ವಾರ-ಭವಿಷ್ಯ: 2 ಜೂನ್ ರಿಂದ 8 ಜೂನ್ ರವರೆಗೆ, 2019!!

0
618

Astrology in kannada | kannada news ವಾರ-ಭವಿಷ್ಯ: 2 ಜೂನ್ ರಿಂದ 8 ಜೂನ್ ರವರೆಗೆ, 2019!!

ವಾರ-ಭವಿಷ್ಯ: 2 ಜೂನ್ ರಿಂದ 8 ಜೂನ್ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ನೀವು ಮಾಡಿಕೊಳ್ಳುವ ಪ್ರತಿ ಒಪ್ಪಂದವೂ ಲಾಭದಾಯಕವಾಗಲಿದೆ. ವ್ಯವಹಾರ ಹೊಸದಾಗಿದ್ದಲ್ಲಿ ಅದರ ಮೂಲ ಸ್ವರೂಪ ತಿಳಿಯದೆ ಮಾತುಕತೆ ಮಾಡಬೇಡಿ. ಬಾಡಿಗೆ ವಾಹನಗಳ ಮಾಲಿಕರಿಗೆ ಬಿಡುವಿಲ್ಲದ ವಹಿವಾಟು ಹೆಚ್ಚಿನ ಲಾಭ ತರಲಿದೆ. ಉದರ ಸಂಬಂಧಿ ಹಳೆ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಇವೆ.

ವೃಷಭ:

