ವಿಜಯ್ ಸಂಕೇಶ್ವರ್-ರವರು ನಡೆದುಬಂದ ಹಾದಿ ಎಲ್ಲರಿಗು ಪ್ರೇರಣಿಯ!!

0
3328

ಒಂದು ಟ್ರಕ್ ನಿಂದ ಪ್ರಾರಂಭಿಸಿ ಇಂದು 4300 ಗಾಡಿಗಳ ದೇಶದ ಅತ್ಯಂದ ದೊಡ್ಡ ಉದ್ದಿಮೆಯಾಗಿಸಿದ ವಿಜಯ್ ಸಂಕೇಶ್ವರ್ ಅವರ ಕಥೆ

ಆರಂಭದಲ್ಲಿ ಅವರು ಇಂಗ್ಲಿಷ್-ಕನ್ನಡ ಭಾರದ್ವಾಜ್ ಡಿಕ್ಷನರಿಯನ್ನು ಪ್ರಕಟಿಸುತ್ತಿದ್ದರು. ತಮ್ಮ 16 ನೇ ವಯಸ್ಸಿನಲ್ಲಿ ಮರಾಠಿಯಲ್ಲಿ ಅದನ್ನು ಪ್ರಕಟಿಸುವ ಪ್ರಯತ್ನ ಮಾಡಿದ್ದರು. ಸಂಕೇಶ್ವರರು 25ನೇ ವಯಸ್ಸಿಗೆ ಒಂದು ಲಾರಿಯನ್ನು ತೆಗೆದುಕೊಂಡೆ. ಬಂಧು-ಬಳಗ ಎಲ್ಲರೂ ವೀರಶೈವನಾಗಿ ಲಾರಿ ವ್ಯವಹಾರಕ್ಕೆ ಇಳಿಯುವುದು ಕನಿಷ್ಠ ದರ್ಜೆಯ ಉದ್ಯೋಗ ಎಂದು ಹೀಯಾಳಿಸಿದರು. ಆಗ ಮನಸ್ಸಿನಲ್ಲಿ ತಳಮಳ ಆಗಿದ್ದು ನಿಜ. ಕಾಯಕ ಸಂಸ್ಕೃತಿಯ ಬಗ್ಗೆ ಅಪಾರ ಶ್ರದ್ಧೆಯುಳ್ಳವನಾಗಿದ್ದರಿಂದ ಇಟ್ಟ ಹೆಜ್ಜೆ ಹಿಂದಕ್ಕೆ ಇಡಲಿಲ್ಲ. ಒಂದು ಹಂತದಲ್ಲಂತೂ ನಷ್ಟಕ್ಕೆ ತುತ್ತಾಗಿ ಎಲ್ಲವೂ ಮುಗಿದೇ ಹೋಯಿತು ಎಂಬ ಸ್ಥಿತಿ ತಲುಪಿದರೂ ಅಚಲ ನಿರ್ಧಾರದಿಂದ ಮುಂದುವರಿದರು.

source: topyaps.com

ತಮಗೆ ಎದುರಾದ ತೊಂದರೆಗಳನ್ನು ತಮ್ಮ ಸಾಧನೆಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ತಮ್ಮ ಗುರಿಯೆಡೆ ಶ್ರದ್ಧೆಯಿಂದ ದುಡಿಯುತ್ತಾರೆ. ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಒಂದು ಲಾರಿಯಿಂದ ಪ್ರಾರಂಭಿಸಿದ ಅವರ ಬ್ಯುಸಿನೆಸ್‌ ಇಂದು 5000 ಲಾರಿಗಳಿಗೆ ಬಂದು ನಿಂತಿದೆ. ಕೇವಲ ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲಿಯೂ ಅವರ ವಿಆರ್‌ಎಲ್‌ ಸರ್ವಿಸ್‌ ಲಭ್ಯವಿದೆ.

ಕೆಲಸ ಯಾವುದೆ ಇರಲಿ ಶೃದ್ದೆಯಿಂದ ಮಾಡಬೇಕು. ತನ್ನ ಮೇಲೆ ತನಗೆ ಭರವಸೆ ಇರಬೇಕು, ಆತ್ಮವಿಶ್ವಾಸವಿರಬೇಕು. ಎಂಬುವದರಲ್ಲಿ ನಂಬಿಕೆ ಇಟ್ಟುಕೊಂಡವರು…

