ಬಿಹಾರದ ಮುಜಫರ್ ಪುರದಲ್ಲಿ ವೇಗವಾಗಿ ಬಂದ ಮಹಿಂದ್ರಾ ಬುಲೇರೋ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದಲ್ಲಿದ್ದ ಸರ್ಕಾರಿ ಶಾಲೆಯಯೊಳಗೆ ನುಗ್ಗಿದೆ. ಮದ್ಯಾಹ್ನದ ಊಟದ ಸಮಯವಾದ್ದರಿಂದ ಶಾಲಾ ವಿದ್ಯಾರ್ಥಿಗಳು ಶಾಲೆಯ ಹೊರಗೆ ಇದ್ದರು ನೇರವಾಗಿ ನುಗ್ಗಿದ ಕಾರು ಮಕ್ಕಳಿಗೆ ರಭಸವಾಗಿ ಗುದ್ದಿದೆ.
ಹಠಾತ್ತಾಗಿ ಬಂದ ಕಾರು ಮದ್ಯಾಹ್ನ 1.30 ರ ಸುಮಾರಿಗೆ ಶಾಲೆಯ ಬಳಿ ಹೆದ್ದಾರಿಯನ್ನು ದಾಟಿ ಬೇರೆ ಕಡೆ ಧರಂಪುರ್ ಗ್ರಾಮವನ್ನು ತಲುಪುತ್ತಿದ್ದ ವಿದ್ಯಾರ್ಥಿಗಳಿಗೆ ಗುದ್ದಿದೆ. ಕಾರು ವೇಗವಾಗಿದ್ದರಿಂದ ಅದು ನುಗ್ಗಿದ ರಭಸಕ್ಕೆ ಒಂಬತ್ತು ಮಕ್ಕಳು ಸ್ಥಳದಲ್ಲಿಯೇ ಮೃತಪತ್ತಿದ್ದಾರೆ ಮತ್ತು 20 ಕ್ಕಿಂತ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.
ಈ ಶಾಲೆ ರಾಷ್ಟ್ರೀಯ ಹೆದ್ದಾರಿ 77 ರ ಪಕ್ಕದಲ್ಲಿದೆ. ಈ ವಿದ್ಯಾಥಿಗಳ ಪೋಷಕರು ದಿನಗೂಲಿ ಕಾರ್ಮಿಕರ ಅಥವಾ ರೈತರ ಮಕ್ಕಳಾಗಿದ್ದರೆ. ಹೆದ್ದಾರಿ ಬಳಿ ಇರುವ ಸ್ಥಳದಿಂದ ಶಾಲೆ ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸುತ್ತಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡ 20 ಕ್ಕಿಂತ ಹೆಚ್ಚು ವಿದ್ಯಾಥಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಶ್ರೀಕೃಷ್ಣ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಮಿನಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಅಹಿಯಾಪುರ್-ಝಾಪಾಹಾ ಎಂಬುವಲ್ಲಿ ಈ ಘಟನೆ ನಡೆದಿದೆ. ಇನ್ನು ಶಾಲೆಗೆ ನುಗ್ಗಿದ ಕಾರು ಸ್ಥಳೀಯ ಬಿಜೆಪಿ ಶಾಸಕರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ಮರಣಿಸಿದ ಮಕ್ಕಳ ಪರಿವಾರದವರಿಗೆ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಪಘಾತಕ್ಕೆ ಬಗ್ಗೆವಿಚಾರಣೆ ಪ್ರಾರಂಭಿಸಲಾಗುವುದು, ತಪ್ಪು ಎಸಗಿದ ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
Also Read: ಮದುವೆಯಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಅದು ಸ್ಫೋಟವಾಗಿದೆ, ಹೇಗೆ ಗೊತ್ತಾ?