ಹೇಳಿದ್ದೊಂದು, ಮಾಡಿದ್ದೊಂದು: ರಾಮ ರಾಜ್ಯದ ಭರವಸೆ ನೀಡಿ, ಗೂಂಡಾ ರಾಜ್ಯ ಮಾಡಿದರು: ರಾಹುಲ್ ಗಾಂಧಿ ಕಿಡಿ..!

0
190

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. “ಹೇಳಿದ್ದು ರಾಮರಾಜ್ಯ ಆದರೆ ಕೊಟ್ಟಿದ್ದು ಗೂಂಡಾರಾಜ್ಯ” ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ರಾಹುಲ್‌, ಪತ್ರಕರ್ತ ವಿಕ್ರಮ್‌ ಜೋಶಿ ತನ್ನ ಸೋದರನ ಮಗಳ ಮೇಲಿನ ದೌರ್ಜನ್ಯವನ್ನ ವಿರೋಧಿಸಿದಕ್ಕೆ ಕೊಲೆಯಾಗಿ ಹೋದರು. ವಿಕ್ರಮ್‌ ಅವರನ್ನ ಕಳೆದುಕೊಂಡು ತಬ್ಬಲಿಯಾಗಿರುವ ಅವರ ಕುಟುಂಬಕ್ಕೆ ನನ್ನ ಸಂತಾಪ. ರಾಮರಾಜ್ಯದ ಭರವಸೆ ಕೊಟ್ಟವರು ಈಗ ಗೂಂಡಾರಾಜ್ಯ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಮುಂದುವರೆದು ಯುಪಿ ಸರ್ಕಾರದ ವಿರುದ್ಧ ಕಿಡಿ ಕಾರಿ ರಾಹುಲ್ ಗಾಂಧಿ “ಅವರು [ಯುಪಿ ಸರ್ಕಾರ, ರಾಮ ರಾಜ್ಯ ನಿರ್ಮಾಣದ ಭರವಸೆ ನೀಡಿದ್ದರು, ಆದರೆ ಈಗ ಗುಂಡಾ ರಾಜ್ಯ ನೀಡಿದ್ದಾರೆ.” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪತ್ರಕರ್ತರೊಬ್ಬರ ಹತ್ಯೆಗೆ ಸಂಬಂಧಪಟ್ಟಂತೆ ಸಿಎಂ ಯೋಗಿ ವಿರುದ್ದ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ ರಾಹುಲ್‌, ಪತ್ರಕರ್ತ ವಿಕ್ರಮ್‌ ಜೋಶಿ ತನ್ನ ಸೋದರನ ಮಗಳ ಮೇಲಿನ ದೌರ್ಜನ್ಯವನ್ನ ವಿರೋಧಿಸಿದಕ್ಕೆ ಕೊಲೆಯಾಗಿ ಹೋದರು. ವಿಕ್ರಮ್‌ ಅವರನ್ನ ಕಳೆದುಕೊಂಡು ತಬ್ಬಲಿಯಾಗಿರುವ ಅವರ ಕುಟುಂಬಕ್ಕೆ ನನ್ನ ಸಂತಾಪ. ರಾಮರಾಜ್ಯದ ಭರವಸೆ ಕೊಟ್ಟವರು ಈಗ ಗೂಂಡಾರಾಜ್ಯ ನಡೆಸುತ್ತಿದ್ದಾರೆ ಎಂದು ಸಿಎಂ ಯೋಗಿ ವಿರುದ್ಧ ಹರಿಹಾಯ್ದಿದ್ದಾರೆ.

source:Quartz

ಅಂದ್ಹಾಗೆ, ಕಳೆದ ಸೋಮವಾರ ದುಷ್ಕರ್ಮಿಗಳ ಗುಂಪೊಂದು ಗಾಜಿಯಾಬಾದ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತ ವಿಕ್ರಮ್‌ ಜೋಷಿ ಮೇಲೆ ಗುಂಡು ಹಾರಿಸಿತ್ತು. ಇದರಿಂದ ಗಂಭೀರ ಗಾಯಗೊಂಡ್ರು. ಅವರನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಯಿತಾದ್ರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ರು. ಈ ಘಟನೆಗೆ ಸಂಬಂಧಪಟ್ಟಂತೆ 9 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಆದ್ರೂ ಕಾಂಗ್ರೆಸ್‌ ಮಾತ್ರ ತನ್ನ ಟೀಕಾಪ್ರಹಾರ ಮುಂದುವರೆಸಿದೆ.