ಕರ್ನಾಟದ ಈ ಹೋರಿಯ ಸಾವಿಗೆ ಇಡೀ ಊರಿಗೆ ಊರೇ ಶೋಕದಲ್ಲಿದೆ, ಈ ಹೋರಿಗೆ ಜನರ ಪ್ರೀತಿ ಕಂಡರೆ ಅಚ್ಚರಿಗೊಳ್ತೀರ!!

0
1709

ದೇವರಿಗೆನೇ ಸವಾಲ್ ಹಾಕಿ ತನ್ನ ಆಯಿಷ್ಯಕಿಂತ ಎರಡರಷ್ಟು ಬದುಕಿ ಜೀವನವನ್ನೇ ಒಂದು ಊರಿನ ಉದ್ದಾರಕ್ಕೆ ತ್ಯಾಗಮಾಡಿ ಸಾವಿರಾರು ಅಭಿಮಾನಿಗಳನ್ನು ಗಳಿಸಿದ ಪ್ರಾಣಿಯ ಸಾಧನೆ ಕೇಳಿದ್ರೆ ವಿಚಿತ್ರವಲ್ಲ ಮಹಾವಿಚಿತ್ರ ಅನ್ಸುತೆ. ಎಲ್ರಿಗೂ ಗೊತ್ತಿರುವ ಹಾಗೇ ಒಂದು ಹೋರಿ ಮರಣ ಹೊಂದಿದಾಗ ಎಷ್ಟು ಜನ್ರು ಸೇರಬಹುದು? 50,100? ಅಭಬ್ಬಾ ಅಂದ್ರೆ 150 ಅಲ್ವ? ಇಲ್ಲೊಂದು ಪ್ರಾಣಿ ಮರಣವಾದಾಗ ಸಾವಿರಾರು ಜನ ಸೇರಿದ್ದು ಕೇಳಿದ್ರೆ ಮನದಲ್ಲಿ ಏನೇನೋ ವಿಚಾರ ಹುಟ್ಟುತ್ತೆ, ಮನುಷ್ಯ ಇದ್ದಾಗೆ ಗಳಿಸಿರೋ ಹಣ, ಸಂಪತ್ತು,ಆಸ್ತಿ ಎಲ್ಲಾ ಕಾಣುತ್ತೆ, ಆದ್ರೆ ಸತ್ತಮೇಲೆ ಮಾತ್ರ ಅವನು ಗಳಿಸಿರೋ ಜನರ ಪ್ರೀತಿ ಎಷ್ಟೆಂಬುದು ಕಾಣುತ್ತೆ. ಈಗಿನ ಕಾಲದಲ್ಲಿ ಜನರಿಗೆ ಒಳ್ಳೆಯದು ಮಾಡಿ ಹೆಸರು ಗಳಿಸೋ ಜನಾನೇ ಕಡ್ಮಿ. ಆದ್ರೆ ಈ ಪ್ರಾಣಿ ಇದ್ದಾಗು ಅಷ್ಟೇ, ಸತ್ತಾಗ ಅಷ್ಟೇ ಜನ್ರ ಮನೆಯಮಾತಾಗಿ ಪ್ರೀತಿಗಳಿಸಿ ಅಚ್ಚರಿ ಮೂಡಿಸಿದೆ.

ಈ ಪ್ರಾಣಿ ಮರಣವಾದಗೆ ಇಷ್ಟೊಂದು ಜನ್ರು ಸೇರಿದ್ರು ಅಂದ್ರೆ ಎಲ್ಲರ ತಲಿಯಲ್ಲಿ ಒಂದು ಮಹಾವಿಚಾರನೇ ಹೋಳಿಯಿತ್ತೆ! ಹಾಗಾದ್ರೆ ಆ ಪ್ರಾಣಿ POLITICAL LEADER ಇಲ್ಲ FILM HERO ನೇ ಆಗಿರಬೇಕು ಅನ್ಸುತೆ, ಆದ್ರೆ ಈ ಪ್ರಾಣಿ ಅದ್ಯಾವುದು ಅಲ್ಲಾ ರೀ ಅದು ಒಂದು ಸಾಮಾನ್ಯ “ಎತ್ತು'(ಹೋರಿ) ಅಷ್ಟೇ BUT ಅದು ಮಾಡಿರೋ ಸಾಧನೆ’ ನೋಡಿನೇ ಅಷ್ಟೊಂದು ಜನ ಸೇರಿ ಕಣ್ಣೀರ್ ಹಾಕಿದ್ರು ಅನ್ಸುತೆ.

