ಹೊಸ ಸಿನೆಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿ ಧೂಳೆಬ್ಬಿಸುತ್ತಿರುವ ನಾಗರಹಾವು!!

0
727

ಅದೇನೋ ಗೊತ್ತಿಲ್ಲ ಹೊಸ ಹೊಸ ಪ್ಯಾಷನ್ ತಂತ್ರಜ್ಞಾನದಲ್ಲಿ ಜೀವನ ಮಾಡುತ್ತಿರುವ ಈ ಯುವ ಪೀಳಿಗೆ OLD IS GOLD ಎಂಬಥಹ ಕೇಲವೊಂದು ವಾಹನ,ಡ್ರೆಸ್, ಹೀಗೆ ಹಲವಾರು ವಸ್ತುಗಳಿಗೆ ಮಾರುಹೋಗುವುದು ಹೊಸತೇನಲ್ಲ. ಅದರಲ್ಲೂ ಈ ಯಿವಪೀಳಿಗೆ ಬೈಕ್, ಕಾರು, ವಿಷಯದಲ್ಲಿ ಸಾಕಷ್ಟು ಆಸಕ್ತಿ ತೋರುತ್ತಿದ್ದಾರೆ. ತೀರಾಹಳೆಯದೇ ಅಂದ್ರೆ ಹತ್ತು ದಶಕದಾದ್ರು ಸಾವಿರಾರು ರೂಪಾಯಿ ದುಡ್ಡು ಖರ್ಚು ಮಾಡಿ ಥೇಟ್ ಷೋರೂಮ್ ಇಂದಾನೆ ಬಂದಿರುವ ಹಾಗೆನೇ ಮರುಸೃಷ್ಟಿ ಮಾಡುವುದು ನೋಡ್ತಾನೆ ಇದ್ದೀವಿ. ಇಂತಹ TREND ಇಷ್ಟಕ್ಕೆ ಸುಮ್ನನಾಗದೆ ಈ ಯಂಗ್ಸ್ಟಾರ್ಸ್ ಇತ್ತೀಚಿಗೆ ಓಲ್ಡ್ ಮೂವೀಸ್ಗಳನ್ನು ಹೊಸ ಮ್ಯೂಸಿಕ್, ಕಲರ್, ಸೈಜ್ ಹೀಗೆ ಎಲ್ಲವನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಿ HD ಅಂತಹ ಸಿನಿಮಾಕೆ ಸವಾಲೊಡ್ಡುವ ಹಾಗೆ ಮಾಡುತ್ತಿರುವುದು ಆಶ್ಚರ್ಯಾನೆ.

ಇಂತಹದೇ ಮರುಬಣ್ಣ ಪಡೆದು ಸುದ್ದಿಯಲ್ಲಿರುವ ‘ನಾಗರಹಾವು’ ಸಿನಿಮಾ ಸುಮಾರು 1972 ರಲ್ಲಿ ಚಿತ್ರ ಬ್ರಹ್ಮ ಎಸ್.ಆರ್ ಪುಟ್ಟಣ್ಣ ಕಣ್ಣಗಾಲ್ ಅವರ ನಿರ್ದೇಶನ ಮತ್ತು ನಿರ್ಮಾಪಕ ಎನ್. ವೀರಸ್ವಾಮಿ ಅವರ ಸಹಯೋಗದೊಂದಿಗೆ ತೆರೆಕಂಡು ಇತಿಹಾಸವನ್ನೇ ಬರೆದಿತ್ತು. ಇನ್ನು ಈ ಸಿನಿಮಾದ ನಾಯಕ ಡಾ.ವಿಷ್ಣುವರ್ದನ್ ಅವರ ಅಭಿನಯ, ಅವರ ಡೈಲಾಗ್! “ಬರೀ ಹಾವುಅಲ್ಲ ಮೇಷ್ಟ್ರೇ ನಾಗರಹಾವು” ಈ ಡೈಲಾಗ್ಗಿನ ಹಾವು ಹಾವು ಜನರ ಹೃದಯದಲ್ಲೆ ಹರಿದಾಡಿತ್ತು.

