ಶಿರಸಿ ತಾಲ್ಲೂಕು ಜಲಪಾತಗಳ ತವರೂರು

0
754

Kannada News | Karnataka Temple History

ಶಿರಸಿ ತಾಲ್ಲೂಕಿನಲ್ಲಿರುವ ಪುಟ್ಟ ಹಳ್ಳಿ ಮತ್ತಿಘಟ್ಟ. ಸುತ್ತಲೂ ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು ಸಾಲು.್ಟ ಅಂತಹ ದಟ್ಟ ಕಾಡಿನ ನಡುವೆ ಭೋರ್ಗರೆಯುತ್ತ ಧುಮ್ಮಿಕ್ಕುವ ಹಸೇ ಹಳ್ಳವು ಸುಂದರ ಜಲಪಾತವನ್ನು ಸೃಷ್ಟಿಸಿದೆ. ಶಿರಸಿಯಿಂದ ಸುಮಾರು ನಲವತ್ತೆರಡು ಕಿಮಿ ದೂರವಿರುವ ಮತ್ತಿಘಟ್ಟಾದ ಪುಟ್ಟ ತೊರೆ ಹಸೆಹಳ್ಳ. ಇದು ಗಂಗಾವಳಿ ನದಿಗೆ ಸೇರುವ ಪುಟ್ಟ ಹಳ್ಳ.

ಮತ್ತಿಘಟ್ಟಾ ಎಂಬ ಕಾನನದ ನಡುವಿನ ಪುಟ್ಟ ಹಳ್ಳಿಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರದಿಂದ ಸಾಗುವ ರಸ್ತೆ ಹಿಡಿದು ಹೊರಟರೆ ರಸ್ತೆಯ ಬಲ ದಿಕ್ಕಿನಲ್ಲಿ ಒಂದು ಸುಂದರವಾದ ತೋಟ ಸಿಗುತ್ತದೆ. ಆ ತೋಟಕ್ಕೆ ಕಾಲಿಟ್ಟರೆ ಸಾಕು ನೀರಿನ ರಭಸದ ಹರಿವು ಕಿವಿಗೆ ಅಪ್ಪಳಿಸುತ್ತದೆ. ತೋಟದ ಅಂಚಿಗೆ ಹೋದರೆ ಜಲಪಾತದ ಪಾಶ್ರ್ವ ಸೌಂದರ್ಯವನ್ನು ವೀಕ್ಷಿಸಬಹುದು.

ಅಲ್ಲಿಂದ ಮತ್ತೆ ಒಂದೂವರೆ ಎರಡು ಕಿ. ಮಿಗಳಷ್ಟು ನಡೆದು ಹೋದರೆ ಜಲಪಾತದ ಎದುರು ಎದುರು ನಿಂತು ಸೌಂದರ್ಯದ ಆಸ್ವಾದನೆ ಮಾಡಬಹುದು. ಸುಮಾರು 600 ಅಡಿಗಳಷ್ಟು ಎತ್ತರದಿಂದ ಬೀಳುವ ಜಲಪಾತವು ಹಾಲ್ನೊರೆಯನ್ನು ಜ್ಞಾಪಿಸುತ್ತದೆ. ಕಡುಬೇಸಿಗೆಯಲ್ಲೂ ಬರಿದಾಗದ ಈ ಹಳ್ಳವು ನಂತರ ಹರಿದು ಹೋಗಿ ಅಂಕೋಲಾ- ಹುಬ್ಬಳಿ ಮಾರ್ಗ ಮಧ್ಯದಲ್ಲಿ ಸಿಗುವ ರಾಮನಗುಳಿಯಲ್ಲಿ ಗಂಗಾವಳಿಯನ್ನು ಸೇರುತ್ತದೆ.

ಶಿರ್ಲೆ ಜಲಪಾತ-ಕಾರವಾರ ಸಮೀಪದ ಬೆಟ್ಟದ ಮೇಲಿರುವ ಒಂದು ಪುಟ್ಟ ಹಳ್ಳಿ ಶಿರ್ಲೆ. ಇಲ್ಲೊಂದು ಸುಂದರ ಜಲಪಾತವಿದೆ. ಕಾರವಾರ ತಾಲೂಕಿನ ಊಟಿ ಎಂದು ಕರೆಯಿಸಿಕೊಳ್ಳುವ ಶಿರ್ಲೆ ಎಂಬ ಊರಿನಲ್ಲಿ ಹ-ರಿಯುವ ಪುಟ್ಟ ತಂಪಾದ ಹಳ್ಳವು ನಿರ್ಮಿಸಿದ ಈ ಜಲಪಾತವು ನಯನ ಮನೋಹರವಾಗಿದೆ.

