ಹುಚ್ಚು ಹುಚ್ಚು ಟ್ರೆಂಡ್-ಗಳ ಸಾಲಿಗೆ ಸೇರುತ್ತೆ ಬೆರಳಿಗೆ ರಿಂಗ್ ಚುಚ್ಚುಕೊಳ್ಳುವುದು, ಈಥರ ಟ್ರೆಂಡ್ ಯುವಜನೆತೆಗೆ ಒಳ್ಳೆದಾ?

0
796

ಕಾಲ ಬದಲಾದಂತೆ ಘಂಟೆಗೊಂದು ಹೊಸ ಟ್ರೆಂಡ್ ಬರುತ್ತಾನೆ ಇರುತ್ತೆ. ಇದಕ್ಕೆ ಮಾರುಹೋಗಿ ಅದನ್ನು ಅನುಸರಿಸಿಕೊಂಡರೆ ಮಾತ್ರ ಆ ಮನುಷ್ಯ ಅಪಡೆಟ್ ಇದ್ದಾನೆ ಅಂತ ಅರ್ಥ. ಇಂತಹ ವಿಷಗಳು ಹೆಚ್ಚಾಗಿ ಬರುವುದು ಫ್ಯಾಷನ್-ನಲ್ಲಿ ಈ ಸಾಲಿನಲ್ಲಿ ಜಗತ್ತಿನಾದ್ಯಂತ ಜನಮನ್ನಣೆ ಪಡೆಯುವ ಬಹುತೇಕ ಟ್ರೆಂಡ್ ಫ್ಯಾಷನ್-ಗಳು ಭಾರತೀಯರಿಂದ ಹುಟ್ಟುತ್ತಿವೆ. ಏಕೆಂದರೆ ಸಂಪ್ರದಾಯ, ಪದ್ಧತಿಗಳಿಂದ ರೂಡಿಯಲ್ಲಿರುವ ಹಲವು ಭಾರತೀಯ ವೇಷಗಳು ದೇಶ-ವಿದೇಶಗಳಲ್ಲಿ ವೈರಲ್ ಆಗಿ ಅದೇ ಒಂದು ದೊಡ್ಡ ಫ್ಯಾಷನ್ ಆಗುತ್ತೆ. ಇದಕ್ಕೆ ಒಂದು ಅಪ್ಪಟ ಉದಾಹರಣೆ ಅಂದರೆ ಮೂಗುತಿ ಚುಚ್ಚುವುದು.

Also read: ರಿಂಗ್ ಫಿಂಗರ್‍ಗೆ ನಿಶ್ಚಿತಾರ್ಥ – ಮದುವೆಯ ಉಂಗುರ ಹಾಕಬೇಕು ಏಕೆ?

ಹೌದು ಹಿಂದಿನಿಂದಲೂ ಮಹಿಳೆಯರು ಸಂಪ್ರದಾಯದಂತೆ ಮೂಗಿನ ಮೇಲೆ ಹಾಕಿಸಿಕೊಳ್ಳುವ ‘ಮೂಗು ನತ್ತು’ ಅಮೇರಿಕದವರ ಕೈಯಲ್ಲಿ ಸಿಕ್ಕು, ಹೊಕ್ಕಳಲ್ಲಿ, ಕಣ್ಣಿನ ಹುಬ್ಬಿನ ಮೇಲೆ, ತುಟ್ಟಿಗಳ ಮೇಲೆ, ಹೀಗೆ ದೇಹದ ಕೆಲವು ಭಾಗಗಳಲ್ಲಿ ಚುಚ್ಚಿಕೊಂಡು ಜಗತ್ತಿನ್ಯಾದಂತ ಟ್ರೆಂಡ್ ಆಯಿತು. ಅದೇ ಈಗ ಮತ್ತೊಂದು ಟ್ರೆಂಡ್ ಆಗಿ ಕೈ ಬೆರಳುಗಳ ಮೇಲೆ ರಿಂಗ್ ಚುಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಟ್ರೆಂಡ್-ಗೆ ಮಾರುಹೊಗುವರ ಸಂಖ್ಯೆ ಹೆಚ್ಚಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಏನಿದು ಕೈ ಬೆರಳಿಗೆ ರಿಂಗ್?

Also read: ಮಹಿಳೆಯರು ಕಿವಿಗೆ ಚುಚ್ಚುವ ಹಿಂದಿರುವ ವೈಜ್ಞಾನಿಕ ಅರಿವು ಮತ್ತು ಲಾಭಗಳನ್ನು ಕೇಳಿದ್ರೆ ಪ್ರತಿಯೊಬ್ರು ಕಿವಿ ಚುಚ್ಚಿಕೊಳ್ತಿರ!!

