ಭಾರತ-ಪಾಕ್ ಯುದ್ಧ ಫಿಕ್ಸ್..! ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ; ರಜೆಯ ಮೇಲೆ ತೆರಳಿದ ಸೈನಿಕರಿಗೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ..

0
742

ಭಾರತ ಪಾಕ್ ನಡುವೆ ವಿವಾಧಗಳು ಬಹುದಿನಗಳಿಂದ ನಡೆಯುತ್ತಿದು ಭಾರತ ಇದಕ್ಕೆ ಎಷ್ಟೇ ಮನವರಿಕೆ ಮಾಡಿದರು ಕಗ್ಗಲಿನಂತ್ತಿರುವ ಪಾಕ್ ಉಗ್ರರನು ಚೂ ಬಿಟ್ಟು ಭಾರತವನ್ನು ಕೆಣಕುತ್ತಿದೆ. ಆದಕಾರಣ ಪಾಕ್-ಗೆ ಬುದ್ದಿ ಕಲಿಸಲು ಯುದ್ದವೆ ಸರಿ ಎಂದು ಭಾರತದ ತುಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಅದರಂತೆ ಒಂದು ದಿನದ ಹಿಂದೆ ನಡೆದ ಉಗ್ರರ ಮೇಲಿನ ದಾಳಿಗೆ ಪಾಕ್ ತಿರುಗೇಟು ನೀಡುವ ಕುರಿತು ಎಚ್ಚರಿಕೆ ತಿಳಿಸಿತ್ತು. ಆ ಹಿನ್ನೆಲೆಯಲ್ಲಿ ಇಂದು ಪಾಕ್ ಯುದ್ದ ವಿಮಾನಗಳು ಭಾರತದ ಗಡಿಯೊಳಗೆ ನುಸುಳಿರುವ ಆತಂಕಕಾರಿ ಘಟನೆ ನಡೆದಿದೆ. ಇದೆಲ್ಲ ಚಕಮಕಿಯಲ್ಲಿ ಭಾರತವು ಯುದ್ದಕ್ಕೆ ಎಲ್ಲ ತಯಾರಿ ನಡೆಸಿದೆ.

ಗಡಿಯೊಳಗೆ ನುಸುಳಿದ ಪಾಕ್ ವಿಮಾನಗಳು;

ಹೌದು ಜಮ್ಮುಕಾಶ್ಮೀರದ ರಜೌರಿಯಲ್ಲಿ ಪಾಕಿಸ್ತಾನದ ಮೂರು ವಿಮಾನಗಳು ಇಂದು ಬೆಳಗ್ಗೆ ಭಾರತದ ಗಡಿಯೊಳಗೆ ನುಸುಳಿ ದಾಳಿ ನಡೆಸಲು ಮುಂದಾಗಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಭಾರತದ ವಾಯುಪಡೆ ವಿಮಾನಗಳು ವೈರಿ ಪಡೆಯ ಫೈಟರ್ ಜೆಟ್‍ಗಳನ್ನು ಹಿಮ್ಮೆಟ್ಟುವಲ್ಲಿ ಯಶಸ್ವಿಯಾಗಿವೆ. ಬುದ್ಗಾಂವ್‍ನಲ್ಲಿ ಭಾರತದ ಗಡಿಯನ್ನು ಕಾವಲು ಕಾಯುತ್ತಿದ್ದ ಮಿಗ್-21 ಯುದ್ಧ ವಿಮಾನ ಪತನಗೊಂಡು ಇಬ್ಬರು ಪೈಲೆಟ್‍ಗಳು ದುರ್ಮರಣ ಹೊಂದಿದ್ದಾರೆ. ಈ ಘಟನೆ ಹಿಂದೆ ಪಾಕಿಸ್ತಾನದ ಕೈವಾಡವಿರುವ ಸಾಧ್ಯತೆ ಬ್ಗೆಯೂ ಸೇನಾ ಪಡೆಗಳು ಶಂಕೆ ವ್ಯಕ್ತಪಡಿಸಿದ್ದು, ಬೆಳಗ್ಗೆ ಇದ್ದಕ್ಕಿದ್ದಂತೆ ಪಾಕಿಸ್ತಾನದ ರಕ್ಷಣಾ ಪಡೆಗೆ ಸೇರಿದ ಮೂರು ಎಫ್16 ಯುದ್ದ ವಿಮಾನಗಳು ಕದನ ವಿರಾಮ ಉಲ್ಲಂಘಿಸಿ ಭಾರತದ ಗಡಿಯೊಳಗೆ ನುಸುಳಿವೆ ಅದರಂತೆ ಪಾಕಿಸ್ತಾನದಿಂದ ಭಾರತದ ಮೇಲೆ ಯಾವುದೇ ಸಂದರ್ಭದಲ್ಲಿ ದಾಳಿ ನಡೆಯುವ ಸಾಧ್ಯತೆಯಿದ್ದು, ಹಿಂಸಾಪೀಡಿತ ಕಣಿವೆ ರಾಜ್ಯದ ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಿರುವುದರಿಂದ ನಡೆಯಬಹುದಾದ ದೊಡ್ಡ ಪ್ರಮಾಣದ ಅನಾಹುತ ತಪ್ಪಿದಂತಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಹೇಗಿದೆ ತಯಾರಿ?

