ಮೂರನೇ ಹಂತದ ಪರೀಕ್ಷೆಗೆ ಸಜ್ಜಾದ ಕೋವ್ಯಾಕ್ಸಿನ್, ಇನ್ನೇನು ಬರಲಿದೆಯೇ ಲಸಿಕೆ??

0
109

ದೆಹಲಿ: ಮಾರಕ ಕೊರೋನಾ ತಡೆ ಲಸಿಕೆ ಕೊವಾಕ್ಸಿನ್ ನ ಮೂರನೆ ಹಂತದ ಪ್ರಯೋಗಾರ್ಥ ಪರೀಕ್ಷೆ ನಾಳೆ ಕೊಲ್ಕತ್ತಾದಲ್ಲಿ ನಡೆಯಲಿದೆ. ಕೊರೊನಾ ಮಹಾಮಾರಿಗೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಸಿಕೆ ಕೋವಾಕ್ಸಿನ್ ಆಗಿದೆ.

ರಾಷ್ಟ್ರೀಯ ಕಾಲರಾ ಸಂಸ್ಥೆಯಲ್ಲಿ ಈ ಪರೀಕ್ಷೆ ನಡೆಯಲಿದೆ. ಪಶ್ಚಿಮ ಬಂಗಾಳದ ನಗರಾಭಿವವೃದ್ಧಿ ಸಚಿವ ಹಾಗೂ ಕೊಲ್ಕತ್ತಾ ಮಹಾನಗರ ಪಾಲಿಕೆ ಮುಖ್ಯಸ್ಥರಾಗಿರುವ ಸಚಿವ ಪಿರ್ಹಾದ್ ಹಕೀಂ ಕೂಡ ಲಸಿಕೆ ಪರೀಕ್ಷೆಗೆ ಸಜ್ಜಾಗಿದ್ದಾರೆ. ಹಕೀಂ ಅವರು ಈ ಸಂಬಂಧ ವೈದ್ಯಕೀಯ ಪರೀಕ್ಷೆಗೆ ಗುರಿಯಾಗಿದ್ದು, ಪ್ರಯೋಗಾರ್ಥ ಪರೀಕ್ಷೆಗೆ ಅರ್ಹರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾದಲ್ಲಿ 1000 ಸ್ವಯಂ ಸೇವಕರು ಪರೀಕ್ಷೆ ನಡೆಸಲು ಮುಂದೆ ಬಂದಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತ್ ಬಯೋಟಿಕ್ ಕಂಪನಿ ಈ ಲಸಿಕೆಯನ್ನು ತಯಾರಿಸಿದೆ. ಫಾಸ್ಟ್ ಟ್ರ್ಯಾಕ್ ಟ್ಯಲ್ ನಡೆಸಿ, ಜುಲೈ 7 ರಿಂದ ಕ್ಲಿನಿಕಲ್ ಟ್ರಯಲ್ ಶುರುವಾಗಿತ್ತು. ಇದೀಗ ಇದರ ಮೂರನೇ ಹಂತದ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ.

ಪುಣೆ ವೈರಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಈ ಲಸಿಕೆ ಅಭಿವೃದ್ಧಿಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಸ್ವದೇಶಿ ಇನ್ ಆಕ್ಟಿವೇಟೆಡ್ ಲಸಿಕೆಯನ್ನು ಭಾರತ್ ಬಯೋಟೆಕ್ ನ ಬಿಎಸ್ಎಲ್ -3 (ಬಯೋ-ಸೇಫ್ಟಿ ಲೆವೆಲ್ 3) ಹೈ ಕಂಟೈನ್ಮೆಂಟ್ ಫೆಸಿಲಿಟಿ ಲ್ಲಿ ಅಭಿವೃದ್ಧಿಪಡಿಸಿ ಉತ್ಪಾದಿಸಲಾಗಿದೆ. ಇದು ಹೈದರಾಬಾದ್ ನ ಜಿನೋಮ್ ವ್ಯಾಲಿಯಲ್ಲಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಈ ಕೊವಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಶೀಘ್ರವೇ ಎಲ್ಲ ಪರೀಕ್ಷೆ ಪೂರ್ಣಗೊಳಿಸಿ ಲಸಿಕೆ ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.