ಶ್ರೀ ಶ್ರೀಧರ ಸ್ವಾಮಿಗಳು ಐಕ್ಯರಾದ ಭಕ್ತಿ ಮುಕ್ತಿ ಆಧ್ಯಾತ್ಮದ ಶಕ್ತಿ ಕೇಂದ್ರ ವರದಪುರ ಶ್ರೀ ಶ್ರೀಧರಾಶ್ರಮಕ್ಕೆ ಭೇಟಿ ನೀಡಿದ್ದೀರಾ?ಇಲ್ಲವಾದಲ್ಲಿ ಶೀಘ್ರವೇ ಭೇಟಿ ಕೊಡಿ ಏಕೆಂದರೆ ಗುರುವಿನ ಗುಲಾಮನಾಗುವವರೆಗೂ ದೊರೆಯದಣ್ಣ ಮುಕುತಿ..

0
2591

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ , ತಸ್ಮೈ ಶ್ರೀ ಗುರುವೇ ನಮಃ||

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗುರುವಿಗೆ ತ್ರಿಮೂರ್ತಿಗಳ ಪರಮ ಪವಿತ್ರ ಸ್ಥಾನವನ್ನು ಕೊಟ್ಟು ಗೌರವಿಸಿದ್ದೇವೆ. ಬಹು ಹಿಂದೆಯೇ ಗುರುವಿನ ಗುಲಾಮನಾಗುವ ತಂಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿ ನಲಿದಿದ್ದಾರೆ. ಹಾಗೆಯೇ ಗುರುವಿದ್ದ ಕ್ಷೇತ್ರವೂ ಪವಿತ್ರವೆಂದು, ದೈವೀಶಕ್ತಿಯುಳ್ಳ ಪುಣ್ಯಕ್ಷೇತ್ರವೆಂದು ತಿಳಿಯಲ್ಪಟ್ಟಿರುವ ಕ್ಷೇತ್ರವೇ ವರದಾಪುರ ಶ್ರೀ ಶ್ರೀಧರಾಶ್ರಮ.

ಸಾಗರದಿಂದ ಕೇವಲ ೮ ಕಿಮಿ ದೂರದ ಸಹ್ಯಾದ್ರಿ ಪರ್ವತದ ಶ್ರೇಣಿಯ ಒಂದು ಭಾಗದ ಮೇಲಿರುವ ಈ ಕ್ಷೇತ್ರ ತನ್ನ ಹಲವು ವೈಶಿಷ್ಟ್ಯಗಳಿಂದ ಆಸ್ತಿಕರನ್ನು ಬರಸೆಳೆದುಕೊಳ್ಳುತ್ತಿದೆ. ಈ ಬೆಟ್ಟದ ಪರಿಸರವು ಹಿಂದೆ ಅಗಸ್ತ್ಯರು, ವ್ಯಾಸರು ಒಳಗೊಂದು ಎಷ್ಟೋ ಸಿದ್ಧಪುರುಷರ, ಜ್ಞಾನಿಗಳ ನೆಲೆವೀಡಾಗಿತ್ತು ಎಂಬುದು ಐತಿಹ್ಯ.

೧೯೦೮ ರಲ್ಲಿ ದತ್ತಾತ್ರೇಯರ ಕೃಪೆಯಿಂದ ಜನಿಸಿದ ಶ್ರೀಗಳು ಬಾಲ್ಯದಲ್ಲಿಯೇ ತಾಯಿ, ತಂದೆ ಹಾಗು ಅಕ್ಕನನ್ನು ಕಳೆದುಕೊಂಡು ನಶ್ವರ ಜಗತ್ತಿನಿಂದ ವಿಮುಖರಾಗಿ ಆಧ್ಯಾತ್ಮದತ್ತ ಒಲವನ್ನು ತೋರಿಸಲಾರಂಭಿಸಿದರು. ಭಾರತದಾದ್ಯಂತ ಸಂಚರಿಸಿದ ಶ್ರೀ ಶ್ರೀಧರರು ೧೯೫೧ ಇಸವಿಯಲ್ಲಿ ಈ ಪ್ರದೇಶಕ್ಕೆ ಬಂದರು. ಈ ನೆಲದ ಮಹತ್ವವನ್ನು ಅರಿತ ಸ್ವಾಮಿಗಳು ಹಾಲು ಬಿದ್ದಿದ್ದ ಕ್ಷೇತ್ರವನ್ನು ಊರ್ಜಿತಾವಸ್ಥೆಗೆ ತಂದು ೧೯೫೪ ರಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು.

ಪ್ರಾಕೃತಿಕ ಚೆಲುವಿಗೆ ಏನು ಕೊರತೆಯಿಲ್ಲದಿದ್ದರೂ ನೀರಿನ ಅಭಾವವನ್ನರಿತ ಸ್ವಾಮಿಗಳು ಪರ್ವತದ ಮಧ್ಯ ಭಾಗದಲ್ಲಿ ಜಲನಿಧಿಯ ಇರುವಿಕೆಯನ್ನು ಕಂಡು ತಮ್ಮ ಬೊಗಸೆಯಿಂದಲೇ ಅದನ್ನು ಭೂಮಿಯಿಂದ ಹೊರತೆಗೆದರು. ಅದೇ ಇಂದಿನ ಪರಮ ಪವಿತ್ರ ಶ್ರೀಧರ ತೀರ್ಥ. ವರ್ಷದ ೩೬೫ ದಿನವೂ ಇಲ್ಲಿರುವ ಬಸವನ ಬಾಯಿಯಿಂದ ನೀರು ದುಮ್ಮಿಕ್ಕುತ್ತಲೇ ಇರುತ್ತದೆ. ಈ ತೀರ್ಥವನ್ನು ಸೇವಿಸಿದ್ದಲ್ಲಿ, ಸ್ನಾನ ಮಾಡಿದ್ದಲ್ಲಿ ಅನೇಕ ವ್ಯಾಧಿ, ಭಾದೆಗಳು ದೂರವಾಗುತ್ತದೆ ಎಂಬ ನಂಬಿಕೆಯನ್ನು ಹೊತ್ತು ಪ್ರತಿನಿತ್ಯ ಇಲ್ಲಿ ಸ್ನಾನಮಾಡಲು, ಸೇವಿಸಲು ಭಕ್ತಾಧಿಗಳು ಮುಗಿಬೀಳುವುದು ಸಾಮಾನ್ಯವಾಗಿದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!

