಾಜ್ ಮಹಲ್, ಜಂತರ್ ಮಂತರ್ ಸೇರಿವೆ.