ನೀವು ಬಳಸುವ ಡಿಯೋಡ್ರೆಂಟ್ ನಲ್ಲಿ ವಿಷಕಾರಿ ಕೆಮಿಕಲ್ಸ್ ಇರಬಹುದು ಎಚ್ಚರ.. ಅದರ ಬದಲಾಗಿ ಮನೆಯಲ್ಲೇ ಇರುವ ಇವುಗಳನ್ನು ಬಳಸಿ.. ದಿನ ಪೂರ್ತಿ ಫ್ರೆಶ್ ಆಗಿರಿ..

0
1132

ನಾವು ಪ್ರತಿನಿತ್ಯ ಬಳಸುವ ಡಿಯೋಡ್ರೆಂಟ್ ಗಳಲ್ಲಿ ಸ್ವಲ್ಪ ಮಟ್ಟದ ವಿಷಕಾರಿ ಕೆಮಿಕಲ್ಸ್ ಇರುತ್ತವೆ.. ಈ ಕೆಮಿಕಲ್ಸ್ ನಮಗೆ ಚರ್ಮದ ಖಾಯಿಲೆ ಅಥವಾ ಬಾಡಿ ಇರಿಟೇಷನ್ ಅನ್ನು ಉನ್ಟುಮಾಡುತ್ತವೆ.. ಹಾಗೂ ನಮ್ಮ ಬಾಡಿಯ pH ಲೆವೆಲ್ ನಲ್ಲಿ ಏರಿಳಿತಗಳಾಗುತ್ತವೆ.. ಅದಕ್ಕಗಿಯೇ ಇಂತಹ ವಿಷಕಾರಿ ಕೆಮಿಕಲ್ ಯುಕ್ತ ಡಿಯೋಡ್ರೆಂಟ್ ಗಳನ್ನು ಬಿಟ್ಟು ಮನೆಯಲ್ಲೆ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ..

ನಾವುಗಳು ಮನೆಯಿಂದ ಆಚೆ ಹೋಗಬೇಕಾದರೆ ಡಿಯೋಡ್ರೆನ್ಟ್ ಅನ್ನು ಬ್ಯಾಗಿನಲ್ಲಿ ಕೊಂಡೊಯ್ಯುತ್ತೇವೆ.. ಅವುಗಳು ಒಂದು ರೀತಿಯಾಗಿ ಸ್ನೇಹಿತನ ರೀತಿಯಾಗಿವೆ.. ವಿಜ್ನಾನದ ಪ್ರಕಾರ ಡಿಯೋಡ್ರೆಂಟ್ ನಲ್ಲಿರುವ ವಿಷಕಾರಿ ಕೆಮಿಕಲ್ಸ್ ನಮ್ಮ ಆರೊಗ್ಯಕ್ಕೆ ಹಾನಿಕಾರಕವಾಗಿದೆ.. ಆದರೆ ನಮ್ಮ ದೇಹವು ಬೆವರಿದಾಗ ಬರುವ ವಾಸನೆಯಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ ಇದರಿಂದ ರೋಗಗಳು ಬರುತ್ತವೆ.. ಇದರಿಂದ ಮುಕ್ತಿ ಹೊಂದುವುದೇಗೆ?? ಇಲ್ಲಿದೆ ನೋಡಿ ಮನೆಯಲ್ಲೆ ತಯಾರು ಮಾಡಿಕೊಳ್ಳಬಹುದಾದ ಡಿಯೋಡ್ರೆನ್ಟ್ ಗಳು..

ಬೇಕಿಂಗ್ ಸೋಡ.

ಹೌದು ದೇಹದ ದುರ್ಗಂದವನ್ನು ಹೋಗಲಾಡಿಸಲು ಇದೊಂದು ಅತ್ಯಂತ ಪರಿಣಾಮಕಾರಿಯಾದ ವಿಧಾನ.. ಬೇಕಿಂಗ್ ಸೋಡದೊಂದಿಗೆ ಕಾರ್ನ್ ಸ್ಟಾರ್ಚ್ ಅನ್ನು ಬಳಸಿದರೆ ಬೆವರನ್ನು ಹೀರಿಕೊಳ್ಳುತ್ತದೆ.. ದುರ್ವಾಸನೆ ಬರುವುದಿಲ್ಲ ಜೊತೆಗೆ ಈ ಕಾಂಬಿನೇಷನ್ ತುರಿಕೆಯಿಂದ ರಕ್ಷಿಸುತ್ತದೆ..

ನಿಂಬೆ ಹಣ್ಣಿನ ರಸ.

ನಿಂಬೆ ರಸವನ್ನು ಬಳಸುವುದರಿಂದ.. ಬೆವರಿನಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳಿಂದ ಮುಕ್ತಿಯನ್ನು ಹೊಂದಬಹುದು.. ಕಂಕುಳನ್ನು ಹೊಸದಾಗಿ ಕಟ್ ಮಾಡಿದ ನಿಂಬೆ ಹಣ್ಣಿನಿಂದ ಎರಡು ಬಾರಿ ಸವರಿದರೆ ದೇಹದ ಬೆವರಿನ ದುರ್ವಾಸನೆ ಇಂದ ದೂರವಿರಬಹುದು.. ಹೊಸದಾಗಿ ಕಂಕುಳನ್ನು ಶೇವ್ ಮಾಡಿದ್ದರೆ ಇದನ್ನು ಬಳಸಬೇಡಿ.

ಕೊಬ್ಬರಿ ಎಣ್ಣೆ.

ಕೊಬ್ಬರಿ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶವಿರುವುದರಿಂದ ಇದು ಕೂಡ ಉಪಯುಕ್ತವಾದದ್ದು… ಇದು ಬೆವರಿನ ದುರ್ವಾಸನೆಯನ್ನು ಹೋಗಲಾಡಿಸುವುದರ ಜೊತೆಗೆ ದೇಹಕ್ಕೆ ಫ್ರೆಶ್ ಫ್ರಾಗ್ರನ್ಸ್ ಅನ್ನು ಕೊಡುವುದು.

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾಗಬಹುದು..