ಚೀನಿಯರ ವಿರುದ್ಧ ಪರಮವೀರ ಸುಬೇದಾರ್ ಜೋಗಿಂದರ್ ಸಿಂಗ್-ರವರ ಸಾಹಸ ಶೌರ್ಯದ ಕಥೆ ಕೇಳಿ, ನಮ್ಮ ಸೇನೆ ನಮಗಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ಇನ್ನೂ ಗೌರವ ಹೆಚ್ಚುತ್ತೆ!!

0
1892

ಭಾರತೀಯ ಸೇನೆ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸ್ವ-ಇಚ್ಛೆಯಿಂದ ಕೆಲಸ ಮಾಡುವ ಸೇನೆಯಾಗಿದೆ, ನಮ್ಮ ಸೈನಿಕರನ್ನು ವಿಷ್ವದ್ಲಲಿಯೇ ಅತ್ಯಂತ ಧೈರ್ಯಶಾಲಿ ಹಾಗು ಕ್ರಿಯಾಶೀಲ ಸೈನಿಕರೆಂದು ಪರಿಗಣಿಸಲಾಗುತ್ತದೆ, ಅದಲ್ಲದೆ ಎತ್ತರದ ಮತ್ತು ಪರ್ವತ ಯುದ್ಧದಲ್ಲಿ ನಮ್ಮ ಸೈನಿಕರಿಗೆ ಯಾರು ಸರಿಸಾಟಿಯಿಲ್ಲ ಇಂತಹ ನಮ್ಮ ಸೇನೆ ಪರಿಪೂರ್ಣವಾಗಿರೋದು ನಮ್ಮ ವೀರ ಸೈನಿಕರಿಂದ ಅವರ ತ್ಯಾಗ ಮತ್ತು ಬಲಿದಾನಗಳ ಕುರಿತು ನಾವು ಎಷ್ಟು ಹೊಗಳಿದರು ಸಾಲದು, ಇಂತಹ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ ಮತ್ತು ಸಿನೋ-ಇಂಡಿಯನ್ ಯುದ್ಧದಲ್ಲಿ ಚೀನಿ ಸೈನಿಕರಿಗೆ ನಡುಕಹುಟ್ಟಿಸಿದ ಒಬ್ಬ ಮಹಾನ್ ಯೋಧನ ಬಗ್ಗೆ ನಾವು ಈ ದಿನ ತಿಳಿಯೋಣ.

Also read: ನಮ್ಮ ಸೇನೆಯ ಈ ೧೨ ಸತ್ಯ ಸಂಗತಿಗಳನ್ನು ತಿಳಿದರೆ ನೀವು ಅವರನ್ನು ಇನ್ನೂ ಹೆಚ್ಚು ಗೌರವಿಸುತ್ತೀರ.

ಅಷ್ಟಕ್ಕೂ ಯಾರು ಆ ಮಹಾನ್ ಯೋಧ ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ, “ಸುಬೇದಾರ್ ಜೋಗಿಂದರ್ ಸಿಂಗ್”, ಹೌದು ಒಂದು ಸಣ್ಣ ತುಕುಡಿಯ ಸೈನಿಕರನ್ನು ಒಳಗೊಂದು ಇವರು ತಮ್ಮ ಪರಾಕ್ರಮದಿಂದ ದೊಡ್ಡ ಚೀನಿ ಸೇನೆಯನ್ನೇ ಹಿಮ್ಮೆಟ್ಟಿಸಿದ್ದ, ಇವರ ಯುದ್ಧ ಶೈಲಿಯನ್ನು ನೋಡಿ ಚೀನಿ ಸೈನಿಕರಿಗೆ ನಡುಕ ಹುಟ್ಟಿತು.

ಸುಬೇದಾರ್ ಜೋಗಿಂದರ್ ಸಿಂಗ್ ಅವರು, ಸೆಪ್ಟೆಂಬರ್ 28, 1921 ರಂದು ಪಂಜಾಬ್-ನ ಮೊಗದಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದರು. ಜೋಗಿಂದರ್ ಸಿಂಗ್ ಅವರ ಆರ್ಥಿಕ ಹಿನ್ನೆಲೆಯಿಂದಾಗಿ ಹೆಚ್ಚಿನ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇವರ ತಂದೆ ಶೇರ್ ಸಿಂಗ್ ಸಹನಾನ್ ಮತ್ತು ತಾಯಿ ಕೃಷನ್ ಕೌರ್ ತಮ್ಮ ಸ್ವಂತ ಭೂಮಿಯಲ್ಲಿ ಕೃಷಿ ಮಾಡುವ ಮೂಲಕ ಕುಟುಂಬವನ್ನು ನಡೆಸುತ್ತಿದ್ದಾರೆ. ಸೈನಿಕನಾಗಬೇಕು ಎಂದು 1936 ರಲ್ಲಿ, ತಮ್ಮ 15 ನೆಯ ಹುಟ್ಟುಹಬ್ಬದಂದು, ಅವರು ಬ್ರಿಟಿಶ್ ಸರ್ಕಾರದ ನೇತೃತ್ವದಲ್ಲಿ ಸಿಖ್ ರೆಜಿಮೆಂಟ್-ನ ಮೊದಲ ಬ್ಯಾಟಾಲಿಯನ್ ಸೇರಿದರು. ಸೈನ್ಯಕ್ಕೆ ಸೇರ್ಪಡೆಯಾದ ನಂತರ, ಅವರು ಆರ್ಮಿ ಎಜುಕೇಶನ್ ಎಕ್ಸಾಮಿನೇಷನ್ ಅನ್ನು ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿ ಅವರು ಯೂನಿಟ್ ಎಜುಕೇಶನ್ ಬೋಧಕರಾಗಿ ನೇಮಕಗೊಂಡರು.

