ವಾಟರ್ ಥೆರಪಿ ಮಾಡಿ ನೋಡಿ!

0
953

ನೀರು ಆರೋಗ್ಯಕ್ಕೆ ಅದೆಷ್ಟು ಉಪಯೋಗಕರ ಎಂಬ ಸಂಗತಿ ನಮಗೆ ಗೊತ್ತು. ಹಾಗೆಂದೇ ಈ ನಡುವೆ ಎಲ್ಲರಲ್ಲಿ ವಾಡರ್ ಥೆರಪಿ, ಅಂದರೆ ನೀರು ಚಿಕಿತ್ಸೆ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ನೀರು ನೀರು ಚಿಕಿತ್ಸೆ ಎಂದರೆ ಅದೇನು ಬೇರೆ ಅಲ್ಲ. ನೀರು ಯಾವಾಗ ಬೇಕೆಂದರೆ ಆಗ ಅಲ್ಲದೆ ಒಂದು ಪದ್ಧತಿ ಹಾಗೂ ಪ್ರಕಾರ ಕುಡಿಯುವುದು.

ರಾತ್ರಿ ಊಟದ ನಂತರ ಬೆಳಿಗ್ಗೆ ಉಪಹಾರ ಸೇವಿಸುವವರೆಗೂ ನಾವು ಎಂಟರಿಂದ ಹತ್ತು ಗಂಟೆ ಕಾಲ ಖಾಲಿಯಾಗಿರುತ್ತೇವೆ. ಬೆಳಗ್ಗೆ ಏನು ತಿನ್ನುವ ಮೊದಲು ಹೆಚ್ಚು ನೀರು ಕುಡಿದರೆ ಆ ನೀರು ಚಿಕ್ಕ ಕರುಳನ್ನು ಶುಭ್ರಗೊಳಿಸುತ್ತದೆ. ಅದಕ್ಕೆ ಬೆಳಿಗ್ಗೆ ಹೆಚ್ಚು ನೀರು ಕುಡಿದರೆ ಒಳ್ಳೆಯದೆನ್ನುತ್ತಾರೆ ರೋಗ ನಿರ್ಧಾರಶಾಸ್ತ್ರಜ್ಞರು. ಅದು ಹೆಗೆ ಕುಡಿಯಬೇಕೆಂದರೆ.

*ಖಾಲಿ ಹೊಟ್ಟೆಯಲ್ಲಿ ಕನಿಷ್ಠ 2 ರಿಂದ 3 ಗ್ಲಾಸ್ ನೀರು ಹತ್ತು ನಿಮಿಷದ ಅವದಿಯಲ್ಲಿ ಕುಡಿಯಬೇಕು.

*ನೀರು ಕುಡಿದ ನಂತರ ಕನಿಷ್ಠ 20 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ನಂತರ ವ್ಯಾಯಾಮ ಸ್ನಾನ ಮಾಡಬೇಕು.

* ಗ್ಲಾಸ್ ಬಿಸಿ ನೀರಲ್ಲಿ ಒಂದು ನಿಂಬೆ ಹೋಳು ಹಿಂಡಿಕೊಂಡು ಬೆಳಿಗ್ಗೆ ಕುಡಿದರೆ ಹೊಟ್ಟೆಯಲ್ಲಿ ಸಮಸ್ಯೆಗಳು ಇರುವುದಿಲ್ಲ.

*ದಿನವೆಲ್ಲ ಡಿಸ್ಟಿಲ್ ವಾಟರ್ ಕುಡಿದರೆ ದೇಹದಲ್ಲಿನ ವಿಷಪಾರ್ಥಗಳೆಲ್ಲವೂ ತೊಳಗುತ್ತವೆ.

*ನಾಲ್ಕು ಗ್ಲಾಸ್ ನೀರು ರಾತ್ರಿ ಒಂದು ರಾಗಿ ಪಾತ್ರೆಯಲ್ಲಿ ಹಾಕಿ ಬೆಳಗ್ಗೆ ಕುಡಿಯಬೇಕು. ಆಗಲೂ ಅರ್ಧಗಂಟೆ ವಿಶ್ರಾಂತಿ ಅಗತ್ಯ. ಈ ವಾಟರ್ ಥೆರಪಿ ಮಾಡುವಾಗ ಊಟದ ವೇಳೆಯಲ್ಲಿ ನೀರು ಕುಡಿಯಬಾರದು. ಊಟ ಮಾಡಿದ ಒಂದು ಗಂಟೆ ನಂತರ ಕುಡಿಯಬೇಕು.

*ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎಳೆನೀರು ಕುಡಿದರೆ ಒಳ್ಳೆಯ ಅಭ್ಯಾಸ ಎಳೆ ನೀರಲ್ಲಿ ಪೊಟಾಶಿಯಂ ಇತರೆ ಪೋಷಕಾಂಶಗಳು ಇರುತ್ತವೆ.