ಹಾಗೇನೆ ಸಾವಿರಾರು ಜನರ ಪ್ರಿತಿಗೆದ ಈ ಪ್ರಾಣಿ ಮಾಡಿರೋ ಸಾಧನೆ ಅದ್ರೂ ಏನಂದ್ರೆ! ಸಾಮಾನ್ಯವಾಗಿ ಹೋರಿ ಅಥವಾ ಹಸುಗಳು’ 18 ರಿಂದ 20 ವರ್ಷ ಮಾತ್ರ ಜೀವಿಸೋದು ಆದ್ರೆ ಈ ಹೋರಿ 28 ವರ್ಷಗಳ ಕಾಲ ಬದುಕಿ ದುಡಿದು ಇತಿಹಾಸವನ್ನೇ ಸೃಷ್ಟಿಮಾಡಿ, ಒಂದು ಊರನೆ ಉದ್ದಾರ ಮಾಡಿದೆ. ಇದೆಲ್ಲಾ ಆಗಿರೋದು ಹಾವೇರಿ ಜಿಲ್ಲೆಯ ಮುದ್ದಿನಕೊಪ್ಪ ಎಂಬ ಚಿಕ್ಕ ಹಳ್ಳಿಯಲ್ಲಿ, ಸಣ್ಣಗೌಡ್ರು ಎಂಬುವರ ಮನೆಯಲ್ಲಿ ಹುಟ್ಟಿದ ಈ ಹೋರಿ ಮನುಷ್ಯರ ಹಾಗೇನೆ ಬುದ್ದಿಶಕ್ತಿ ಹೊಂದಿತ್ತು ಅದೇ ರೀತಿ ಆ ಊರಿನಲ್ಲಿ ಯಾರೇ ಈ ಪ್ರಾಣಿಯಿಂದ ಬೇಸಾಯ ಮಾಡಿದ್ರೂ ಅವರ ಭೂಮಿಯಲ್ಲಿ ಬಿತ್ತಿದ ಬೆಳೆ, ನಂಬಲು ಅಸಾದ್ಯವಾಗುವಷ್ಟು ಪಸಲು ಬೆಳೆಯಿತ್ತಂತೆ ಹೀಗೆ ಈ ಹೋರಿಯ ಕಾಲ್ಗುಣದಿಂದ ಬಡತನದಲ್ಲಿರೋ ಆ ಊರು ಶ್ರೀಮಂತ ಹಳ್ಳಿಯಾಗಿದೆ. ಇದನೆಲ್ಲ ಕಂಡು ದೇಶವೇ ಬೇರಗಾಗುವಂತೆ ಆಗಿದೆ.

ಇನ್ನೊಂದು ವಿಸ್ಮಯ ಅಂದ್ರೆ ಕೊನೆಯ ಎರಡು ವರ್ಷಗಳ ಕಾಲ ಈ ಹೋರಿ ‘ಮೇವು’ ತಿನ್ನದೇ ಹಾಲು ಹಣ್ಣು ತಿಂದು ಬದುಕಿದ್ದು ಜನರಿಗೆ ಇನ್ನೂ ಅಚ್ಚರಿ ಮೊಡಿಸಿದೆ, ಮತ್ತು ಹುಟ್ಟಿದಾಗಿಂದ ಗೌಡ್ರ ಮನೆಯ ಯಜಮಾನ ರೀತಿಯಲ್ಲಿ ವರ್ತನೆ ಮಾಡುತ್ತಾ ಮನೆಯ ಮಂದಿಗೆ, ಸುತ್ತಮುತಲಿನ ಜನರಿಗೆ ಆಶೀರ್ವಾದ ಮಾಡ್ತಿತ್ತು ಅಂತೆ ಹಾಗೆಯೇ ಜನ್ರು ಕೂಡಾ ಯಾವುದೇ ಒಳ್ಳೆ ಕೆಲಸಕ್ಕೆ ಹೋಗುವಾಗೆ, ಒಳ್ಳೆ ಕೆಲಸ ಮಾಡುವಾಗ ಈ ಹೋರಿಯ ಆಶೀರ್ವಾದ ಪಡೆಯದೇ ಏನನ್ನು ಮಾಡ್ತಿರಲಿಲ್ಲವಂತೆ. ಈ ಬಸವಿ ಪ್ರತಿನಿತ್ಯವೂ ‘ಪೂಜ್ಯ’ ಮಾಡುವರಿಗೂ ನೀರ್ಕೂಡಾ ಕುಡ್ತಿರ್ಲಿಲ್ಲಾ. ಇಷ್ಟೆಲ್ಲಾ ಶಕ್ತಿ ಇದ್ರೂನು ಪ್ರತಿನಿತ್ಯ ಬೇರೆ ಹೋರಿಗಳು ಮಾಡುವ ಹಾಗೇನೇ ಸುಮಾರು 24 ವರ್ಷ ಕೆಲಸ ಮಾಡಿದೆ. ಈ ಹೋರಿ ವಿಧಿವಶವಾದಗೆ ಊರಿನ ತುಂಬೆಲ್ಲಾ ರಾಜ ಮರ್ಯಾದೆ ನೀಡಿ ಮೆರವಣಿಗೆ ಮಾಡಿ ಶಾಸ್ತ್ರದ ಪ್ರಕಾರವಾಗಿ ‘ಮಣ್ಣು’ ಮಾಡಿದ್ದಾರೆ. ಸಣ್ಣಗೌಡ್ರ ಮತ್ತು ಊರಿನ ಜನರು ಬಸವಿಯ ಸಮಾಧಿಯಮೇಲೆ ‘ಗುಡಿ’ ನಿರ್ಮಾಣದಲ್ಲಿ ನಿರತರಾಗಿದ್ದಾರೆ.