ದಿನ ಭವಿಷ್ಯ

ವೃಷಭ:- ಸರ್ಕಾರದ ಕಡೆಯಿಂದ ಆಗಬೇಕಾಗಿದ್ದ ಕೆಲಸಗಳು ರಾಜಕಾರಣಿಗಳ ಶಿಫಾರಸ್ಸಿಲ್ಲದೆ ಆಗುವುದೇ ಇಲ್ಲ. ಅವರ ನೆರವು ಪಡೆಯದೆ ವಿಧಿ ಇಲ್ಲ. ವ್ಯಾಪಾರಿಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಹುಡುಕುವುದೇ ಕಷ್ಟವಾಗುವುದು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ನವ ದಂಪತಿಯಲ್ಲಿ ಸಾಮರಸ್ಯ ಮೂಡಿ ಭಿನ್ನಾಭಿಪ್ರಾಯ ದೂರವಾಗಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಹಿರಿಯರ ಪ್ರೋತ್ಸಾಹ ಹಾಗೂ ಆಶೀರ್ವಾದದಿಂದ ಆರಂಭಿಸಿದ ಉದ್ಯಮ ವಿಶೇಷ ಧನ ಲಾಭ ತರಲಿದೆ. ಮುಂದೆಯೂ ಅದು ಯಶಸ್ಸಿನತ್ತ ಸಾಗಲಿದೆ. ಮಡದಿಯ ಆರೋಗ್ಯ ಅಲಕ್ಷಿಸಬೇಡಿ. ಸ್ನೇಹಿತರ ಮಾರ್ಗದರ್ಶನದಿಂದ ವಿದೇಶಿ ವ್ಯವಹಾರ ಅಭಿವೃದ್ಧಿಯಾಗಲಿದೆ. ಆಸ್ತಿ ಖರೀದಿ ಸದ್ಯಕ್ಕೆ ಬೇಡ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಕಂಡುಬರುವ ಪ್ರಗತಿ ಸಂತಸ ತರಲಿದೆ. ಹೆಚ್ಚಿನ ಲಾಭ ಮತ್ತು ತೃಪ್ತಿಕರ ಜೀವನ ನಿಮ್ಮದಾಗುವುದು. ಮಾತಿನಲ್ಲಿ ಹಿಡಿತವಿರಲಿ. ಬಂಧುಗಳೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಖಾಸಗಿ ಕಂಪನಿಗಳ ಲೆಕ್ಕ ಪತ್ರ ವಿಭಾಗದಲ್ಲಿ ಕೆಲಸ ಮಾಡುವವರು ತಮ್ಮ ಕೆಲಸಗಳು ಅಚ್ಚುಕಟ್ಟಾಗಿವೆಯೇ ಎಂದು ಅವಲೋಕಿಸಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಹಿರಿಯರೊಂದಿಗೆ ವಿನಾಕಾರಣ ವಾಗ್ವಾದ ಬೇಡ. ಉದ್ಯಮಿಗಳು ಕಾರ್ಮಿಕರ ಹಿತಾಸಕ್ತಿ ಕಡೆ ಗಮನ ಹರಿಸಿ. ಪ್ರಯಾಣ ಅನಿವಾರ್ಯವಾಗದಿದ್ದಲ್ಲಿ ಮುಂದೂಡುವುದು ಒಳ್ಳೆಯದು. ಹಣಕಾಸು ವ್ಯವಹಾರದಲ್ಲಿ ಪ್ರಾಮಾಣಿಕತೆಯಿರಲಿ. ನೀವು ಎಷ್ಟೇ ಶ್ರಮ ಪಟ್ಟರೂ ಕೆಲಸಗಳು ಅರ್ಧಕ್ಕೆ ನಿಲ್ಲುವವು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮನೆಗೆ ಬರುವ ಅತಿಥಿಗಳಿಗೆ ವಿಶೇಷ ಸತ್ಕಾರ ಮಾಡುವಿರಿ. ಅವರೊಂದಿಗೆ ಆಡುವ ಮಾತು ಮೊನಚಾಗದಿರಲಿ. ಸಹೋದ್ಯೋಗಿಗಳ ನೆರವಿನೊಂದಿಗೆ ಪೂರ್ತಿ ಕರ್ತವ್ಯ ನಿರ್ವಹಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುವುದು. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರದ ಗುಟ್ಟು ಬಿಟ್ಟುಕೊಡದಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಖ್ಯಾತ ವಿದ್ವಾಂಸರ ಭೇಟಿಯಿಂದ ನಿಮ್ಮ ಜ್ಞಾನವೃದ್ಧಿ ಆಗಲಿದೆ. ಮನೆಯಲ್ಲಿ ನಡೆಯಬೇಕಾಗಿರುವ ಶುಭ ಕಾರ್ಯಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಿರಿ. ಹಿರಿಯರು ಹೊತ್ತುಕೊಂಡಿದ್ದ ಹರಕೆಗಳನ್ನು ಪೂರೈಸಲು ಪ್ರಯತ್ನಿಸಿ. ಆದಾಯ ಮೂಲ ಹೆಚ್ಚಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಉಳಿತಾಯ ಶೂನ್ಯ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಮಕ್ಕಳ ಬೇಡಿಕೆಗಳನ್ನು ಪೂರೈಸುವಲ್ಲಿ ಹೈರಾಣ ಆಗುವಿರಿ. ಆದರೂ ಹಠಕ್ಕೆ ಬಿದ್ದ ಮಗನ ಬೇಡಿಕೆಯಂತೆ ನೂತನ ದ್ವಿಚಕ್ರ ವಾಹನ ಖರೀದಿಗೆ ಮುಂದಾಗುವಿರಿ. ಶರೀರದಲ್ಲಿ ಅನಿರೀಕ್ಷಿತ ಬದಸಲಾಣೆ ಕಾಡುವುದು. ಇದಕ್ಕೆ ಸೂಕ್ತ ಚಿಕಿತ್ಸೆ ಮಾಡಿಸಿ. ಅತಿ ವಾದ ವಿವಾದಗಳನ್ನು ಮಾಡಬೇಡಿ. ಇದರಿಂದ ನಿಷ್ಠುರ ಮಾತ್ರವಲ್ಲದೆ ನಿಮ್ಮ ಹೆಸರಿಗೆ ಕಳಂಕವೂ ಬರುವುದು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ನೀವು ಎಷ್ಟೇ ಉತ್ಸಾಹದಿಂದ ಕೆಲಸಗಳನ್ನು ಮಾಡಿದರೂ ಅವು ತಾಂತ್ರಿಕ ಕಾರಣಗಳಿಂದಾಗಿ ಮಂದ ಪ್ರಗತಿಯಲ್ಲಿ ಸಾಗುವವು. ಅತಿಯಾದ ಆರ್ಥಿಕ ಒತ್ತಡ, ಅಗ್ನಿಮಾಂದ್ಯ ಸಮಸ್ಯೆಯಿಂದಾಗಿ ಉದರ ಶೂಲೆ ಕಾಡುವುದು. ಯಾವುದೇ ಹೊಸ ಉದ್ಯಮ ಯೋಜನೆಗಳನ್ನು ಆರಂಭಿಸಬೇಡಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿಮ್ಮ ಪ್ರತಿ ಕಾರ್ಯಕ್ಕೂ ಅಡ್ಡಿಯನ್ನುಂಟು ಮಾಡುತ್ತಿದ್ದವರು ತಾವಾಗಿಯೇ ನಿಮಗೆ ಶರಣಾಗುವರು. ಆದಾಯ ಮೂಲ ಹೆಚ್ಚುವುದು. ಹಳೆ ಮನೆ ರಿಪೇರಿ ಕೆಲಸವನ್ನು ಅನವಶ್ಯಕವಾಗಿ ಮುಂದೂಡಬೇಡಿ. ಸೋದರಿ ಕುಟುಂಬದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಬರಲಿದ್ದು ಅದರಲ್ಲಿ ನಿಮ್ಮ ಪ್ರವೇಶ ಬೇಡ.

