ಕರ್ನಾಟಕದ ಮಗಳು ತಮಿಳುನಾಡಿಗೆ ಪಾದಯಾತ್ರೆ

0
860

ಮದುವೆ ದಿಬ್ಬಣಕ್ಕೆ ಬಿಸಿ ತಟ್ಟಿದ ಕಾವೇರಿ ಹೋರಾಟ

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಕಾವೇರಿ ಹೋರಾಟ, ವಿವಾದದ ಹಿನ್ನಲೆಯಲ್ಲಿ ತಮಿಳುನಾಡು ಹಾಗೂ ಬೆಂಗಳೂರಿನ ನಡುವೆ ಸಾರಿಗೆ ಸಂಚಾರ ಬಂದ್ ಆಗಿದ್ದು, ಆದ್ರೆ ಬೆಂಗಳೂರಿನ 16 ಕಡೆ ಕರ್ಪ್ಯೂ ಜಾರಿಯಲ್ಲಿದೆ. ಮನೆಯಿಂದ ಯಾರೂ ಹೊರಬರುವಂತಿಲ್ಲ. ಹಾಗಾಗಿ ಮದುವೆಗೆ ಅಡ್ಡಿಯುಂಟಾಗಿದೆ. ಮದುವೆ ದಿಬ್ಬಣಕ್ಕೂ ಬಿಸಿ ತಟ್ಟಿದೆ. ತಮಿಳುನಾಡಿನಲ್ಲಿರುವ ‘ವರ’ ನ ಊರಿಗೆ ಬೆಂಗಳೂರಿನಿಂದ ‘ವಧು’ ನಡಿಗೆ ಮೂಲಕ ಹೊರಟ ಘಟನೆ ರಾಷ್ಟ್ರೀಯ ಮಾಧ್ಯಮಗಳನ್ನು ಸೆಳೆದಿದೆ.

ಇದರ ಪರಿಣಾಮ ಎಂಬಂತೆ ಬೆಂಗಳೂರಿನಿಂದ ತಮಿಳುನಾಡಿನ ತಿರುವಣಮಲೈಯಲ್ಲಿ ಬುಧವಾರ ಮದುವೆ ಆಗಬೇಕಿದ್ದ ವಧು-ವರರು ಕೂಡ ತೊಂದರೆ ಅನುಭವಿಸಿದರು. ಮಂಗಳವಾರ ಗಡಿ ಪ್ರದೇಶ ಅತ್ತಿಬೆಲೆ ಮಾರ್ಗವಾಗಿ ಪೋಷಕರೊಂದಿಗೆ ಈ ವಧು-ವರರು ತಮಿಳುನಾಡಿಗೆ ಖಾಸಗಿ ವಾಹನದಲ್ಲಿ ಹೊರಟಿದ್ದರು. ಆದ್ರೆ, ಗಡಿಯಲ್ಲಿ ಈ ವಾಹನವನ್ನು ನಿಲ್ಲಿಸಿದ್ದಾರೆ. ಇದರಿಂದ ವಧು ಪ್ರೇಮಾ ಹಾಗೂ ವರ ಸೇರಿದಂತೆ ಸಂಬಂಧಿಕರು ಕೆಲ ಕಿಲೋ ಮೀಟರ್ ನಡೆದುಕೊಂಡು ಹೋದರು.

ಸಾಮಾನ್ಯವಾಗಿ ವಧುವಿನ ಮನೆ ಕಡೆಗೆ ವರನ ಮನೆಯವರ ದಿಬ್ಬಣ ಬರುತ್ತದೆ. ಆದರೆ, ತಮಿಳುನಾಡಿನ ಹೊಸೂರಿನಲ್ಲಿರುವ ವರನ ಮನೆ ಕಡೆಗೆ ವಧುವಿನ ಕಡೆಯವರು ಅನಿವಾರ್ಯವಾಗಿ ನಡೆದುಕೊಂಡು ಹೋಗಿರುವ ದೃಶ್ಯ ಕಂಡು ಬಂದಿದೆ. ಸೆ. 14 ರಂದು ಮದುವೆ ನಿಗದಿಯಾಗಿದೆ.

ಆರ್. ಪ್ರೇಮಾ ಎಂಬ 25ರ ಹರೆಯದ ಕಾಮರ್ಸ್ ಪದವೀಧರೆ ತಮಿಳುನಾಡಿನ ವಣಿಯಂಬಾಡಿ ಎಂಬಲ್ಲಿರುವ ವರನ ಮನೆಗೆ ತಲುಪುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಈ ಊರಿಗೆ ತಲುಪಲು ಯಾವುದೇ ಬಸ್ ಸೌಲಭ್ಯ ಸಿಕ್ಕಿಲ್ಲ.

ಆದರೆ, ಬಸ್ ಸಂಚಾರವಿಲ್ಲದ ಕಾರಣ, ಸ್ವಂತ ವಾಹನಗಳಲ್ಲೂ ತೆರಳಲು ಜನ ಹಿಂಜರಿದಿದ್ದಾರೆ. ನಾವು ಸ್ವಲ್ವ ದೂರ ಬಸ್ಸಿನಲ್ಲಿ, ಸ್ವಲ್ಪ ದೂರ ಆಟೋದಲ್ಲಿ ಕ್ರಮಿಸಿ, ಬಳಿಕ ತಮಿಳುನಾಡಿನ ಹೊಸೂರು ಕಡೆಗೆ ಈಗ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಪ್ರೇಮಾ ಅವರ ಸಂಬಂಧಿಕರು ಹೇಳಿದ್ದಾರೆ.

ಮಾಧ್ಯಮಗಳ ಕಣ್ಣಿಗೆ ಈ ಮದುವೆ ದಿಬ್ಬಣ ಬೀಳುವ ವೇಳೆ ಇವರು ನಾಲ್ಕು ಗಂಟೆಗಳ ಕಾಲ ಪಾದಯಾತ್ರೆ ಮಾಡಿರುವುದು ಕಂಡು ಬಂದಿದೆ. ಉಭಯ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ವಧು ಪ್ರೇಮಾ ಹೇಳಿದ್ದಾರೆ. ಬೆಂಗಳೂರಿನ ಜಾಲಹಳ್ಳಿ, ಯಶವಂತಪುರ ಮುಂತಾದೆಡೆ ಕೂಡಾ ಮದುವೆ ಕಾರ್ಯಗಳಿಗೆ ಕಾವೇರಿ ವಿವಾದ ಬಿಸಿ ತಟ್ಟಿದೆ. ಹೀಗಾಗಿ ಮದುಮಗಳಾದ ಪ್ರೇಮಾ ಅವರು ತನ್ನ ಕುಟುಂಬ ಸದಸ್ಯರ ಸಹಿತವಾಗಿ ವಧುವಿನ ಉಡುಪಿನಲ್ಲೇ ಬೆಂಗಳೂರಿನಿಂದ ತಮಿಳುನಾಡಿನ ಗಡಿಯಲ್ಲಿರುವ ಹೊಸೂರಿನ ತನಕ ತಾಸುಗಟ್ಟಲೆ ನಡೆದುಕೊಂಡು ಹೋಗಿದ್ದಾರೆ.