ಚಿಕ್ಕ ವಯಸ್ಸಿನಲ್ಲೇ ಅನುಭವ ಪಡೆದ ಹಿರಿಯ ನಾಯಕ ಜೊಗಿಂದರ್ ಸಿಂಗ್, 12 ವರ್ಷಗಳ ಕಳೆಯುವಷ್ಟರಲ್ಲಿಯೇ ಅವರ ಎರಡು ಪ್ರಮುಖ ಯುದ್ಧವನ್ನಾಡಿದರು, ಬರ್ಮಾ ಫ್ರಂಟ್-ನಿಂದ 2 ನೇ ವಿಶ್ವಯುದ್ಧ ಮತ್ತು ಸ್ವತಂತದ ಸಮಯದಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಕಾಶ್ಮೀರ ಮತ್ತು ಶ್ರೀನಗರದಲ್ಲಿ ಕದನವಾಡಿದರು. ನಂತರ ಇವರಿಗೆ ಸುಬೇದಾರ್ ಹುದ್ದೆಗೆ ಮುಂಬಡ್ತಿ ನೀಡಲಾಯಿತು. ನಂತರ ಅವರು ಭಾರತೀಯ ಸೇನೆಯಲ್ಲಿ ಸುಬೇದಾರ ಆಗಿ ಮುಂದುವರಿದರು.

ಅದು ಅಕ್ಟೋಬರ್ 23, 1962 ಚೀನಾ ದಾಳಿಯಿಂದ ತವಾಂಗ್ ಪ್ರಾಂತ್ಯ ತುಂಬ ಕೆಟ್ಟ ಸ್ಥಿತಿಯಲ್ಲಿತ್ತು, ಯುದ್ಧತಂತ್ರದ ದೃಷ್ಟಿಯಿಂದ ತವಾಂಗ್ ನಾರ್ತ್-ಈಸ್ಟ್-ಫ್ರಾಂಟಿಯರ್ ಗೆ ತುಂಬ ಮುಖ್ಯವಾದ ಜಾಗ ಅದಕ್ಕಾಗಿ, ಆ ಸ್ಥಳವನ್ನು ರಕ್ಷಿಸಲು ಮತ್ತು ಚೀನಿ ದಾಳಿಯನ್ನು ಹಿಮ್ಮೆಟ್ಟಿಸಲು ಅನುಭವಿ ಸುಬೇದಾರ್ ಜೋಗಿಂದರ್ ಸಿಂಗ್ ಅವರನ್ನು ಆಯ್ಕೆ ಮಾಡಿತು, ಇದಕ್ಕಾಗಿ ಅವರಿಗೆ ಸಿಖ್ ರೆಜಿಮೆಂಟ್-ನ ಕೇವಲ 20 ಸೈನಿಕರ ತುಕುಡಿಯನ್ನು ನೀಡಿತ್ತು. ಈ ತುಕುಡಿಯನ್ನು ಮುನ್ನಡೆಸಿ ಭಯಾನಕ ಚಳಿಯಲ್ಲಿ ಯಾವ ರೀತಿಯ ಚಳಿ ನಿರೋಧಕ ಸಾಧನಗಳನ್ನು ಅಥವಾ ವಿಶಿಷ್ಟ ಬಟ್ಟೆಗಳು ಇಲ್ಲದೆಯೂ ಸ್ಥಳವನ್ನು ಪರಿಶೀಲಿಸಿ, ಅಧ್ಯಯನ ಮಾಡಿ ಯುದ್ಧ ತಂತ್ರವನ್ನು ರೂಪಿಸಿದರು.