ಭಾರತ ಪ್ರತಿಕಾರಕ್ಕಾಗಿ ಮಾಡಿದ ಉಗ್ರರ ಮೇಲಿನ ಬಾಂಬ್ ದಾಳಿಯಿಂದ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿರುವುದರಿಂದ ಜಮ್ಮುಕಾಶ್ಮೀರದಲ್ಲಿ ಸೇನಾ ಪಡೆ ಹೈ ಅಲರ್ಟ್ ಘೋಷಣೆ ಮಾಡಿದೆ. ರಾಜಧಾನಿ ಶ್ರೀನಗರ, ಲೇಹ್, ರಜೌರಿ, ಜಮ್ಮು, ನೌಶೇರಾ, ಪಠಾಣ್‍ಕೋಟ್ ಸೇರಿದಂತೆ ಎಲ್ಲ ಕಡೆ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಕೆಲ ಉಗ್ರಗಾಮಿ ಸಂಘಟನೆಗಳು ವಿಮಾನ ಅಪಹರಣ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಹೇಳಿದೆ. ಹೀಗಾಗಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಜೆದಲ್ಲಿರುವ ಸೈನಿಕರಿಗೆ ತಕ್ಷಣವೇ ಬರಲು ಸೂಚನೆ:

ಹೊತೊತ್ತಿಗೂ ಗಡಿಯಲ್ಲಿ ಯುದ್ದದ ಲಕ್ಷಣಗಳು ಕೇಳಿಬರುತ್ತಿದ್ದು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭೂಸೇನೆ, ವಾಯುಸೇನೆ, ನೌಕಾಪಡೆ, ಗುಪ್ತಚರ ವಿಭಾಗ, ರಾ ವಿಭಾಗ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಪಾಕ್‍ಗೆ ಎಫ್16 ಯುದ್ಧ ವಿಮಾನ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿತು. ಇನ್ನೊಂದೆಡೆ ಬುದ್ಗಾವ್‍ನಲ್ಲಿ ಎಂ-17 ಸರಕು ಸಾಗಾಣಿಕೆ ವಿಮಾನ ತಾಂತ್ರಿಕ ಕಾರಣದಿಂದ ಸ್ಫೋಟಗೊಂಡು ಇಬ್ಬರು ಪೈಲೆಟ್‍ಗಳು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ. ಈ ವಿಮಾನವನ್ನು ನಾವೇ ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಹೀಗಾಗಿ ಕಣಿವೆ ರಾಜ್ಯದ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳ ಜೊತೆ ರಾಜನಾಥ್ ಸಿಂಗ್ ಮಾಹಿತಿ ಪಡೆದಿದ್ದಾರೆ. ಇತ್ತ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಕೂಡ ಮೂರು ಪಡೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಭದ್ರತೆ ಬಗ್ಗೆ ಮಾಹಿತಿ ಪಡೆದರು. ರಕ್ಷಣಾ ಪಡೆಯ ಎಲ್ಲ ಪೈಲೆಟ್‍ಗಳು ಸನ್ನದ್ಧವಾಗಿರಬೇಕು. ರಜೆ ತೆಗೆದುಕೊಂಡಿರುವ ಸೈನಿಕರಿಗೂ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಭಾಷಣ ನಿಲ್ಲಿಸಿ ತೆರಳಿದ ಮೋದಿ:

ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪಾಕ್ ಯುದ್ದ ವಿಮಾನಗಳು ಭಾರತದ ಗಡಿಯೊಳಗೆ ನುಸುಳಿದ ವಿಷಯವನ್ನು ವಿಜ್ಞಾನ ಭವನದಲ್ಲಿ ಮೋದಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿವ ರಾಜವರ್ಧನ್ ರಾಠೋಡ್ ದಾಳಿಯ ಕುರಿತು ಮಾಹಿತಿ ನೀಡಿದರು. ಕೂಡಲೇ ಭಾಷಣ ನಿಲ್ಲಿಸಿದ ಮೋದಿ ಅಲ್ಲಿಂದ ತೆರಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಪ್ರಧಾನಿ ಮೋದಿ, ಕಾರ್ಯಕ್ರಮ ಮೊಟಕುಗೊಳಿಸಿ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ. ಸಂಜೆಯ ವೇಳೆಗೆ ಇನ್ನೂ ಕದನದ ಬೆಳವಣಿಗೆ ಹೇಗಿದೆ ಅನ್ನೋದು ಕಾಡು ನೋಡಬೇಕಿದೆ.

Also read: ಉಗ್ರರನ್ನು ನಾಶ ಮಾಡಿದ ಭಾರತಕ್ಕೆ ಪಾಕ್ ಎಚ್ಚರಿಕೆ; ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ವಾರ್ನಿಂಗ್..