ಸದ್ಯ ಈ ಟ್ರೆಂಡ್ ಹದಯದ ಪ್ರೇಮಿಗಳಲ್ಲಿ ಮತ್ತು ನವ ವಿವಾಹಿತರಲ್ಲಿ ಹೆಚ್ಚು ಕಂಡು ಬರುತ್ತಿರುವ ಫ್ಯಾಷನ್ ಆಗಿದ್ದು.
ಕೈಬೆರಳಿಗೆ ನೇರವಾಗಿ ಬಂಗಾರದ ಆಭರಣಗಳು ಮತ್ತು ವಜ್ರ, ಬೆಳ್ಳಿ ರಿಂಗ್-ಗಳನ್ನು ಚುಚ್ಚಿಸಿಕೊಳ್ಳುವುದು. ಕಂಡು ಬರುತ್ತಿದೆ. ಇದರಲ್ಲಿ ಬೆರಳಿನ ಚರ್ಮಕ್ಕೆ ನೇರವಾಗಿ ಚುಚ್ಚುತ್ತಾರೆ. ಈ ರಿಂಗ್ ಫ್ಯಾಷನ್-ಗಳಲ್ಲಿವೂ ಹಲವು ಬಗೆಯ ಆಕಾರ ವಿನ್ಯಾಸಗಳು ಕಂಡು ಬರುತ್ತಿವೆ. ಈ ಟ್ರೆಂಡ್ ಬಹಳಷ್ಟು ಅಪಾಯಕಾರಿ ಎಂದರು ಕೂಡ ಅದನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್ ಕುರಿತು ಇರುವ ಕೆಲವು ಅಪಾಯಗಳು ಇಲ್ಲಿವೆ ನೋಡಿ.

ಬೆರಳಿಗೆ ರಿಂಗ್ ಚುಚ್ಚಿಕೊಳ್ಳುವ ಮೊದಲು ಎಚ್ಚರ;

ಹೌದು ಕೈ ಬೆರಳಿಗೆ ರಿಂಗ್ ಹಾಕಿಸಿಕೊಳ್ಳುವುದು ಬಹಳಷ್ಟು ತೊಂದರೆಗಳನ್ನು ತರುತ್ತದೆ ಎಂದು ಹಲವು ವ್ಯದ್ಯರು ಮತ್ತು ಪರಿಣಿತರು ತಿಳಿಸಿದ್ದಾರೆ. ಅದರಂತೆ ಪ್ರತಿಯೊಂದು ಕೈಬೆರಳಿನ ಮಧ್ಯ ಭಾಗದಲ್ಲಿ ತುಂಬಾ ಮೃಧುವಾಗಿರುವಂತಹ ಸ್ನಾಯುಗಳು ಇರುತ್ತದೆ. ಇದು ಬೆರಳಿನ ಕೆಲಸಕ್ಕೆ ತುಂಬಾ ಕಡಿಮೆ ಅಂಗಾಂಶಗಳಿಂದ ಈ ಭಾಗದಲ್ಲಿ ಕೆಲಸ ಮಾಡುವುದು. ಇದರಿಂದಾಗಿ ಕೈಬೆರಳಿನ ಚರ್ಮಕ್ಕೆ ಚುಚ್ಚಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಮತ್ತು ಒಳ್ಳೆಯದು ಕೂಡ ಅಲ್ಲ ಎಂದು ಹೇಳುತ್ತಿದ್ದಾರೆ.

ಅಪಾಯ ಕಟ್ಟಿಟ ಬುತ್ತಿ;

Also read: ಹೆಣ್ಣು ಮಕ್ಕಳಿಗೂ ಬಳೆಗಳಿಗೂ ಇರುವ ನಂಟು ಗೊತ್ತಾ..!!

ನೇರವಾಗಿ ಬೆರಳಿನ ಒಳಗೆ ಚುಚ್ಚುವಿಕೆಯಿಂದ ಆಗುವಂತಹ ಗಾಯವು ಜೀವಮಾನ ವಿಡಿ ಮಾಯದೆ ಇರುವುದು. ಅಲ್ಲದೆ ತುಂಬಾ ಕಿರಿಕಿರಿ ಉಂಟು ಮಾಡುವುದು ಮತ್ತು ಕೆಲವೊಂದು ಸಲ ಕೆಲಸದಲ್ಲಿ ರಿಂಗ್ ಸಿಲುಕಿಕೊಂಡು ಚರ್ಮವೇ ಕಿತ್ತು ಬರುವ ಸಾದ್ಯತೆಯಿದೆ. ಮತ್ತು ಗಾಯದಲ್ಲಿ ಆಗಿರುವ ರಂದ್ರದಿಂದ ಕಿವು ತುಂಬಿ ದೊಡ್ಡ ಖಾಯಿಲೆಗಳಿಗೆ ತುತ್ತಾಗಬಹುದು, ಮತ್ತು ಬೆರಳಿನ ಶಕ್ತಿಯ ಮೇಲೆ ಪರಿಣಾಮ ಬಿರಿ ದಿನನಿತ್ಯದ ಕೆಲಸದಲ್ಲಿ ಬೆರಳು ಮಡಚುವಾಗ ನೋವು ಕಾಣುತ್ತದೆ. ಮತ್ತೆ ಸ್ವಲ್ಪ ದಿನಗಳ ನಂತರ ಚರ್ಮವು ಸರಿದು ರಿಂಗ್ ನೆರವಾಗಿ ಬೂನ್ಸ್-ಗೆ ಟಚ್ ಆಗುತ್ತೆ. ಇದರಿಂದ ಬೇರೆ ರೀತಿಯ ಅಪಾಯಗಳು ಬೆಳವಣಿಗೆ ಹೊಂದುತ್ತೇವೆ. ಆದಕಾರಣ ಕೆಲವು ಟ್ರೆಂಡ್ ರೂಪದಲ್ಲಿ ಬರುವ ಮಾರಕಗಳು ಜೀವಕ್ಕೆ ಕೆಡಕು ತರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ನೀವು ಈ ಹುಚ್ಚು ಫ್ಯಾಷನ್-ಗೆ ಮಾರು ಹೋಗುವ ಯೋಚನೆ ಇದ್ದರೆ ಇದರ ಬಗ್ಗೆ ತಿಳಿದು ನಂತರ ಮುಂದುವರೆಯರಿ.