ಚಿರಂಜೀವಿ ಸೊಸೆಯ ವೆಬ್ ಸೈಟ್ ಗೆ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿ

0
207

ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಹೊಸ ವೆಬ್ ಸೈಟ್ ವೊಂದನ್ನು ರೆಡಿ ಮಾಡಿದ್ದಾರೆ. ಆ ವೆಬ್ ಸೈಟ್ ಗೆ ರಶ್ಮಿಕಾ ಮಂದಣ್ಣ ಅವರೇ ಅತಿಥಿ ಸಂಪಾದಕಿ. ಈ ವೆಬ್ ಸೈಟ್ ಗಾಗಿ ಮಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

URLife ಎಂಬ ವೆಬ್ ಸೈಟ್ ಅನ್ನು ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನಾ ಆರಂಭಿಸಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಆರೋಗ್ಯ, ಲೈಫ್ ಸ್ಟೈಲ್, ಮಾನಸಿಕ ಮತ್ತು ದೈಹಿಕ ಹಾಗೂ ಟ್ರೆಂಡಿಂಗ್ ಇರುವಂತ ವಿಷಯಗಳನ್ನು ಈ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.

ರಶ್ಮಿಕಾ ಸದಾ ನಗುಮೊಗದ ಪಾಸಿಟಿವ್ ವೈಬ್ ಹೊಂದಿರುವ ನಟಿ. ಕೋಟ್ಯಾಂತರ ಯುವಪೀಳಿಗೆಗೆ ನೆಚ್ಚಿನ ನಟಿಯಾಗಿದ್ದಾರೆ. ಅವರು ತನ್ನ ನಗುವಿನ ಮೂಲಕವೇ ಆರೋಗ್ಯಕರ ಸಂದೇಶವನ್ನ ನೀಡುತ್ತಾರೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು, ಆ ನಗು URLife ನಲ್ಲೂ ಮುಂದುವರೆಯಲಿದೆ ಎಂದು ಹೇಳಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರಿಯೇಟಿವ್ ಆಗಿರ್ತಾರೆ. ಅಲ್ಲಿಯೂ ಫುಡ್, ಲೈಫ್ ಸ್ಟೈಲ್ ಸೇರಿದಂತೆ ಹಲವು ಬಗೆಯ ಟಿಪ್ಸ್ ಗಳನ್ನು ನೀಡುತ್ತಿರುತ್ತಾರೆ. URLife ಯಿಂದ ಇದೇ ರೀತಿಯ ಮಾಹಿತಿಗಳನ್ನು ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಹಂಚಿಕೊಳ್ಳಲಿದ್ದಾರೆ.