ನಮ್ಮ ಅತಿಯಾದ ಹೃದಯ ವೈಶಾಲ್ಯತೆಯಿಂದ ನಾವು ಈ ದಿನ ರೇಸಿಸ್ಟ್ ಗಳ ಹಾಗೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದೀವೆ ,ವಿಷಯ ತೀರಾ ಅತಿರೇಕಕ್ಕೆ ಹೋಗಿ Regionalism ನ ಅರ್ಥವೇ ಗೊತ್ತಿರದ ಅರೆಬೆಂದ ಜನರ ದೇಶಭಕ್ತಿಯ ಪಾಠವನ್ನು ಕೇಳಿದ್ದೇವೆ ,ತಪ್ಪು ಮಾಡಿದವರು ನಿಮ್ಮದೇ ರಾಜ್ಯದವರು ಎಂದು ಹಲುಬಿದ ಜನರಿಗೆ ಮುಖಕ್ಕೆ ಹೊಡೆದ ಹಾಗೆ ಬೆಂಗಳೂರು ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ ,
ಅವರು ಹೊರರಾಜ್ಯದ ವಲಸಿಗರು ಎಂದು ಸಾಬೀತಾಗಿದೆ ಆದರೂ ಇದೆ ವಿಷಯವಾಗಿ ಬೆಂಗಳೂರನ್ನು ಅಂತಾರಾಷ್ಟ್ರೀಯ ಚರ್ಚಾವೇದಿಕೆಯ ಮುಂದೆ “ಶೇಮ್ ಶೇಮ್ ಬ್ಯಾಂಗಲೋರ್ ”
ಎಂದು ಅಸಯ್ಯ ರೀತಿಯ ಶೀರ್ಷಿಕೆ ಕೊಟ್ಟು ಬೆಂಗಳೂರಿನ ಮಾನ ಹಾರಾಜು ಮಾಡಿಬಿಟ್ಟವು ಲಜ್ಜೆಗೆಟ್ಟ ಮಾಧ್ಯಮಗಳು .
ಇಷ್ಟಕ್ಕೂ ಬೆಂಗಳೂರಿನ ತಪ್ಪಾದರೂ ಏನು ? ಕೇವಲ ಒಬ್ಬ ,ಇಬ್ಬರು ವಲಸಿಗರು ಮಾಡಿದ ತಪ್ಪಿಗೆ ಇಡೀ ಬೆಂಗಳೂರಿನ ಜನರನ್ನು ಕಾಮುಕರನ್ನಾಗಿ ಬಿಂಬಿಸಿದ್ದು ಎಷ್ಟು ಸರಿ ?
ಅಂತೆಯೇ ನಾವು ಏನು ಎಂದು ನಿರೂಪಿಸಲು ಕೆಲವು ಸಾಕ್ಷ್ಯ ಚಿತ್ರಗಳು ನಿಮ್ಮ ಮುಂದೆ
ಕರ್ನಾಟಕ ೨೦೧೫ ರ ಗಣತಿಯಂತೆ ಒಟ್ಟು 3502 ಕಾಲೇಜುಗಳನ್ನು ಹೊಂದಿದೆ ಇದು ದೇಶದ 3 ನೇ ಅತಿ ಹೆಚ್ಚು ಕಾಲೇಜುಗಳನ್ನು ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ ,
ಹಾಗು ವಿದೇಶದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಓದಲು ಬರುವುದು ಬೆಂಗಳೂರಿಗೆ . ಇಷ್ಟು ಸಾಲದು ಎಂಬಂತೆ ಕಾಮೆಡ್ -ಕೆ , ನೀಟ್ ಪರೀಕ್ಷೆಗಳಲ್ಲೂ ಹೊರರಾಜ್ಯದವರಿಗೆ ಅತಿ ಹೆಚ್ಚು ಸೀಟ್ಗಳು ಸೇರುತ್ತವೆ .
ಈ ಕಡೆ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ನೋಡಿದರೆ IBPS ಪರೀಕ್ಷೆಯಲ್ಲಿ ಕೂಡ ಅತಿ ಹೆಚ್ಚು ಉದ್ಯೋಗಗಳನ್ನು ಪಡೆಯುವವರು ಹೊರರಾಜ್ಯದವರೇ !
