ಪ್ರವಾಸಿಗರಿಗೆ ಹೇಳಿ ಮಾಡಿಸಿದ ರೀತಿ ಇದೆ ಶಿವಮೊಗ್ಗದ ಈ 9 ಜಲಪಾತಗಳು.. ಜೀವನದಲ್ಲೊಮ್ಮೆ ನೋಡಿ ಬನ್ನಿ

0
2535

ಜೋಗ ಜಲಪಾತ..

Jog Falls, Karnataka

ಜೋಗ ಅಥವಾ ‘ಗೇರುಸೊಪ್ಪಿನ ಜಲಪಾತ’ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯಂತ ರಮಣೀಯ ರೂಪ ತೊರುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುತ್ತದೆ..

ಬರ್ಕಣ ಫಾಲ್ಸ್

ಬರ್ಕಣ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.  ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗು ಒಟ್ಟು ಎತ್ತರ ಸುಮಾರು ೮೫೦ ಅಡಿಗಳಾಗಿದೆ. ಈ ಜಲಪಾತವು ಭಾರತದಲ್ಲಿ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕೇವಲ ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುತ್ತದೆ..

ದಬ್ಬೆ ಜಲಪಾತ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಭಾರಂಗಿ ಹೋಬಳಿಯಲ್ಲಿ ಜೋಗ ಜಲಪಾತಕ್ಕೆ ಸಮೀಪ ವರ್ತಿಯಾಗಿ ಧುಮ್ಮಿಕ್ಕುವ ಜಲಧಾರೆ. ಕಾರ್ಗಲ್‌ ನಿಂದ ಭಟ್ಕಳಕ್ಕೆ ಹೋಗು ಮಾರ್ಗದಲ್ಲಿ ಬಿಳಿಗಾರಿನ ಸಮೀಪ ಬಲಭಾಗದ ಮಣ್ಣು ದಾರಿಯಲ್ಲಿ ಸುಮಾರು ೫-೬ ಕಿ.ಮಿ ಕ್ರಮಿಸಿದರೆ ಸಿಗುವ ಕುಗ್ರಾಮ ದಬ್ಬೆ. ಇಲ್ಲಿ ವಿರಳವಾಗಿ ಹರಡಿರುವ ರೈತ ಕುಟುಂಬಗಳು. ಹಾಗೆ ಏಕಧಾರೆಯಾಗಿ ಧುಮ್ಮಿಕ್ಕುವ ಜಲಪಾತ. ಕಡಿದಾದ ಬೆಟ್ಟವನ್ನು ಮರದ ಬೇರು ಬಿಳಲುಗಳ ಸಹಾಯದಿಂದ ಇಳಿಯಬೇಕು. ಸಮೀಪದ ರೈತ ಕುಟುಂಬದವರ ಜಮೀನನ್ನು ದಾಟಿ ಸಾಗಬೇಕು ಅದೇ ರೈತಕುಟುಂಬ ಇಳಿಯಲು ಬೇಕಾದ ಹಗ್ಗವನ್ನು ಕೊಡುತ್ತದೆ. ಬೇಕಾದವರು ಬಳಸಿಕೊಳ್ಳಬಹುದು. ಕೆಳಗಿಳಿದ ನಂತರವಷ್ಟೇ ನೋಡಲು ಸಾಧ್ಯವಾದ ಜಲಪಾತ ದಟ್ಟ ಕಾನನದ ನಡುವ ಪ್ರಶಾಂತವಾಗಿದೆ. ಧುಮ್ಮಿಕ್ಕುವ ಮೊದಲು ಕಲ್ಲು ಬಂಡೆಗಳ ನಡುವ ಹರಿಯುವ ಇದರ ಸೊಬಗೇ ಮುದ ನೀಡುತ್ತದೆ. ಹಿಂದೆ ಪರಿಚಯಿಸಿದ ಭೀಮೇಶ್ವರಕ್ಕೂ ಇದು ಸಮೀಪವಿದೆ.

ಇಷ್ಟೇ ಅಲ್ಲದೇ ಶಿವಮೊಗ್ಗದಲ್ಲಿಯೇ ಇನ್ನೂ 6 ರಮಣೀಯ ಜಲಪಾತಗಳು ಕಾಣಸಿಗುತ್ತವೆ..

  • ಹಿಡ್ಲು ಮನೆ
  • ಕುಂಚಿಕಲ್
  • ಅಚಕನ್ಯ
  • ಒನಕೆ ಅಬ್ಬೆ
  • ನಿಪ್ಲಿ
  • ಜೋಗಿ ಗುಂಡಿ

ಜೀವನದಲ್ಲೊಮ್ಮೆ ತಪ್ಪದೇ ಭೇಟಿ ನೀಡಲೇ ಬೇಕಾದ ಸ್ಥಳಗಳಿವು.. ಶೇರ್ ಮಾಡಿ ನಮ್ಮ ನಾಡಿನ ಸೌಂಧರ್ಯ ಎಲ್ಲರಿಗೂ ತಿಳಿಯಲಿ..

Also Read: ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಜೀವನಾಡಿ ಕೆರೆಗಳು ಇಂದು ಮನಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ವಿಷ ಕಾರುತ್ತಿದೆ.. ಇದಕೆಲ್ಲ ಯಾರು ಕಾರಣ??