ಅಕ್ಟೋಬರ್ 23 ರಂದು, ಚೀನಿ ಸೈನಿಕರು ಮೂರು ದೊಡ್ಡ ತುಕುಡಿಗಳಲ್ಲಿ ಬೆರೆಳೆಣಿಕಿಯ ಸುಬೇದಾರ್ ಅವರ ತುಕುಡಿಯ ಮೇಲೆ ದಾಳಿ ಮಾಡಿದರು, ಸಾಕಷ್ಟು ಮದ್ದು-ಗುಂಡುಗಳಿಲ್ಲದ ಕಾರಣ ಸುಬೇದಾರ್ ಅವರು ಶತ್ರುಗಳು ಸಮೀಪ ಬರುವ ತನಕ ಕಾದು ನಂತರ ಬಾಂಬರ್ ಮತ್ತು ಇನ್ನು ಅತ್ಯಾಧುನಿಕ ಯುದ್ದೋಪಕರಣಗಳೊಂಡ ಅವರ ಮೊದಲನೇ ತುಕುಡಿಯ ಮೇಲೆ ದಾಳಿ ಮಾಡಿದರು, ಅವರನ್ನು ಹಿಮ್ಮೆಟ್ಟಿಸಿದರು ಅರ್ಧದಷ್ಟು ಸೈನಿಕರು ವೀರಗತಿ ಹೊಂದಿದ್ದರು, ಜೋಗಿಂದರ್ ಅವರಿಗು ತೊಡೆಯಲ್ಲಿ ಗಂಭೀರವಾಗಿ ಗುಂಡು ತಗುಲಿದ್ದವು. ಸುಬೇದಾರ್ ಕೆಲ ಸೈನಿಕರನ್ನು ಗುಂಡು-ಮದ್ದುಗಳನ್ನು ತರಲು ಕಳುಹಿಸಿದರು ನಂತರ ತಮ್ಮ ಸಾವು ನಿಶ್ಚಿತವೆಂದು ಗೊತ್ತಿದರು ಶರಣಾಗದೆ, IB ಪರ್ವತವನ್ನು ಶತ್ರುಗಳಿಂದ ರಕ್ಷಿಸಲು ಸತತ 4 ಘಂಟೆಗಳ ಕಾಲ ಹೋರಾಡಿ ಏಕಾಂಗಿಯಾಗಿ 50 ಶತ್ರು ಸೈನಿಕರನ್ನು ಸದೆಬಡಿದರು ನಂತರ ಚೀನಿ ಸೈನಿಕರು ಇವರನ್ನು ಯುದ್ಧ ಖೈಧಿಯಾಗಿ ಬಂಧಿಸಿದರು. ಯುದ್ಧ ಖೈದಿಯಾದ ಸಂದರ್ಭದಲ್ಲಿ ಯುದ್ಧ ಗಾಯಗಳಿಂದ ವೀರ ಮರಣಹೊಂದಿದರು.

ಸುಬೇದಾರ್ ಜೋಗಿಂದರ್ ಸಿಂಗ್ ಅವರ ಅಪ್ರತಿಮ ಹೋರಾಟ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠೆ, ಮತ್ತು ದೇಶ ಭಕ್ತಿಯನ್ನು ಗುರುತಿಸಿ ಭಾರತ ಸರ್ಕಾರ, ಭಾರತದ ಅತ್ಯುನ್ನತ್ತ ಗೌರವದ ಪ್ರಶಸ್ತಿ-ಯಾದ “ಪರಮ ವೀರ ಚಕ್ರ” ವನ್ನು ನೀಡಿ ಗೌರವಿಸಿತು. ಇದಾದ ನಂತರ ಚೀನಿಯರು ಸಂಪೂರ್ಣ ಯುದ್ಧ ಗೌರವದೊಂದಿಗೆ ಮೇ 17, 1963 ರಂದು ಇವರ ಆಸ್ತಿಗಳನ್ನು ಇವರ ಬೆಟಾಲಿಯನ್-ಗೆ ಮರುಳಿಸಿದರು ನಂತರ ಸೇನೆ ಅದನ್ನು ಮೀರತ್-ನಲ್ಲಿರುವ ಅವರ ಪತ್ನಿಗೆ ಒಪ್ಪಿಸಿದರು. ಇವರ ಧೀರತನಾದ ಪ್ರತೀಕವಾಗಿ ಸರ್ಕಾರ, IB ಪರ್ವತದಲ್ಲಿ ಇವರ ಸ್ಮಾರಕ ಕಟ್ಟಿಸಿದ್ದಾರೆ.

ಒಟ್ಟಿನಲ್ಲಿ ನಾವು ಇಂದು ಸುರಕ್ಷಿತವಾಗಿ ಇದ್ದೇವೆ ಎಂದರೆ ಇಂತಹ ಸಾವಿರಾರು ಸೈನಿಕರ ಬಲಿದಾನವೇ ಕಾರಣ ಅದಕ್ಕೆ ಹೇಳೋದು “ಜೈ-ಜವಾನ್”, “ಜೈ-ಕಿಸಾನ್” ಎಂದು ಅಲ್ವೇ…!

Also read: ಮನೆಯಲ್ಲಿ ೪೦೦ ರೂ ಕದ್ದು ಭಾರತೀಯ ಸೇನೆ ಸೇರಿದ ವೀರ ಯೋಧ..!