ಇತ್ತಕಡೆ IT /BT ಉದ್ಯೋಗಗಳು ಕೂಡ ಹೊರರಾಜ್ಯದವರಿಂದ ತುಂಬಿ ತುಳುಕುತ್ತಿದೆ ಇದು ನಮ್ಮಲ್ಲಿನ ನೈಪುಣ್ಯತೆಯ ಕೊರತೆಯಿಂದಲ್ಲ ಬದಲಾಗಿ ತಮ್ಮ ರಾಜ್ಯದ ಜನರನ್ನು ಅತಿಯಾಗಿ ಸೇರಿಸಿಕೊಳ್ಳುವ ವಲಸಿಗರಿಂದ 2030 ಕ್ಕೆ ಬೆಂಗಳೂರು 2 ಕೋಟಿ ಜನಸಂಖ್ಯೆಯನ್ನು ಹೊಂದಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸುತ್ತದೆ ಎತ್ತ ಸಾಗುತ್ತಿದೆ ಈ ಬೆಳವಣಿಗೆ ,
ನಿಯಂತ್ರಿತ ವಲಸೆ ಒಳ್ಳೆಯದಲ್ಲವೇ ?
ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಶಿರಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ, ಇದನ್ನು ಭಾರತದ ಚಿಕ್ಕ ಟಿಬೆಟ್ ಎಂದೇ ಕರೆಯುತ್ತಾರೆ , ಈ ಸ್ಥಳ ಟಿಬೆಟ್ನಿಂದ ವಲಸೆ ಬಂದ ಬೌದ್ಧರ ನಾಡು .
ಸಿದ್ದಿ ಜನಾಂಗ ಮೂಲತಃ ಆಫ್ರಿಕಾ ಬುಡಕಟ್ಟು ಅವರ ಪ್ರಮುಖ ನೃತ್ಯ ಪ್ರಕಾರವಾದ ಧಾಮಲ್ ಅನ್ನು ಕರ್ನಾಟಕದ ಒಂದು ಪ್ರಮುಖ ನೃತ್ಯ ಪ್ರಕಾರವೆಂದೇ ಪರಿಗಣಿಸಲಾಗಿದೆ , ಅವರ ವಿಶಿಷ್ಟ ಕೈಮಗ್ಗದ ಸೀರೆಗಳಿಗೆ GI ಟ್ಯಾಗ್ ಹೊಂದಿದೆ .
ಬೈಲಕುಪ್ಪೆ ಟಿಬೆಟ್ ಜನರಿಗೆ ಸೇರಿದ ಎರಡು ಅಕ್ಕಪಕ್ಕದ ನಿರಾಶ್ರಿತ ವಸಾಹತು ಶಿಬಿರಗಳ ತಾಣವಾಗಿದೆ; ಅಷ್ಟೇ ಅಲ್ಲ ಟಿಬೆಟ್ಟಿನ ಬೌದ್ಧಮತದ ಹಲವಾರು ಸನ್ಯಾಸಿ ಮಂದಿರಗಳಿಗೆ ಇದು ನೆಲೆಯಾಗಿದೆ. ಭಾರತದ ಕರ್ನಾಟಕ ರಾಜ್ಯದಲ್ಲಿನ ಮೈಸೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಈ ಪ್ರದೇಶವು ನೆಲೆಗೊಂಡಿದೆ. ಅವಳಿ ಪಟ್ಟಣವಾದ ಕುಶಾಲನಗರವು ಬೈಲಕುಪ್ಪೆಯಿಂದ 6 ಕಿಲೋಮೀಟರುಗಳಷ್ಟು ದೂರದಲ್ಲಿ ನೆಲೆಗೊಂಡಿದೆ.
