ವಾರ-ಭವಿಷ್ಯ: 03 ನವೆಂಬರ್ ರಿಂದ 09 ನವೆಂಬರ್, ರವರೆಗೆ, 2019!!

0
502

Astrology in kannada | kannada news ವಾರ-ಭವಿಷ್ಯ: 03 ನವೆಂಬರ್ ರಿಂದ 09 ನವೆಂಬರ್, ರವರೆಗೆ, 2019!!

ವಾರ-ಭವಿಷ್ಯ: 03 ನವೆಂಬರ್ ರಿಂದ 09 ನವೆಂಬರ್, ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಈ ವಾರ ನಿಮ್ಮ ಸಹನೆಗೆ ಪರೀಕ್ಷೆ ಎದುರಾಗಲಿದೆ. ಮೌನವರಿತು ಬಾಳುವುದು ಉತ್ತಮ. ಮನೆಯ ಹಿರಿಯರ ಆರೋಗ್ಯದ ಸಲುವಾಗಿ ಖರ್ಚು ಮಾಡಬೇಕಾಗುವುದು. ಮಕ್ಕಳಿಗೆ ಹೆಚ್ಚಿನ ಒತ್ತಡ ಹೇರುವುದು ತರವಲ್ಲ. ಅನ್ಯ ವಿಷಯದಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುವುದು. ಮಹಿಳೆಯರು ರಾಜಕೀಯದಿಂದ ತಾತ್ಕಾಲಿಕವಾಗಿ ದೂರವಿರುವುದು ಒಳ್ಳೆಯದು. ಮಡದಿಯ ಅಂತರಂಗದ ಬಯಕೆಗಳನ್ನು ತಿಳಿದು ನೆರವೇರಿಸಿ. ವ್ಯಾಜ್ಯಗಳನ್ನು ಕೋರ್ಟು ಹೊರಗೆ ಬಗೆಹರಿಸಿಕೊಳ್ಳುವುದು ಉತ್ತಮ. ಕುಲದೇವತಾ ದರ್ಶನ ಪಡೆಯಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಬಂಧುಗಳಿಂದ ಸಹಕಾರ ದೊರೆಯುವುದು. ಆಸ್ತಿ ಖರೀದಿಯ ವಿಚಾರ ಚಾಲನೆಗೆ ಬರುವುದು. ಸಹೋದರರಿಂದ ಸಕಾಲಿಕ ನೆರವು ದೊರೆಯುವುದು. ಅಧ್ಯಾಪಕ ವರ್ಗದವರಿಗೆ ಸ್ಥಳ ಬದಲಾವಣೆಯ ಸಾಧ್ಯತೆ ಇರುವುದು. ಭೂಮಿ ಖರೀದಿಯಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ. ಮನಸ್ಸಿನ ಸ್ಥಿಮಿತಕ್ಕೆ ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ನೆರೆಹೊರೆಯವರೊಂದಿಗೆ ಸಾಮರಸ್ಯ ಉತ್ತಮ. ಮಹಿಳೆಯರಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ. ಆರ್ಥಿಕ ಸುಧಾರಣೆ ಕಂಡುಬರುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಹಿರಿಯರ ಸಲಹೆಯನ್ನು ತಿರಸ್ಕರಿಸಬೇಡಿ. ಅನಗತ್ಯ ವಾದ-ವಿವಾದಗಳಿಂದ ದೂರ ಇರುವುದು ಒಳ್ಳೆಯದು. ಮಹತ್ತರ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮುನ್ನ ಆಲೋಚಿಸಿ. ಶ್ರದ್ಧಾವಂತರಿಗೆ ಉತ್ತಮ ಅವಕಾಶ. ನವ ದಂಪತಿಗಳಲ್ಲಿ ದಾಂಪತ್ಯ ಜೀವನದ ಸಂತಸ. ಮಿತ್ರರ ಸಹಾಯದಿಂದ ಈ ವಾರದ ಕೆಲಸಗಳು ಸರಾಗವಾಗಿ ಆಗುವುದು. ಮನೆಯಲ್ಲಿ ಮಂಗಳ ಕಾರ್ಯಕ್ಕೆ ಮುಂದಾಳತ್ವ. ಚಿಕ್ಕಮಕ್ಕಳ ಜತೆ ಸ್ವಲ್ಪ ಕಾಲ ಕಳೆಯಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಜೀವನದಲ್ಲಿ ಉತ್ಸಾಹ ಇಮ್ಮಡಿ ಆಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಬೇರೆಯವರ ವ್ಯವಹಾರದಲ್ಲಿ ಅನಗತ್ಯ ಕೈಹಾಕಿದರೆ ಹಣ ಮಾನ ಹಾನಿ ಕಾರ್ಯದ ಒತ್ತಡದಲ್ಲಿ ಆರೋಗ್ಯ ಹಾನಿ. ತಲೆ ಮತ್ತು ನರಸಂಬಂಧಿ ರೋಗಗಳು ಕಾಡುವ ಸಾಧ್ಯತೆ ಇದೆ. ಮನೆ ವೈದ್ಯರ ಭೇಟಿ ಮಾಡಿ ಸಲಹೆ ಪಡೆಯಿರಿ. ಪಿತ್ರಾರ್ಜಿತ ಆಸ್ತಿ ವಿಚಾರವು ಸದ್ಯಕ್ಕೆ ಬಗೆಹರಿಯುವುದಿಲ್ಲ. ವ್ಯವಹಾರದಲ್ಲಿ ಪಾಲುದಾರರ ಸಲಹೆ ಕೇಳಿ. ಪರಿಶ್ರಮದಿಂದ ಯಶಸ್ಸು-ಗೌರವ ಉಂಟಾಗುವುದು. ಆತುರದ ನಿರ್ಧಾರದ ಸ್ವಭಾವ ಬದಲಿಸಿಕೊಳ್ಳಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.