ಕುಂಭ:

ದಿನ ಭವಿಷ್ಯ

ಕುಂಭ:- ಎಂತಹ ಸನ್ನಿವೇಶ ಬಂದರೂ ನಿಭಾಯಿಸುವ ಛಾತಿಯುಳ್ಳ ನಿಮಗೆ ಯಾವುದೇ ಕೆಲಸ ಕಷ್ಟ ಎನಿಸುವುದಿಲ್ಲ. ದೈವಾನುಗ್ರಹ ಸಂಪೂರ್ಣ ನಿಮ್ಮ ಮೇಲಿದ್ದು ಎಲ್ಲವೂ ನೀವು ಅಂದುಕೊಂಡಂತೆ ನಡೆಯಲಿವೆ. ಬಂಧುಗಳ ಮನೆಯಲ್ಲಿ ಮದುವೆಯೊಂದು ಗೊತ್ತಾಗಲಿದ್ದು ಅದರ ಮುಂದಾಳತ್ವ ನಿಮ್ಮದೇ ಆಗಲಿದೆ. ಕುಟುಂಬ ಸದಸ್ಯರೊಬ್ಬರಿಗೆ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸವಾಗಲಿದೆ.

ಮೀನ:

ದಿನ ಭವಿಷ್ಯ

ಮೀನ:- ಅತಿ ಮುಂಗೋಪದಿಂದ ಹಿರಿಯರೊಡನೆ ನಿಷ್ಠುರದ ಮಾತುಗಳನ್ನಾಡುವ ಪ್ರಸಂಗ ಬರಲಿದೆ. ಕಾರಣ ತಿಳಿಯದೇ ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲವಾದಲ್ಲಿ ಮನೆಯಲ್ಲಿ ದೊಡ್ಡ ಅನಾಹುತವೇ ನಡೆಯಬಹುದು. ಗೆಳೆಯರ ನಡುವೆ ಭಿನ್ನಾಭಿಪ್ರಾಯ ಮೂಡಲಿದೆ. ಆದರೆ ಅದು ಹೆಚ್ಚು ದಿನ ಇರುವುದಿಲ್ಲ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 2 ಜೂನ್ ರಿಂದ 8 ಜೂನ್ ರವರೆಗೆ, 2019!!