1998ರಲ್ಲಿ ಕೇಂದ್ರೀಯ ಟಿಬೆಟ್ಟಿನ ಆಡಳಿತದ [ಯೋಜನಾ ಆಯೋಗ] ವತಿಯಿಂದ ನಡೆಸಲ್ಪಟ್ಟ ಜನಸಂಖ್ಯಾಶಾಸ್ತ್ರದ ಸಮೀಕ್ಷೆಯೊಂದರ ಅನುಸಾರ, {ಯೋಜನಾ ಆಯೋಗ. 2004. ದೇಶಭ್ರಷ್ಟತೆಗೀಡಾಗಿರುವ ಟಿಬೆಟಿಯನ್ನರ ಸಮುದಾಯ. ಜನಸಂಖ್ಯಾಶಾಸ್ತ್ರದ ಮತ್ತು ಸಮಾಜೋ-ಆರ್ಥಿಕ ಸಮಸ್ಯೆಗಳು 1998 – 2001. ಧರ್ಮಶಾಲಾ: ಯೋಜನಾ ಆಯೋಗದ ಕಚೇರಿ} ಆ ಸಮಯದಲ್ಲಿ ಎರಡು ವಸಾಹತು ಶಿಬಿರಗಳಲ್ಲಿದ್ದ ನಿರಾಶ್ರಿತರ ಸಂಖ್ಯೆಯು 10,727ರಷ್ಟಕ್ಕೆ ಮುಟ್ಟಿತ್ತು. ಆದಾಗ್ಯೂ, ಸನ್ಯಾಸಿಗಳ ಮಂದಿರಗಳಲ್ಲಿದ್ದ ಟಿಬೆಟಿಯನ್ನರ ಜನಸಂಖ್ಯೆಯನ್ನು ಈ ಅಂಕಿ-ಅಂಶಗಳು ಒಳಗೊಂಡಿದ್ದವೇ ಅಥವಾ ಇಲ್ಲವೇ ಎಂಬುದು ಅಸ್ಪಷ್ಟವಾಗಿದೆ. 1959ರ ಭಾರತದಲ್ಲಿ ಮರುನೆಲೆಗೊಳ್ಳಲು ಬಂದ ಟಿಬೆಟ್ಟಿನ ಕೆಲವೊಂದು ನಿರಾಶ್ರಿತರಿಗೆ ಸ್ಥಳಾವಕಾಶ ಮಾಡಿಕೊಡಲೆಂದು, ರಾಜ್ಯ ಸರ್ಕಾರದ ವತಿಯಿಂದ ಗುತ್ತಿಗೆ ನೀಡಲ್ಪಟ್ಟ ಜಮೀನಿನಲ್ಲಿ ಈ ವಸಾಹತು ಶಿಬಿರಗಳು ಸ್ಥಾಪಿಸಲ್ಪಟ್ಟವು.
ಈ ಪಟ್ಟಣದ ಹವಾಮಾನವು ಅತ್ಯಂತ ಉತ್ತಮವಾಗಿರುವುದರಿಂದ ಇಲ್ಲಿ ನೀವು ಅದನ್ನು ಬಹಳಷ್ಟು ಆನಂದಿಸಬಹುದು. ಈ ಪಟ್ಟಣಕ್ಕೆ ಉತ್ತಮವಾದ ರೀತಿಯಲ್ಲಿ ರಸ್ತೆಗಳ ಸಂಪರ್ಕವಿದೆ ಮತ್ತು ಇದು ಸರಿಸುಮಾರಾಗಿ ಕಾವೇರಿ ನದಿಯ ದಂಡೆಗಳ ಮೇಲೆ ನೆಲೆಗೊಂಡಿದೆ. ಬೌದ್ಧಮತದ ಮುಂದುವರಿದ ಆಚರಣೆಗಳು ಅಥವಾ ಪರಿಪಾಠಗಳಿಗೆ ಸಂಬಂಧಿಸಿದ ಬೌದ್ಧಮತದ ಅನೇಕ ವಿಶ್ವವಿದ್ಯಾಲಯಗಳನ್ನು ಬೈಲಕುಪ್ಪೆಯು ಹೊಂದಿದೆ. ಸೆರಾಜೇ, ಸೆರಾಮೇ, ನಳಂದಾ ಇತ್ಯಾದಿಗಳು ಅವುಗಳ ಪೈಕಿ ಕೆಲವಾಗಿವೆ.
ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಸಿದ್ದಿ ಬೈರನಿಗೆ ಅವಕಾಶ ನೀಡಲಾಗಿತ್ತು , ಪ್ರಶಾಂತ್ ಸಿದ್ದಿ ಕೆಂಡ ಸಂಪಿಗೆ ಚಿತ್ರದಲ್ಲಿ ಮುಖ್ಯ ಪಾತ್ರ ವಾಹಿಸಿದ್ದನು . ಬೌತಿಶ್ ಹಳ್ಳಿ ಹೈದ ಪ್ಯಾಟೆಗ್ ಬಂದ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ . ಆಡೊ ಅಬ್ದುಲ್ ಕದಿರ್ ಸ ರೀ ಗ ಮ ಪ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ .
ಕರ್ನಾಟಕದ ಸಿದ್ದಿಗಳು, ಈ ರಾಜ್ಯದಲ್ಲಿ ವಾಸವಾಗಿರುವ ಸಿದ್ದಿ ಎಂಬ ಬುಡುಕಟ್ಟಿಗೆ ಸೇರಿದವರು. ಇವರು ಆಗ್ನೇಯ ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರು ಎಂಬ ವಿಷಯವನ್ನು ಮಾನವಶಾಸ್ತ್ರಜ್ಞರು ಈಗಾಗಲೇ ಧೃಢೀಕರಿಸಿದ್ದಾರೆ. ಭಾರತ ದೇಶಕ್ಕೆ ಬಂದಿದ್ದ ಪೋರ್ಚುಗೀಸರು, ತಮ್ಮ ಕಾರ್ಯಾನುಕೂಲಕ್ಕಾಗಿ ಈ ಜನಾಂಗದವರನ್ನು ಆಫ್ರಿಕಾ ಖಂಡದಿಂದ ಇಲ್ಲಿಗೆ ಗುಲಾಮರಾಗಿ ಸಾಗಿಸಿದ್ದರು. ಆ ಕಾರಣದಿಂದಾಗಿ ಭಾರತದಲ್ಲಿ ಇಂದು ಐವತ್ತು ಸಾವಿರ ಸಿದ್ದಿ ಜನರನ್ನು ನಾವು ಕಾಣಬಹುದು.
ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಮಂದಿ ಬೀಡು ಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರ, ಹಳಿಯಾಳ್, ಅಂಕೋಲ, ಮುಂಡ್ಗೋಡ್ ಮತ್ತು ಸಿರಸಿ ತಾಲೂಕುಗಳಲ್ಲಿ, ಬೆಳಗಾವಿ ಜಿಲ್ಲೆಯ ಖನಪುರದಲ್ಲಿ ಮತ್ತು ಧಾರವಾಡ ಜಿಲ್ಲೆಯ ಕಲ್ಘಟ್ಕಿಯಲ್ಲಿ ಸಿದ್ದಿ ಬುಡುಕಟ್ಟವರನ್ನು ಕಾಣಬಹುದು
ನಮ್ಮ ಭಾಷೆ ಕಲಿಯಿರಿ ಎಂದಾಗ ಇಲ್ಲಿರುವ ವಲಸಿಗರು ಕೊಡುವ ಉತ್ತರ “WE are Indians ” ಒಹ್ ಹಾಗಾದರೆ ಬೆಂಗಳೂರು ಭಾರತದ ಭಾಗವಲ್ಲವೇ ? ಏನಾದರೂ ಅನ್ಯಗ್ರಹದಲ್ಲಿದೆಯಾ ?
ಈಗ ನಾನು ನಿಮ್ಮದೇ ಲಾಜಿಕ್ ನಲ್ಲಿ ಪ್ರಶ್ನಿಸುತ್ತೇನೆ ಬೆಂಗಳೂರು ಭಾರತದ ಭಾಗವಲ್ಲವೇ ? ಏನಾದರೂ ಅನ್ಯಗ್ರಹದಲ್ಲಿದೆಯಾ ? ಯಾಕೆ ಬೆಂಗಳೂರಿನ ಜನರನ್ನು ಕಾಮುಕರನ್ನಾಗಿ ಬಿಂಬಿಸುತ್ತಿದ್ದೀರಾ ?
ಎಲ್ಲ ಹೊರ ರಾಜ್ಯದವರನ್ನು ಬರಸೆಳೆದು ಅಪ್ಪಿಕೊಳ್ಳುವ ನಿನ್ನ ಗುಣವನ್ನು ಇತರ ರಾಜ್ಯಗಳಿಗೂ ಕೊಟ್ಟುಬಿಡು ತಾಯಿ ಎಂದು ಅಂದುಕೊಂಡಿದ್ದು ಇದೆ ?
ಈಗ ಹೇಳಲಿ ನಾವು ರೇಸಿಸ್ಟ್ ಗಳೆಂದು ನೋಡೋಣ .