ಮಾರಾಟವಾಗುವ ಎಲ್ಲಾ ವಾಚ್‌ಗಳಲ್ಲೂ ಸಮಯ 10:10 ಎಂದು ಯಾಕೆ ಇರುತ್ತದೆ ಗೊತ್ತಾ..?

0
4589

ಹೀಗೆ ಒಮ್ಮೆ ಗಡಿಯಾರದ ಅಂಗಡಿಗೆ ಭೇಟಿ ಕೊಟ್ಟೆ, ಗಡಿಯಾರಗಳನ್ನು ನೋಡುತ್ತಾ ಸಾಗುತ್ತಿದಂತೆ ನನಗೊಂದು ಆಶ್ಚರ್ಯ ಕಾದಿತ್ತು. ಯಾವ ಗಡಿಯಾರದ ಕಡೆ ಕಣ್ಣು ಹಾಯೆಸಿದರೂ… ಗಂಟೆ ಎಷ್ಟೇ ಇದ್ದರೂ… ಗಡಿಯಾರದ ಮುಳ್ಳು ಮಾತ್ರ 10.10 ತೋರುತ್ತಿತ್ತು. ಯಾಕೋ ವಿಚಾರ ತಿಳಿದುಕೊಳ್ಳಬೇಕು ಎಂದೆನಿಸಿ ಅದರ ಬಗ್ಗೆ ಕೆದಕಿದಾಗ ಬಹಳಷ್ಟು ಸಂಗತಿಗಳ ಅರಿವಾಯಿತು.

ಅವುಗಳೇನೆಂದರೆ…

ಸಮಯ 10: 10 ಎಂದು ತೋರಿಸಲು ಪ್ರಮುಖ ಕಾರಣ ಏನೆಂದರೆ ಇದು ಮೊದಲ ನೋಟದಲ್ಲಿಯೇ ಸರಿಯಾಗಿ ಕಾಣಿಸುತ್ತದೆ. ಈ ಟೈಮ್‌ ನೋಡಲು ಮತ್ತೆ ಮತ್ತೆ ಅದನ್ನು ನೋಡುವ ಅವಶ್ಯಕತೆ ಇಲ್ಲ. ಹೀಗೆ ಇರುವುದರಿಂದ ಬ್ರ್ಯಾಂಡ್‌ ಹೆಸರು ಮತ್ತು ವಾಚ್‌ನ ಬೇರೆ ವಿಶೇಷತೆ ಎಲ್ಲವೂ ಸರಿಯಾಗಿ ಕಾಣಿಸುತ್ತದೆ.

10:10 ಎಂದು ತೋರಿಸುತ್ತಿರುವ ಗಡಿಯಾರವು ನಗುವಿನ ಆಕೃತಿಯಲ್ಲಿರುತ್ತದೆ. ಇದು ಒಂದು ಒಳ್ಳೆಯ ಸಕಾರಾತ್ಮಕ ಚಿಹ್ನೆಯಾಗಿದೆ. ಇದಕ್ಕೂ ಮೊದಲು 8 :10 ಎಂದು ಸಮಯ ತೋರಿಸುತ್ತಿತ್ತು. ಆದರೆ ಈ ರೀತಿಯಾಗಿ ಸಮಯ ತೋರಿಸುವುದರಿಂದ ಮನೋವೈಜ್ಞಾನಿಕವಾಗಿ ಕೆಟ್ಟ ಪರಿಣಾಮ ಬೀರುತ್ತದೆ.

ಮತ್ತೊಂದು ವಿಶೇಷತೆ ಏನೆಂದರೆ ಸೆಡುಂಡು ಮುಳ್ಳುಗಳನ್ನು 35 ಸೆಕೆಂಡಿನಲ್ಲಿ ನಿಲ್ಲಿಸಲಾಗಿರುತ್ತದೆ. ಇದು V ಆಕಾರದಲ್ಲಿರುತ್ತದೆ. ಇದರ ಅರ್ಥ ಯಶಸ್ಸು ಎಂದು.

source :