ಹೊಸ ವರ್ಷಕ್ಕೆ ರಾಜ್ಯ ಸಾರಿಗೆ ಇಲಾಖೆ ಜನರಿಗೆ ಒಂದು ವಿಶಿಷ್ಟ ಕೊಡುಗೆಯನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಹೊಸ ವಾಹನದ ನೋಂದಣಿ ಮಾಡಿಸಲು ಮತ್ತು ನಂಬರ್ ಪಡೆಯಲು ತಿಂಗಳು ಗಟ್ಟಲೆ ಕಾಯಬೇಕಿಲ್ಲ. ರಿಜಿಸ್ಟ್ರೇಷನ್, ಹೊಸ ನಂಬರ್ ಮತ್ತು ಇತ್ಯಾದಿ ಯಾವುದೇ ಕೆಲಸವಾಗಲಿ ಕೆಲವೇ ಗಂಟೆಗಳಲ್ಲಿ ಮಾಡಿ ಕೊಡುತ್ತದೆಯಂತೆ ಸಾರಿಗೆ ಇಲಾಖೆ.
ಈಗಿನ ತನಕ ವಾಹನಗಳಿಗೆ ಇಷ್ಟವಾದ ನೋಂದಣಿ ಸಂಖ್ಯೆ ಅಥವಾ ಲಕ್ಕಿ ನಂಬರ್ ಪಡೆಯಲು ಜನರು ತಿಂಗಳಿನಿಂದ ಹಿಡಿದು ವರ್ಷಾನುಗಟ್ಟಲೆ ಕಾಯುತ್ತಿದ್ದರು. ಈಗ ತಕ್ಷಣ ಪಡೆಯವಂತಹ ಹೊಸ ಸಾಫ್ಟ್-ವೇರ್ ಅನ್ನು ಸಾರಿಗೆ ಇಲಾಖೆ ಹೊರತರುತ್ತಿದೆ, ಈ ಹೊಸ ಸಾಫ್ಟ್-ವೇರ್ ನಿಂದ ತಿಂಗಳುಗಳ ಕೆಲಸ ಕೇವಲ ಕೆಲವೇ ಗಂಟೆಗಳಲ್ಲಿ ಆಗುತ್ತದೆಯಂತೆ.
ಸಾರಿಗೆ ಇಲಾಖೆ ಹೊರ ತರುತ್ತಿರುವ ಈ ಹೊಸ ವೆಬ್-ಸೈಟ್ ನ ಹೆಸರು “ವಾಹನ್ 4”. ಈ ವೆಬ್-ಸೈಟ್ ನ ಮೂಲಕ ಸಾರಿಗೆ ಇಲಾಖೆಯ ಜೊತೆ ವ್ಯವಹಾರ ಮಾಡ ಬಯಸುವವರು, ಸಂಪೂರ್ಣವಾಗಿ ಆನ್ಲೈನ್ ಮುಖಾಂತರವೇ ವ್ಯವಹಾರ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಈ ವೆಬ್-ಸೈಟ್ ನ ಇನ್ನೊಂದು ವಿಶೇಷವೇನೆಂದರೆ ನೀವು ನಿಮಗೆ ಇಷ್ಟವಾದ ನಂಬರನ್ನು ಆಯ್ಕೆ ಮಾಡಿ ಅದನ್ನು ವೆಬ್-ಸೈಟ್ ಮೂಲಕ ಲಾಕ್ ಮಾಡಿಸಿಬಹುದು, ಆದರೆ ಲಾಕ್ ಮಾಡಿಸಿದ 24 ಗಂಟೆಗಳ ಒಳಗೆ ಅದನ್ನು ಖರೀದಿ ಮಾಡಬೇಕು. ಈ ಮೂಲಕ ನಿಮಗೆ ಇಷ್ಟವಾದ ನಂಬರ್ ಅನ್ನು ಕುಳಿತಲ್ಲಿಯೇ ಪಡೆಯಬಹುದು.
ಈ ವಾಹನ 4 ವೆಬ್-ಸೈಟ್ ನ ಮೂಲಕ, ಎಲ್ಲಾ ವಾಹನಗಳ ನೋಂದಣಿ ಮಾಡಿಸಲು ಆನ್ಲೈನ್-ನಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಸೇವಾ ಶುಲ್ಕವನ್ನು ಆನ್ಲೈನ್-ನಲ್ಲಿಯೆ ಪಾವತಿಸಬೇಕು. ಅರ್ಜಿ ಸಲ್ಲಿಸಿದ ನಂತರ ನಿಮಗೆ ಸಾರಿಗೆ ಇಲಾಖೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುತ್ತಾರೆ. ಅರ್ಜಿ ಸಲ್ಲಿಸಿದವರಿಗೆ ರ್ಯಾಂಡಮ್ ಪದ್ಧತಿಯಲ್ಲಿ ವಾಹನ ನೊಂದಣಿ ಸಂಖ್ಯೆ ನೀಡಲಾಗುತ್ತದೆ ಮತ್ತು ವಾಹನದ NOC ಕೂಡ ಅತ್ಯಂತ ವೇಗವಾಗಿ ನೀಡಲಾಗುತ್ತದೆ.