ಸಿಂಹ:

ದಿನ ಭವಿಷ್ಯ

ಸಿಂಹ:- ಸ್ನೇಹಿತರ ಬೆಂಬಲವಿದ್ದರೂ ವ್ಯವಹಾರದಲ್ಲಿ ಕಟ್ಟುನಿಟ್ಟಾಗಿರಿ. ಅತಿ ಸಲುಗೆಯಿಂದ ಆರ್ಥಿಕ ನಷ್ಟ. ಮಕ್ಕಳ ನಡವಳಿಕೆ ಮತ್ತು ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇರಲಿ. ತಾಂತ್ರಿಕ ವರ್ಗದವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡುಬರುವುದು. ಸಂಶೋಧಕರಿಗೆ ಉತ್ತಮ ದಿನ. ಕೌಟುಂಬಿಕ ಕಾರ್ಯಗಳಲ್ಲಿ ಭಾಗಿಯಾದಲ್ಲಿ ಬಾಂಧವ್ಯ ವೃದ್ಧಿಸುವುದು. ಮಿತಿ ಮೀರಿದ ಖರ್ಚಿಗೆ ಕಡಿವಾಣ ಹಾಕಿ. ಗುರುವಿನ ಬಲದಿಂದ ಈ ವಾರ ಹಮ್ಮಿಕೊಂಡ ಕೆಲಸಗಳು ಸುಗಮವಾಗಿ ನಡೆಯಲಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಅದಮ್ಯ ಉತ್ಸಾಹದಿಂದ ಎಲ್ಲರ ಮೆಚ್ಚುಗೆ ಪಡೆಯುವಿರಿ. ಬೇರೆಯವರ ಮಾತಿಗೆ ಮಹತ್ವ ಬೇಡ. ದೈನಂದಿನ ಜೀವನದಲ್ಲಿ ಉತ್ಸಾಹ. ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಡಿ ಮತ್ತು ಇತರರಿಗೂ ವಹಿಸದಿರಿ. ಬಾಕಿ ಹಣ ಈ ವಾರ ನಿಮ್ಮ ಕೈಸೇರುವುದು. ಮಕ್ಕಳ ಮೇಲಿನ ಅತಿಯಾದ ಹಿಡಿತದಿಂದ ಸಮಸ್ಯೆ ಸೃಷ್ಟಿಯಾಗುವುದು. ಸಂಶೋಧನಾ ಕ್ಷೇತ್ರದಲ್ಲಿ ನೂತನ ಫಲಿತಾಂಶ ಕಂಡುಬರುವುದು. ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ. ಗುರುದೇವತಾ ದರ್ಶನ ಮಾಡುವಿರಿ. ಪ್ರಯಾಣವನ್ನು ಮುಂದೂಡುವುದು ಒಳಿತು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ದೂರ ಪ್ರಯಾಣದಿಂದ ಹೆಚ್ಚಿನ ಲಾಭವಾಗುವುದಿಲ್ಲ. ಇದರಿಂದ ದುಡ್ಡು ಹಾಳು ಮತ್ತು ಆರೋಗ್ಯವೂ ಹಾಳು. ಹೊಸ ವಸ್ತುಗಳ ಖರೀದಿ ಮಾಡುವಿರಿ. ಕುಲದೇವತಾರಾಧನೆಯಿಂದ ಇಷ್ಟಾರ್ಥ ಸಿದ್ಧಿಸುವುದು. ಸಾಧು ಸಂತರ ದರ್ಶನ. ಅಧ್ಯಾತ್ಮ ಚಿಂತನೆಯಿಂದ ಸಂತೃಪ್ತಿ. ನ್ಯಾಯಾಲಯದ ಕೇಸು ನಿಮ್ಮಂತೆ ತೀರ್ಮಾನವಾಗಲಿದೆ. ಸಹಾಯ ಕೋರಿ ಬಂಧುಗಳ ಆಗಮನ. ಶಕ್ತಿ ಮೀರಿ ನೆರವು ನೀಡುವಿರಿ. ಹಿರಿಯರ ಮಾರ್ಗದರ್ಶನ ಆತ್ಮವಿಶ್ವಾಸ ತುಂಬಲಿದೆ. ಆದಾಯದ ವಿಚಾರದಲ್ಲಿ ಸೂಕ್ತ ಲೆಕ್ಕಪತ್ರಗಳನ್ನು ಇಡಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಬಹಳ ದಿನಗಳಿಂದ ಕಾಡುತ್ತಿದ್ದ ಕಾಯಿಲೆಗಳಿಂದ ಮುಕ್ತಿ ಹೊಂದುವಿರಿ. ನವೋಲ್ಲಾಸದಿಂದ ಜೀವನದಲ್ಲಿ ಸುಖ-ಸಂತೋಷ-ನೆಮ್ಮದಿ ಕಾಣಲಿದೆ. ಗುರುವು ನಿಮ್ಮ ಮೇಲೆ ಕನಿಕರ ತೋರಿರುವರು. ಗೆಳೆಯರೊಂದಿಗೆ ವೈಮನಸ್ಸು ಬೇಡ. ಸಹೋದರನೊಂದಿಗೆ ಕುಳಿತು ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿ. ವಿದ್ಯಾರ್ಥಿಗಳು ಹೆಚ್ಚು ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು. ಆಂಜನೇಯ ಸ್ತೋತ್ರ ಪಠಿಸಿ. ಹಿರಿಯರ ಬಗ್ಗೆ ಅನಾದರ ಬೇಡ. ನಿರುದ್ಯೋಗಿಗಳಿಗೆ ಸಾಧಾರಣ ವೇತನದ ನೌಕರಿ ದೊರೆಯುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವಿದ್ಯುತ್‌, ಬೆಂಕಿ ಮುಂತಾದ ಅಪಾಯಕಾರಿ ವಸ್ತುಗಳೊಂದಿಗೆ ಕೆಲಸ ಮಾಡುವವರು ಎಚ್ಚರದಿಂದಿರಿ. ಸಾಂಸಾರಿಕ ಸಮಸ್ಯೆಗಳು ಉಲ್ಬಣ ಹೊಂದುವ ಸಾಧ್ಯತೆ ಇದೆ. ಶಿವಪಂಚಾಕ್ಷ ರಿ ಮಂತ್ರವನ್ನು ಪಠಿಸಿ. ಸಹೋದರಿಗೆ ಉದರ ಸಮಸ್ಯೆ ಕಾಡುವುದು. ವಿವಾಹ ಸಂಬಂಧಿ ಮಾತುಕತೆಯು ಅರ್ಧಕ್ಕೆ ನಿಲ್ಲುವುದು. ಆದಾಯವು ಉತ್ತಮ ರೀತಿಯಲ್ಲಿದ್ದು ಅದರಿಂದ ಹೊಸ ಯೋಜನೆಗಳಿಗೆ ಕೈ ಹಾಕುವಿರಿ. ಪಡೆದ ಸಾಲವನ್ನು ತೀರಿಸುವತ್ತ ಗಮನ ಹರಿಸುವಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಕೆಲಸಗಾರರಿಂದ ನಿಷ್ಠೆ, ಪ್ರಾಮಾಣಿಕತೆ ನಿರೀಕ್ಷಿಸಬಹುದು. ತಪ್ಪಿದ ಲೆಕ್ಕಾಚಾರ ಸರಿಯಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆ, ಬಡ್ತಿ ಸಾಧ್ಯತೆ. ಸಂಪಾದನೆ ಹೆಚ್ಚಾದರೂ ಖರ್ಚಿಗೆ ಸರಿಹೋಗಲಿದೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸಾಧ್ಯತೆ. ಅಮೂಲ್ಯ ವಸ್ತುಗಳ ಬಗ್ಗೆ ಅಲಕ್ಷ್ಯ ಬೇಡ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು. ವಿದ್ವಾಂಸರಿಗೆ ಸಮಾಜದಲ್ಲಿ ಮಾನ ಸನ್ಮಾನಗಳು ಆಗುವವು. ಕಲಾವಿದರಿಗೆ ಸೂಕ್ತ ಅವಕಾಶ ದೊರೆಯುವುದು. ನವಮಭಾಗ್ಯ ಸ್ಥಾನದ ಗುರು ಸಂಚಾರದಿಂದಾಗಿ ಭಾಗ್ಯಕ್ಕೆ ಕೊರತೆ ಇರುವುದಿಲ್ಲ.