ವಿಆರ್‌ಎಲ್‌ ಸಮೂಹ ಸಂಸ್ಥೆ

ಗದಗ, ಉತ್ತರ ಕರ್ನಾಟಕದ ಒಂದು ಸಣ್ಣ ಪಟ್ಟಣದಲ್ಲಿ 1976 ರಲ್ಲಿ ಒಂದು ಟ್ರಕ್‌ನಿಂದ ಶುರು ಮಾಡಿದ್ದ ಬಿಸಿನೆಸ್ ಈಗ 4,300 ಗಾಡಿಗಳ ಆಗಿ ಇಡೀ ದೇಶದಾಗ ಅತ್ಯಂತ ದೊಡ್ದ ಟ್ರಾನ್ಸಪೊರ್ಟೆಶನ್ ಸಂಸ್ಥೆ ಆಗಿದೆ. ವಿಆರ್‌ಎಲ್ (VRL) ಸಂಸ್ಥೆ ಇಂದು 28 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಶಾಖೆಗಳು, 4,300 (3,900 trucks and 400 buses)ಕ್ಕೂ ಅಧಿಕ ವಾಹನಗಳನ್ನು ಹೊಂದಿ ದೇಶಾದ್ಯಂತ ಮನೆಮಾತಾಗಿದೆ. ಇವರು ಸ್ಥಾಪಿಸಿದ ವಿ ಆರ್‌ಎಲ್ ಲಾಜಿಸ್ಟಿಕ್ಸ್ ಸಂಸ್ಥೆ ಈಗ 1729 ಕೋಟಿ ವಹಿವಾಟನ್ನು ನೆಡೆಸುತ್ತಿದೆ. ವಿಆರ್‌ಎಲ್ ಲಾಜಿಸ್ಟಿಕ್ಸ್ ಅನ್ನು ವಿಶ್ವಾಸಾರ್ಹತೆ, ನಿಷ್ಠೆಗೆ ಮತ್ತೊಂದು ಹೆಸರಾಗಿಸಿ, ಗ್ರಾಹಕಸ್ನೇಹಿಯಾಗಿ ರೂಪಿಸಿರುವ ವಿಜಯ ಸಂಕೇಶ್ವರ ಅವರ ಸಾಧನೆ ಗುರುತಿಸಿ ಅನೇಕ ಸಂಘ- ಸಂಸ್ಥೆಗಳು ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿವೆ.

source: thehindubusinessline.com

ಹೊಸ ಪೀಳಿಗೆಯ ಸಂವೇದನಾ ಶಕ್ತಿಯಾಗಿ ರುವ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಸಂಸ್ಥೆಗೆ ಆಧುನಿಕ ಸ್ಪರ್ಶ ನೀಡಿದವರು. ಸಾರಿಗೆ ಕ್ಷೇತ್ರದಲ್ಲಿ 19 ವರ್ಷಗಳ ಸುದೀರ್ಘ ಅನುಭವವುಳ್ಳ ಅವರು, ಜಾಗತಿಕ ಸ್ಪರ್ಧೆಗೆ ಅನುಗುಣವಾದ ಚಿಂತನೆ, ದೂರದರ್ಶಿತ್ವ ಹಾಗೂ ನಾಯಕತ್ವ ಗುಣದಿಂದಾಗಿ ಸಂಸ್ಥೆಯನ್ನು ಬಹು ಎತ್ತರಕ್ಕೆ ಬೆಳೆಸಿದ್ದಾರೆ.

ಅವರ ವ್ಯವಹಾರ ಜ್ಞಾನ ಎಷ್ಟು ಪ್ರಖರವೆಂದರೆ, ಒಂದು ಟೈರ್ ಸವೆದು ಹೋಗಿದ್ದರೆ, ಅದು ಎಷ್ಟು ಕಿ.ಮೀ. ಓಡಿರಬಹುದು
ಎಂಬುದನ್ನು ಕಣ್ಣಳತೆಯಲ್ಲೇ ನೋಡಿ ಹೇಳಬಲ್ಲರು.

source: theweekendleader.com

ಸಂಕೇಶ್ವರರು ಯಾವ ಕ್ಷೇತ್ರಕ್ಕೆ ಕೈ ಹಾಕುತ್ತಾರೋ ಆ ಕ್ಷೇತ್ರದಲ್ಲಿ ಅವರಿಗೆ ನಂ.1 ಪಟ್ಟ ಸಲ್ಲುತ್ತದೆ. ಸಾರಿಗೆ, ಪತ್ರಿಕೋದ್ಯಮ ಎರಡರಲ್ಲೂ ನಂ.1 ಆಗಿದ್ದಾರೆ. ಯಾರಲ್ಲಿ ಕಾಯಕ ನಿಷ್ಠೆ ಇರುತ್ತದೋ ಅವರು ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯ.
1976 ರಲ್ಲಿ 2 ಲಕ್ಷ ರೂ ವಹಿವಾಟಿನಿಂದ ಹೆಚ್ಚು 15,000 ಉದ್ಯೋಗಿಗಳನ್ನು ಒಳಗೊಂಡಂತಹ ವಿಆರ್‌ಎಲ್‌ ಗ್ರೂಪ್ ಸಾರಿಗೆ, ಕೊರಿಯರ್ ಸೇವೆ , ಪ್ರಕಾಶನ , ಗಾಳಿಯಂತ್ರಗಳು ಮತ್ತು air chartering business ಹಾಗು 300 ಕೋಟಿ ಪಬ್ಲಿಷಿಂಗ್ ಹೌಸ್ ನಿರ್ಮಿಸಿದ್ದಾರೆ. ವಿಜಯ್ ಸಂಕೇಶ್ವರ್-ರವರು ನಡೆದುಬಂದ ಹಾದಿ ಎಲ್ಲರಿಗು ಪ್ರೇರಣಿಯ…

source: thehindubusinessline.com

ನೀವು ಗುರಿ ಬೆನ್ನತ್ತಿ ಹೊರಟರೆ ನಿಮಗೆ ಹಲವಾರ ತೊಡಕುಗಳು ಎದುರಾಗುತ್ತವೆ. ಬಂಧು, ಮಿತ್ರರೆ ವಿರೋಧಿಗಳಾಗುತ್ತಾರೆ. ಆದರೆ ಇವುಗಳನ್ನು ಮೆಟ್ಟಿ ನಿಂತರೆ ನೀವು ಯಶಸ್ವಿಯಾಗುತ್ತಿರಾ. ಇದಕ್ಕೆ ಸ್ಪಷ್ಟ ನಿದರ್ಶನ ಉದ್ಯಮಿ ರತ್ನ ಡಾ. ವಿಜಯ ಸಂಕೇಶ್ವರ್‌.