ಇನ್ನು ಜೀವನದಲ್ಲೇ ಯಾವತ್ತು ಸಿನಿಮಾ ನೋಡಿಲ್ಲದ ಕೆಲವರು ಈ ಸಿನಿಮಾವನ್ನು ಮೂರ್ನಾಲ್ಕು ಸಾರಿ ನೋಡಿದ್ರಂತೆ ಹಾಗೆ ಈ ಸಿನಿಮಾ ನೋಡಲು ಆಗಿನ ದಿನದಲ್ಲಿ ಕುಟುಂಬ ಸಮೇತವಾಗಿ ಥಿಯೇಟರಿಗೆ ಬಂದು ದಿನವಿಡಿ ಕಾದು ಟಿಕೆಟ್ ಪಡೆದು ಸಿನಿಮಾ ನೋಡ್ತಿದ್ರು ಅಂತೆ. ಇದು ಪಟ್ಟಣ್ಣ ಜನರ ಅನುಭವ ಆದ್ರೇ ಹಳ್ಳಿಯಿಂದ ಚಕ್ಕಡಿ ಸೈಕಲ್ಏರಿ ‘ಊಟ ನೀರು’ ಕಟ್ಟಿಕೊಂಡು. ದೂರದ ಪ್ಯಾಟಿಗೆ ಬಂದು ದಿನವೀಡಿ ಕಾದು ಹೇಗಾದರೂ ಮಾಡಿ ಟಿಕೆಟ್ ತೆಗೆದುಕೊಂಡು ಒಂದೇ ದಿನ ಎರಡು,ಮೂರು ಶೋ ನೋಡ್ಕೊಂಡು ಹೋಗ್ತಿದ್ರು ಅಂತೆ, ಅಷ್ಟೋOದು ಜನಪ್ರಿಯೆತೆ ಗಳಿಸಿದ ‘ರಾಮಾಚಾರಿ’ಯ ನಾಗರಹಾವು.

ಸುಮಾರು ದಶಕಗಳ ನಂತರ ವಿ.ಬಾಲಾಜಿ ಅವರು 7.1 ಡಿಜಿಟಲ್ ಹೈಟೆಕ್ ಸೌಂಡ್ ಮೂಲಕ ಫುಲ್ ತೆರೆಮೇಲೆ ತಂದು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡ್ಡುತ್ತಿರುವುದು ಕನ್ನಡ ಸಿನಿಮಾ ರಂಗದಲ್ಲಿ ಹೊಸದೊಂದು ಸಂಚಲನ ಮೂಡಿಸಿದೆ. ನಾಗರಹಾವು ಸಿನಿಮಾ ರಾಜ್ಯದ ತುಂಬೆಲ್ಲ ಬಿಡುಗಡೆ ಆದ ಒಂದೇ ವಾರದಲ್ಲಿ ನೀರಿಕ್ಷೆಗಿಂತ ಹೆಚ್ಚಿನ ಹಣ ಸಂಪಾದನೆ, ಮತ್ತು ಜನಮೆಚ್ಚುಗೆ ಪಡ್ಡೆದಿದೆ. ಇನ್ನು ರಾಮಾಚಾರಿ (ವಿಷ್ಣುವರ್ಧನ್) ಅಭಿಮಾನಿಗಳು ಅಂತೂ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಸಿನಿಮಾವನು ಕೆಲವೊಂದು ಸೆಲೆಬ್ರೆಟಿ ಮತ್ತು ರಾಜಕೀಯ ನಾಯಕರು ನೋಡಿ ಹಳೇಯ ಸಿನಿಮಾದ ದಿನಗಳನ್ನು ನೆನಪಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದು ಒಂದು ಕಡೇ ಆದ್ರೇ ‘ವಿಷ್ಣುವರ್ಧನ್’ ಕಳೆದುಕೊಂಡ ಅಭಿಮಾನಿಗಳು ಈ ಸಿನಿಮಾ ನೋಡ. ಮತ್ತೆ ರಾಮಾಚಾರಿ ಪುನರ್ಜನ್ಮ ಪಡೆದಂತೆ ಆಗಿದೆಯೆಂದು ಅಭಿಪ್ರಾಯ ವ್ಯಕ್ತ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಣ್ಣೀರು ಹಾಕಿ ಇಂತಹ ಸಮಯದಲ್ಲಿ ಡಾ. ವಿಷ್ಣುವರ್ದನ್ ಇರಬೇಕಿತ್ತು ಅಂದ್ರು. ಇದನೆಲ್ಲ ನೋಡಿದ್ರೆ. ಏನೇ ಇರ್ಲಿ ಹಳೆಯ ವಿಷಯ, ವಸ್ತುಗಳ ನೆನಪಿನ ಮಜಾನೆ ಬೇರೆ ಆಲ್ವಾ?