ಮಾಸ್ಕ್ ಬಳಸದಿದ್ರೆ ಬರುತ್ತೆ ಕರೋನ, ಮಾಸ್ಕ್ ಬಳಕೆಯಿಂದ ಬರುತ್ತೆ “ಮಾಸ್ಕ್ ಮೌತ್ ಸಿಂಡ್ರೋಮ್” ಅನ್ನೋ ಖಾಯಿಲೆ, ಅದು ಬಾರದಂತೆ ತಡೆಗಟ್ಟುವ ವಿಧಾನ ಹೇಳ್ತೀವಿ ತಪ್ಪದೇ ಓದಿ!!

0
885

ನೀವು ಧರಿಸುವ ಮಾಸ್ಕ್ ಗಳೇ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು “ಮಾಸ್ಕ್ ಮೌತ್ ಸಿಂಡ್ರೋಮ್”. ಪ್ರತಿನಿತ್ಯ ಮಾಸ್ಕ್ ಧರಿಸಿಕೊಂಡೇ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುತ್ತಿದೆ.

Also read: ಮುಂದಿನ ವರ್ಷ ಕರೋನ ಲಸಿಕೆಗಳು ಬರುತ್ತವೆಯಂತೆ, ಧೈರ್ಯದಿಂದ ನೀವು ಅದನ್ನು ತೆಗೆದುಕೊಳ್ಳುತ್ತೀರ??

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯಿಂದ ಮಾಸ್ಕ್ ಧರಿಸುವುದನ್ನು ಕೇಂದ್ರ ಸರ್ಕಾರವೇ ಕಡ್ಡಾಯಗೊಳಿಸಿದೆ. ಸಾರ್ವಜನಿಕ ಬದುಕಿನಲ್ಲಿ ಮಾಸ್ಕ್ ಗಳು ಇದೀಗ ಅವಿಭಾಜ್ಯ ಅಂಗ ಎನ್ನುವಂತೆ ಬೆರೆತು ಹೋಗಿದೆ. ಮಾಸ್ಕ್ ಧರಿಸುವುದರಿಂದ ಕೊವಿಡ್-19 ಸೋಂಕಿನಿಂದ ಅಂತರ ಕಾಯ್ದುಗೊಳ್ಳಬಹುದು. ಮಹಾಮಾರಿಯಿಂದ ಸುರಕ್ಷಿತವಾಗಿ ಇರಬಹುದು ಎಂದು ತಜ್ಞವೈದ್ಯರು ಸಲಹೆ ನೀಡುತ್ತಾರೆ. ಆದರೆ ಅದೇ ಮಾಸ್ಕ್ ಗಳಿಂದ ಹೊಸ ರೀತಿಯ ರೋಗ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮೇಲಿಂದ ಮೇಲೆ ದೂರುಗಳು ಕೇಳಿ ಬರುತ್ತಿವೆ.

ದಿನದಲ್ಲಿ 8 ರಿಂದ 10 ಗಂಟೆ ಮಾಸ್ಕ್ ಧರಿಸುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ಅನೇಕರು ಮಾಸ್ಕ್ ಧರಿಸುತ್ತಾರೆ. ಇದರಿಂದ ಬಾಯಿ ದುರ್ವಾಸನೆ, ತಲೆ ನೋವು, ಗಂಟಲು ಒಣಗುವಿಕೆ ಸೇರಿದಂತೆ ಹಲವು ರೀತಿ ಸಮಸ್ಯೆಗಳು ಕಂಡು ಬರುತ್ತಿವೆ. ಅದನ್ನೇ ಮಾಸ್ಕ್ ಮೌತ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ದೀರ್ಘಕಾಲಿಕ ಮಾಸ್ಕ್ ಧರಿಸುವುದರಿಂದ ಶೇ.20ಕ್ಕಿಂತ ಹೆಚ್ಚು ಜನರಲ್ಲಿ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂಬ ದೂರು ಕೇಳಿ ಬಂದಿದೆ.

ಈಗಿನ ಸಾರ್ವಜನಿಕ ಜೀವನದಲ್ಲಿ ಅನಿವಾರ್ಯವಾಗಿರುವ ಮಾಸ್ಕ್ ಗಳನ್ನು ದೀರ್ಘಕಾಲದವರೆಗೂ ಧರಿಸುವುದರಿಂದ ಕಿವಿ ನೋವು, ತಲೆ ನೋವು, ಒಸಡುಗಳಲ್ಲಿ ನೋವು ಮತ್ತು ಉಸಿರಾಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಲ್ಲು ನೋವು ಕೂಡಾ ಸಹಜವಾಗುತ್ತಿದೆ. ಆದರೆ ಮಾಸ್ಕ್ ಗಳು ಅತ್ಯಗತ್ಯವಾಗಿದ್ದು, ಅದನ್ನು ನಿರ್ಲಕ್ಷಿಸುವಂತಿಲ್ಲ. ಬಾಯಿ ಒಣಗುವಿಕೆ ಮತ್ತು ದುರ್ವಾಸನೆಯನ್ನು ಸೂಕ್ತ ಕ್ರಮಗಳನ್ನು ಅನುಸರಿಸುವುದರ ಮೂಲಕ ತಡೆಯುವುದಕ್ಕೆ ಸಾಧ್ಯವಿದೆ ಎಂದು ತಜ್ಞವೈದ್ಯ ಡಾ.ಮನೋಜ್ ಚಾಂಡಿ ತಿಳಿಸಿದ್ದಾರೆ.