ಇಡೀ ಪರಿಸರವು ಬೆಟ್ಟಗುಡ್ಡಗಳಿಂದ ಕೂಡಿದ್ದು ಅಡಿಕೆ, ತೆಂಗು, ಬಾಳೆಗಳ ಹಸಿರು ಬನದ ವಾತಾವರಣವನ್ನು ತಂಪಾಗಿಸಿದೆ. ಶ್ರೀಧರ ತೀರ್ಥದ ಪಕ್ಕ ಸುಮಾರು ೧೫೦ ಮೆಟ್ಟಿಲುಗಳನ್ನು ಹತ್ತಿದ್ದಲ್ಲಿ ಗುಡ್ಡದ ತುದಿಯಲ್ಲಿರುವ ಶ್ರೀ ಶ್ರೀಧರ ಸ್ವಾಮಿಗಳ ಸಮಾಧಿಯನ್ನು, ಮತ್ತು ಅಲ್ಲಿ ನಿಲ್ಲಿಸಿರುವ ಪರಮೇಶ್ವರನ ದೇಗುಲವನ್ನು ಕಾಣಬಹುದು.ಈ ದೇಗುಲದ ಪ್ರಾಂಗಣವು ಭಜನೆಗಳಿಗೆ, ಸತ್ಸಂಗಗಳಿಗೆ ಮೀಸಲಿರಿಸಲಾಗಿದೆ. ಇಲ್ಲಿಂದ ಮುಂದೆ ಸುಮಾರು ೧ ಕಿಮಿ ದೂರದಲ್ಲಿ ಬೆಟ್ಟವೇರಿದ್ದಲ್ಲಿ ಸ್ವತಃ ಶ್ರೀಗಳೇ ಸ್ಥಾಪಿಸಿದ ೩೦ ಅಡಿಯ ಧರ್ಮಧ್ವಜವನ್ನು ಕಾಣಬಹುದು. ಇಲ್ಲಿಂದ ಕಾಣುವ ಸುತ್ತಣದ ಪರಿಸರ ವರ್ಣನಾತೀತ. ಎತ್ತ ನೋಡಿದರೂ ಮೈದುಂಬಿಕೊಂಡ ಅರಣ್ಯಪ್ರದೇಶ, ದೂರದ ಸಹ್ಯಾದ್ರಿ, ಕೊಡಚಾದ್ರ್ ಬೆಟ್ಟಗಳ ಸಾಲು,ಇವುಗಳ ಚೆಲುವಿಗೆ ಕಳಶವಿಟ್ಟಂತೆ ಕಂಗೊಳಿಸುವ ಶರಾವತಿ ಹಿನ್ನೀರಿನ ರಮ್ಯನೋಟ ನೋಡುಗರ ಮೈಮನಗಳಿಗೆ ಹೆಚ್ಚು ಮುದವನ್ನು ನೀಡುತ್ತದೆ.

ಶ್ರೀಧರ ಸ್ವಾಮಿಗಳು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರೂ ಸಹ ಅವರ ಕೃಪೆ, ಆಶೀರ್ವಾದ, ದೈವೀ ಶಕ್ತಿಯು ಇಲ್ಲಿ ಕೇಂದ್ರಿತವಾದುದರಿಂದ ಏಕಾಂತವನ್ನು ಬಯಸುವ, ಮನಃಶಾಂತಿಯನ್ನು ಅರಸಿ ಬರುವ ಸರ್ವರಿಗೂ ಇದು ಆಧ್ಯಾತ್ಮಿಕ ನೆಲೆಯಾಗಿ ಪರಿಣಮಿಸಿದೆ. ಬರುವ ಎಲ್ಲ ಭಕ್ತರಿಗೂ ಭೋಜನ ವ್ಯವಸ್ಥೆ, ತಂಗಲು ಕೊಠಡಿಗಳ ಸವಲತ್ತುಗಳಿವೆ. ಶ್ರೀಧರಾಶ್ರಮದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀಧರ ಆರೋಗ್ಯ ಘಟಕ, ಶ್ರೀಧರ ಸಂಜೀವಿನಿ, ಹಾಗು ಶ್ರೀಧರ ವಿದ್ಯಾನಿಕೇತನಗಳು ಈಗಾಗಲೇ ಆರಂಭಗೊಂಡಿವೆ. ಸುಸಜ್ಜಿತ ಭೋಜನಶಾಲೆ, ಧ್ಯಾನಮಂದಿರ, ಗೋಶಾಲೆ, ಜನ ವಸತಿ ಕಟ್ಟಡಗಳು ಇಲ್ಲಿವೆ. ಶಿವರಾತ್ರಿ, ನವರಾತ್ರಿ ಹಾಗು ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ, ಯಜ್ಞ ಯಾಗಾದಿಗಳು ಇಲ್ಲಿ ನಡೆಯುತ್ತವೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮ್ಮ ಜ್ಯೋತಿಷ್ಯದ ವರದಿ ಪಡೆಯಿರಿ!!