Image result for shirley falls

ಅಪ್ಸರಕೊಂಡ ಜಲಪಾತ-ಹೊನ್ನಾವರ ತಾಲ್ಲೂಕಿನ ಸುಂದರವಾದ ಜಲಪಾತ ಅಪ್ಸರಕೊಂಡ. ಜಲಪಾತಗಳೆಂದರೆ ಗುಡ್ಡ ಬೆಟ್ಟಗಳ ನಡುವೆ ಇರಬೇಕು ಎಂಬ ನಮ್ಮ ನಂಬಿಕೆಗಳನ್ನೆಲ್ಲ ಹುಸಿಗೊಳಿಸಿ ಸಮುದ್ರ ತೀರದಲ್ಲಿ ಮೈದಳೆದ ಬಳಕುವ ಅಪ್ಸರೆ ಇದು. ವರ್ಷದ ಹನ್ನೆರಡೂ ತಿಂಗಳೂ ಚಿಕ್ಕ ತೊರೆಯಂತೆ ಹರಿದು ಕೇವಲ ನಲವತ್ತು ಅಡಿಯಿಂದ ಧುಮ್ಮಿಕ್ಕುತ್ತದೆ. ತುಂತುರು ತುಂತುರಾಗಿ ಚಿಮ್ಮುವ ಈ ಜಲಪಾತದ ತಳದಲ್ಲೊಂದು ಚಂದದ ನೀರ ಕೊಳ. ಪಕ್ಕದಲ್ಲೊಂದು ಸುಮದರ ಉದ್ಯಾನವನ. ಎದುರಿಗೆ ಅಖಂಡ ಸಮುದ್ರ ದರ್ಶನ.

Image result for apsarakonda falls

Watch:

ಮಜ್ಜಿಗೆ ಹಳ್ಳ ಜಲಪಾತ, ನೇಗಾರ್ ಜಲಪಾತ ಗಣೇಶ ಫಾಲ್ (ಫಾಲ್ಸ್ ಅಲ್ಲ) ತುಂಬ್ರಗೋಡು ಜಲಪಾತ, ವಾಟೆಹಳ್ಳ ಜಲಪಾತ ಮುಂತಾದ ಜಲಪಾತಗಳು ಗಮನ ಸೆಳೆಯುತ್ತವೆ. ಇದಲ್ಲದೇ ಮಳೆಗಾಲದಲ್ಲಿ ಒಮ್ಮೆ ಉತ್ತರ ಕನ್ನಡದ ರಾಷ್ಟ್ರೀಯ ಹೆದ್ದಾರಿಯಲ್ಲದೆ, ರಾಜ್ಯ ಹೆದ್ದಾರೆ, ಜಿಲ್ಲ ರಸ್ತೆಗಳಲ್ಲಿ, ಒಳ ರಸ್ತೆಗಳಲ್ಲಿ , ಕಾಡೊಳಗಿನ ಚಿಕ್ಕ ದಾರಿಯಲ್ಲಿ ಒಮ್ಮೆ ಓಡಾಡಿ ಬಿಟ್ಟರೆ ಸಾಕು ಅಸಂಖ್ಯಾತ ಜಲಪಾತಗಳು ಕಣ್ಣಿಗೆ ಕಟ್ಟುತ್ತವೆ. ಉತ್ತರಕನ್ನಡವನ್ನು ಜಲಪಾತಗಳ ತವರೂರು ಎಂದು ಏಕೆ ಕರೆಯುತ್ತಾರೆ ಎಂಬುದು ಅರಿವಾಗುತ್ತದೆ.

Also Read: ಜಾಸ್ತಿ ಜನಕ್ಕೆ ಗೊತ್ತಿರದ ಈ ಎರಡು ಜಲಪಾತಗಳಿಗೆ ನೀವು ಭೇಟಿ ನೀಡಲೇಬೇಕು!!!