ಇನ್ನು ಪ್ರತಿನಿತ್ಯ 8 ರಿಂದ 10 ಗಂಟಗಳ ಕಾಲ ಮಾಸ್ಕ್ ಧರಿಸಿಕೊಂಡೇ ಕೆಲಸ ಮಾಡುವ ಜನರು ಮತ್ತು ಅವರ ಸಂಬಂಧಿಕರು ಹಲವು ಬಗೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ಹೇಳುತ್ತಿದ್ದಾರೆ. ಇತ್ತೀಚಿಗೆ ಆನ್ ಲೈನ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 514 ಜನರನ್ನು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿದ್ದು, ಮಾಸ್ಕ್ ಧರಿಸುವುದರಿಂದ ಶೇ.16ರಷ್ಟು ಜನರಿಗೆ ಬಾಯಿ ದುರ್ವಾಸಣೆ ಸಮಸ್ಯೆ ಕಾಣಿಸಿಕೊಂಡಿದೆ. ಶೇ22ರಷ್ಟು ಜನರಿಗೆ ಬಾಯಿ ಒಣಗುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಮೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರಿಸುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ಪ್ರಮಾಣವು ಕಡಿಮೆಯಾಗಿದೆ. ಈ ಸಂಖ್ಯೆಯನ್ನು ಹೆಚ್ಚಿಸಿದಷ್ಟು ಶೇಕಡಾವಾರು ಪ್ರಮಾಣ ಹೆಚ್ಚಾಗಲಿದೆ ಎಂದು ಪಿಯಾಂಟಿಸ್ಟ್ ಸಲಹೆಗಾರ ಮಣಿಕಂದನ್ ತಿಳಿಸಿದ್ದಾರೆ.

ಜೊತೆಗೆ ಕಾರಣ ಮಾಸ್ಕ್ ಧರಿಸಿದ ಸಂದರ್ಭಗಳಲ್ಲಿ ಕೆಲವರು ತಮ್ಮ ಬಾಯಿ ಮೂಲಕ ಉಸಿರಾಡುತ್ತಾರೆ. ಇದರಿಂದಾಗಿ ಬಾಯಿ ದುರ್ವಾಸನೆ ಮತ್ತು ಮುಖ್ಯವಾಗಿ ಒಡಸುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜೊತೆಗೆ ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುವುದಕ್ಕೂ ಇದುವರೇ ಕಾರಣವಾಗಿರುತ್ತದೆ. ಸಾಮಾನ್ಯವಾಗಿ, ಬಾಯಿಯ ಮೂಲಕ ಉಸಿರಾಡುವ ಜನರು ಮತ್ತು ಈ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿರುತ್ತದೆ. ಅಂತಹ ಜನರಿಗೆ ಗಮ್ ಉರಿಯೂತ ಹೆಚ್ಚಾಗುವ ಸಾಧ್ಯತೆಯಿದೆ. ಬಾಯಿಯ ಮೂಲಕ ಉಸಿರಾಡುವುದರಿಂದ ಒಸಡುಗಳು ಒಣಗಬಹುದು. ಒಣ ಬಾಯಿಯ ಸಂದರ್ಭದಲ್ಲಿ, ಲಾಲಾರಸವು ಕಡಿಮೆಯಾಗುತ್ತದೆ, ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ ಎಂದು ಪಿಯಾಂಟಿಸ್ಟ್ ಸಲಹೆಗಾರ ಮಣಿಕಂದನ್ ಹೇಳಿದ್ದಾರೆ.

ಪ್ರತಿದಿನ ಮಾಸ್ಕ್ ಗಳನ್ನು ಧರಿಸಿ ನಿರಂತರವಾಗಿ ಕಾರ್ಯ ನಿರ್ವಹಿಸುವ ಜನರು ಈ ಸುರಕ್ಷತಾ ಕ್ರಮಗಳ ಬಗ್ಗೆ ಕಾಳಜಿ ವಹಿಸಬೇಕು. ದೈನಂದಿನ ಆಹಾರಕ್ರಮದಲ್ಲಿ ಸಂಸ್ಕರಿಸಿದ ಆಹಾರಕ್ಕಿಂತ ಹೆಚ್ಚಾಗಿ ಹೈಡ್ರೀಕರಿಸಿದ ಮತ್ತು ಫೈಬರ್ ಭರಿತ ಆಹಾರವನ್ನು ಇಟ್ಟುಕೊಳ್ಳಬೇಕು. ಅಲ್ಲದೆ, ಉಸಿರಾಟದ ತೊಂದರೆ ಅನುಭವಿಸುವವರು ಒಂದು ಗಂಟೆಗೆ ಒಂದು ಬಾರಿ ಐದು ನಿಮಿಷಗಳ ವಿರಾಮ ತೆಗೆದುಕೊಂಡು ಮಾಸ್ಕ್ ಗಳನ್ನು ತೆಗೆದುಹಾಕಬೇಕು ಎಂದು ವೈದ್ಯ ಡಾ. ಮನೋಜ್ ತಿಳಿಸಿದ್ದಾರೆ.