ವೈಷ್ಣೋದೇವಿಯ ಯಾತ್ರೆ

0
1474

vaishnodevi-pindi

ಯಾತ್ರೆ ಆರಂಭವಾಗುವುದು ಕಾತ್ರಾ ಎಂಬ ನಗರದಿಂದ. ಜಮ್ಮು ನಗರದ ಬಸ್ ನಿಲ್ದಾಣದಿಂದ ಬೆಳಿಗ್ಗೆ ೫-೩೦ ರಿಂದ ಆರಂಭವಾಗಿ ಸಂಜೆ ೫-೩೦ ರವರೆಗೆ ಪ್ರತಿ ೧೦ ನಿಮಿಷಕ್ಕೊಮ್ಮೆ ಬಸ್ ಗಳು ಹೊರಡುತ್ತವೆ. ಜಮ್ಮು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಕಾತ್ರಾಕ್ಕೆ ಹೋಗಲು ಅನುಕೂಲವಿದೆ. ಖಾಸಗಿ ಟ್ಯಾಕ್ಸಿಗಳೂ ಲಭ್ಯವಿವೆ.

ಯಾತ್ರಾರ್ಥಿಗಳಿಗೆ ಹಲವಾರು ಬಗೆಯ ವಸತಿ ಸೌಕರ್ಯಗಳು ಜಮ್ಮು ನಗರದಲ್ಲಿ ವಸತಿ ಗೃಹಗಳು,
ಯಾತ್ರಿ ನಿವಾಸ, ಖಾಸಗೀ ಹೋಟೆಲ್ ಗಳು ಬೇಕಾದಷ್ಟಿವೆ. ಕಾತ್ರಾದಲ್ಲಿ ಮಂದಿರ ವ್ಯವಸ್ಥಾಪಕ ಬೋರ್ಡ್ ನವರು ನಡೆಸುವ ಯಾತ್ರಿ ನಿವಾಸ, ಜಮ್ಮು ಕಾಶ್ಮೀರ್ ಟೂರಿಸಂ ಖಾತೆಯವರ ರೆಸ್ಟ್ ಹೌಸ್ ಮತ್ತು ಖಾಸಗೀ ಹೋಟೆಲ್ ಗಳು ಸುಲಭವಾಗಿ ದೊರೆಯುತ್ತವೆ.

amarnath-yatrabanner003

ಕಾತ್ರಾದಿಂದ ಹೊರಡುವ ಯಾತ್ರಾರ್ಥಿಗಳು, ‘ಆಧಕ್ ವರಿ’ ‘ಸಾಂಜೀ ಛತ್’, ಮತ್ತು ‘ದರ್ಬಾರ್’ (ದೇವಿಮಂದಿರ್) ಗಳಲ್ಲಿ ‘ಸರಾಯಿ’ ಎಂಬ ‘ಧರ್ಮಾರ್ಥ ನಿವಾಸ ‘ಗಳಿವೆ. ಮಂದಿರದಲ್ಲಿನ ದೇವಿಯ ದರ್ಶನಕ್ಕೆ ಹೋಗಲು ಟ್ಯಾಕ್ಸಿ ಮತ್ತು ಬಸ್ ನಿಲ್ದಾಣಗಳಲ್ಲಿ ದಳ್ಳಾಳಿಗಳು ಕಾಡುತ್ತಾರೆ. ಇವರನ್ನು ನಂಬುವುದು ಕಷ್ಟ. ಕಾತ್ರ ಬಸ್ ನಿಲ್ದಾಣದ ಯಾತ್ರಾ ರಿಸೆಪ್ಶನ್ ಕೌಂಟರ್ ನಲ್ಲಿ ನಾವು ಮಾಡು ವ ‘ಯಾತ್ರೆಯ ಸ್ಲಿಪ್’ ಪಡೆಯುವುದು ಮೊದಲ ಆದ್ಯತೆ ಇದು ಪುಕ್ಕಟೆಯಾಗಿ ದೊರಕುತ್ತದೆ. ಬಾಣ ಗಂಗಾ ಚೆಕ್ ಪೋಸ್ಟ್ ದಾಟಲು ಇದು ಪರವಾನಗಿ ರಸೀತಿಯಿದ್ದಂತೆ. ಇದನ್ನು ಜೋಪಾನವಾಗಿ ಇಟ್ಟು ಕೊಳ್ಳಬೇಕು.

banner002

ಕಾತ್ರಾದಿಂದ ಬೆಟ್ಟದ ಕಾಲು ದಾರಿಯನ್ನು ಸವೆಸಿ ದೇವಿ ಮಂದಿರಕ್ಕೆ ಹೋಗಲು ಯಾತ್ರಾರ್ಥಿಗಳು ಮುಂದಿನ ೧೩ ಕಿ.ಮೀಗಳ ದೂರವನ್ನು ನಡೆದೇ ಸಾಗಬೇಕು. ಇದಕ್ಕೆ ಸಹಾಯಕವಾದ ಟೋಪಿ, ಕ್ಯಾನ್ವಾಸ್ ಶೂ, ಮತ್ತು ಊರುಗೋಲನ್ನು ಬಾಡಿಗೆ ಪಡೆಯಬಹುದು. ನಮ್ಮ ಲಗೇಜನ್ನು ಒಯ್ಯಲು ಪೀಠುಗಳ ನೆರವು ಪಡೆಯಬಹುದು. ಬೆಟ್ಟವನ್ನು ಏರಲಾರದವರು, ಕುದುರೆ ಅಥವಾ ದಂಡಿ ಬಾಡಿಗೆ ಪಡೆಯಬಹುದು. ಮಕ್ಕಳನ್ನು ಪೀಠುಗಳೂ ಹೆಗಲ ಮೇಲೆ ಕೂಡಿಸಿಕೊಂಡು ಕರೆದೊಯ್ಯುತ್ತಾರೆ.

adhkwari4

ಅಧಿಕೃತವಾದ್ ಲೈಸೆನ್ಸ್ ಹೊಂದಿದ ಪೀಠುಗಳ ನೆರವನ್ನಷ್ಟೆ ಬಳಸುವುದು ಕ್ಷೇಮಕರ. ಅಧಕವರಿಯಿಂದ ಮಂದಿರಕ್ಕೆ ವಿಶೇಷ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಯಿದೆ. ರಸ್ತೆ ಸುಸಜ್ಜಿತವಾಗಿದೆ. ತಲೆಯ ಮೇಲೆ ಲೋಹದ ಸೂರು ಮತ್ತು ನಡೆಯಲು ಉತ್ತಮವಾದ ಹಾಸುಗಲ್ಲಿನ ರಸ್ತೆ. ಕುಡಿಯುವ ನೀರು ಮತ್ತು ಶೌಚಾಲಯದ ಅನುಕೂಲ ಕಲ್ಪಿಸಿದ್ದಾರೆ.

story_sridhar_big

೧ ಕಿ.ಮೀ ನಡೆದರೆ ‘ಬಾಣಗಂಗಾ’ ಸಿಗುತ್ತದೆ.
೬ ಕಿ.ಮೀ. ನಡೆದ ನಂತರ ‘ಆಧಕವರಿ’ ಸಿಗುತ್ತದೆ.
೯.೫ ಕಿ.ಮೀ ದೂರದನಂತರ ‘ಸಾಂಜಿ ಛತ್’ ಸಿಗುತ್ತದೆ.