ಪಾಕ್ ಪರ ಘೋಷಣೆ ಕೂಗಿದರೆ ಅಲ್ಲಿಗೇ ಕಳುಹಿಸಿ: ಚಕ್ರವರ್ತಿ ಸೂಲಿಬೆಲೆ; ಒಪ್ಪಲೇಬೇಕಾದ ಮಾತು ಅಲ್ಲವೇ ಇದು?

0
871

ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ನಂತರ ಇಡಿ ಭಾರತದ ತುಬೆಲ್ಲ ಪಾಕಿಸ್ತಾನ ವಿರುದ್ದ ಹೋರಾಟಗಳು, ಯುದ್ದ ಮಾಡಲೇಬೇಕು ಪಾಪಿಗಳನ್ನು ಮಟ್ಟಹಾಕಲೇಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ನಮ್ಮ ಯೋಧರ ರಕ್ತ ಹರಿಸಿದ ಉಗ್ರರನ್ನು ನಾಶ ಮಾಡಬೇಕು ಎನ್ನುವ ಆಕ್ರೋಶದ ಜ್ವಾಲೆ ದೇಶದ ತುಂಬೆಲ್ಲ ಹರಡಿದೆ. ಈ ವೇಳೆ ಪಾಕಿಸ್ತಾನ ಭಾರತದ ಮುಂದೆ ಏನು ಅಲ್ಲ ಅದು ಬೀದಿ ನಾಯಿ, ಎಂದು ಚಕ್ರವರ್ತಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

Also read: ಪುಲ್ವಾಮ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತಾ?

ಪಾಕ್ ಬೀದಿ ನಾಯಿ?

ಮನೆ ಮುಂದೆ ಬೀದಿ ನಾಯಿ ಬಂದು ನಿಂತಾಗೆ ಹೇಗೆ ಹೊಡೆದು ಓಡಿಸುತ್ತೇವೆ ಹಾಗೆಯೇ ಈ ಪಾಕಿಸ್ತಾನವನ್ನು ಓಡಿಸುತ್ತೇವೆ. ಈಗಾಗಲೇ ನಾಲ್ಕು ಬಾರಿ ಓಡಿಸಿದರು ನಾಚಿಕೆ ಬಂದಿಲ್ಲ ಆದರು ನಮ್ಮ ಏಟನ್ನು ತಿನ್ನಲು ಬರುತ್ತಿರುವ ಪಾಪಿಸ್ತಾನಕ್ಕೆ 1947 ಮೊದಲ ಯುದ್ಧದಲ್ಲಿ, 1965 ಎರಡನೇ ಯುದ್ಧದಲ್ಲೂ ಪಾಕಿಸ್ತಾನವನ್ನು ಹೊಡೆದು ಓಡಿಸಿದ್ದೇವೆ. ಇನ್ನೂ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಕಾಲಿಗೆ ಬಿದ್ದು ಬಿಟ್ಟುಬಿಡಿ ಎಂದು ಕೇಳಿದ್ದರು. ಆ ರೀತಿಯಲ್ಲಿ ಅವರನ್ನು ಓಡಿಸಿದ್ದೇವೆ. ಇನ್ನು ಐದನೇ ಸಲ ಕೂಡ ಹೊಡೆದು ಹಾಕುತ್ತೇವೆ. ನಾಲ್ಕು ಸಲ ಬೀದಿನಾಯಿಯಂತೆ ಓಡಿಸಿದ್ದೇವೆ, ಈಗಲೂ ಪಾಕ್ ಓಡಿಸುವುದು ಬಹಳ ಕಷ್ಟ ಅಲ್ಲ. ಅದಕ್ಕೆ ಮತ್ತೊಂದು ಯುದ್ಧ ಆಗಬೇಕು. ಎಂದು ಧಾರವಾಡದಲ್ಲಿ ಮಾತನಾಡಿದ ಚಕ್ರವರ್ತಿ ಹೇಳಿದ್ದಾರೆ.

ಪಾಕ್ ಪರ ಘೋಷಣೆ ಕೂಗಿದರೆ ಅಲ್ಲಿಗೆ ಕಳುಹಿಸಿ:

ಭಾರತದ ಅನ್ನ ತಿನ್ನುವ ಜನರು ದೇಶದ್ರೋಹ ಬಗೆದು ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು ಅಲ್ಲಿಗೆ ಕಳುಹಿಸಿಕೊಡಬೇಕಿದೆ. ಭಿಕಾರಿ ರಾಷ್ಟ್ರದಲ್ಲಿ ಹೋಗಿ ಬದುಕಿ ಅಂತ ಕಳುಹಿಸಬೇಕು ಎಂದು ಕಿಡಿಕಾರಿದರು. ಇಲ್ಲಿ ಎಲ್ಲವು ನೆಮ್ಮದಿಯಿಂದ ಇದೆ. ಇದಕ್ಕೆ ಕಾರಣ ನಮ್ಮ ಸೈನಿಕರು ಅವರಿಗೆ ಮುಖ್ಯವಾಗಿ ಬೇಕಿರುವುದು ಹಣವಲ್ಲ ಗೌರವ, ಅವರು ಹುತಾತ್ಮರಾದಾಗ ಅಷ್ಟೇ ಗೌರವ ಸಲ್ಲಿಸುವುದು ಧರ್ಮವಲ್ಲ ಅವರು ಇರುವಾಗಲು ಪ್ರತಿನಿತ್ಯವೂ ನೆನೆದು ಗೌರವ ಸಲ್ಲಿಸಿ ಅನ್ನ ತಿನ್ನಬೇಕು ಸೈನಿಕರ ಬಗ್ಗೆ ಅಯೋಗ್ಯದ ಮಾತುಗಳನ್ನು ಆಡೋರನ್ನು ಮುಲಾಜಿಲ್ಲದೇ ಬಾರಿಸಿ. ಫೇಸ್‍ಬುಕ್, ಟ್ವಿಟ್ಟರ್, ವಾಟ್ಸಪ್ ಎಲ್ಲಿ ಬೇಕಾದರೂ ಸೈನಿಕರ ಬಗ್ಗೆ ಕೆಟ್ಟದಾಗಿ ಮಾಡನಾಡುವವರಿಗೆ ಬಾರಿಸಿ ಎಂದರು.

ಪಾಕ್-ಗೆ ಭಯೋತ್ಪಾದನೆ, ಕತ್ತೆ ರಫ್ತು ಅಷ್ಟೇ ಗೊತ್ತು:

ಪಾಪಿ ಕೃತ್ಯ ಮಾಡುತ್ತಿರುವ ಪಾಪಿ ಪಾಕಿಸ್ತಾನ ಬೀಕಾರಿ ದೇಶವಾಗಿದ್ದು, ಕತ್ತೆ ರಫ್ತು ಮಾಡುವ ದಯನೀಯ ಸ್ಥಿತಿಗೆ ಬಂದಿದೆ. ಭಯೋತ್ಪಾದನೆ ಮತ್ತು ಚೀನಾಕ್ಕೆ ಕತ್ತೆ ರಫ್ತು ಮಾಡುವುದು ಇವರೆಡೇ ಪಾಕಿಸ್ತಾನಕ್ಕೆ ಗೊತ್ತಿರುವುದು. ಇಂತಹ ದೇಶದಿಂದ ಮುಂದೆ ಭಾರತ ಒಬ್ಬ ಯೋಧನನ್ನು ಕಳೆದುಕೊಳ್ಳಬಾರದು. ಪಾಕಿಸ್ತಾನದ ಒಬ್ಬರನ್ನು ಬಿಡಬಾರದು ಎಂದು ಹುತಾತ್ಮ ಯೋಧರು ಸಾವನ್ನಪ್ಪಿದ ಕ್ಷಣಗಳನ್ನು ಹೇಳಿ ದೇಶದ ತಲೆಯ ಭಾಗವಾದ ಕಾಶ್ಮೀರಕ್ಕೆ ಮಾನವ ಹಕ್ಕುಗಳ ಹೆಸರಿನಲ್ಲಿ ಬೀದಿಗೆ ಬರುವ ಕೇಲ ಅಯೋಗ್ಯರಿಂದಲೇ ಹಾಳಾಗಿದ್ದು ದುರ್ದೈವದ ಸಂಗತಿಯಾಗಿದೆ. ಅದರಲ್ಲೂ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ ಹಾಗೂ ಗೌರಿ ಲಂಕೇಶ್ ಇವರೆಲ್ಲರೂ ಸೇರಿಕೊಂಡು ಮಾನವ ಹಕ್ಕುಗಳ ಹೆಸರಿನಲ್ಲಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರ್ದೈವದ ಸಂಗತಿ ಎಂದು ಖ್ಯಾತ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.

Also read: ಹುತಾತ್ಮ ಯೋಧ ಗುರು ಅವರ ಗರ್ಭಿಣಿ ಪತ್ನಿ ಕಲಾವತಿಯ ಹೊಟ್ಟೆಯಲ್ಲಿ ಗಂಡು ಮಗು ಹುಟ್ಟಿದರೆ ಸೈನ್ಯೆಕ್ಕೆ ಕಳುಹಿಸುತ್ತಾರೆ ಅಂತೆ ಈ ಮಾಹಾತಾಯಿ..