ಕುಂಭ:

ದಿನ ಭವಿಷ್ಯ

ಕುಂಭ:- ಆಸ್ತಿ ವ್ಯವಹಾರದಲ್ಲಿ ವಿಶೇಷ ಲಾಭವಾಗುವುದು. ಗುರು ಸಂಚಾರದ ಬಲದಿಂದ ಕೌಟುಂಬಿಕ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಉಂಟಾಗುವುದು. ಹಿರಿಯರ ಅಣತಿಯನ್ನು ಪಾಲಿಸಿ. ಗುರುದೇವತಾ ದರ್ಶನ ಪಡೆಯಿರಿ. ಇಷ್ಟದೇವರ ಮತ್ತು ಗುರು ಉಪದೇಶಿಸಿದ ಮಂತ್ರದ ಜಪದಿಂದ ಇಷ್ಟಾರ್ಥ ಸಿದ್ಧಿ. ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಕೋರ್ಟು ವಿಚಾರ ಮುಂದೆ ಹೋಗಲಿದೆ. ಆಹಾರ-ವಿಹಾರದಲ್ಲಿ ಕ್ರಮತೆಯನ್ನು ಕಾಯ್ದುಕೊಳ್ಳುವಿರಿ. ಬಂಧುಮಿತ್ರರ ಭೇಟಿ ಆಗುವುದು.

ಮೀನ:

ದಿನ ಭವಿಷ್ಯ

ಮೀನ:- ಅನಿರೀಕ್ಷಿತ ಮೂಲಗಳಿಂದ ಬರುವ ಆದಾಯದಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು. ಹೊಸ ಹೊಸ ಯೋಜನೆಗಳಿಗೆ ಮೂಲ ಬಂಡವಾಳವಾಗಲಿದೆ. ಆದಾಯ ಅಪವ್ಯಯವಾಗದಂತೆ ನೋಡಿಕೊಳ್ಳಿ. ವೃತ್ತಿ ಸಂಬಂಧಿಸಿದ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ನೆರೆಹೊರೆಯವರೊಂದಿಗೆ ಸ್ನೇಹಭಾವದಿಂದ ವರ್ತಿಸಿ. ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸುವಿರಿ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆಯುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 03 ನವೆಂಬರ್ ರಿಂದ 09 ನವೆಂಬರ್, ರವರೆಗೆ, 2019!!