ವಾರ-ಭವಿಷ್ಯ: 24 ಜನವರಿ ರಿಂದ 30 ಜನವರಿ, ರವರೆಗೆ, 2021!!

0
1022

Astrology in kannada | kannada news ವಾರ-ಭವಿಷ್ಯ: 24 ಜನವರಿ ರಿಂದ 30 ಜನವರಿ, ರವರೆಗೆ, 2021!!

ವಾರ-ಭವಿಷ್ಯ: 24 ಜನವರಿ ರಿಂದ 30 ಜನವರಿ, ರವರೆಗೆ, 2021!!

ಮೇಷ:

ದಿನ ಭವಿಷ್ಯ

ಮೇಷ:- ಈ ವಾರ ಅಪರೂಪದ ವ್ಯಕ್ತಿ ಪರಿಚಯದಿಂದಾಗಿ ನಿಮ್ಮ ಜೀವನದಲ್ಲಿ ಭಾರೀ ಬದಲಾವಣೆ ಕಂಡು ಬರುವುದು. ಹಿರಿಯರು ಮಾಡಿದ ಚರ, ಸ್ಥಿರ ಆಸ್ತಿಗಳ ವಿಷಯದಲ್ಲಿ ದಾಯಾದಿಗಳೊಂದಿಗೆ ತೀವ್ರ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಮಿತ್ರರು ಕೊಡುವ ಸಲಹೆಗಳನ್ನು ಸ್ವೀಕರಿಸುವುದರಿಂದ ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಅನುಕೂಲವಾಗುವುದು. ಆರ್ಥಿಕ ಸ್ಥಿತಿಗತಿಯಲ್ಲಿ ಅಲ್ಪ ಹಿನ್ನಡೆ ಕಂಡು ಬರುವುದು. ವ್ಯಾಪಾರಿಗಳಿಗೆ ಈ ವಾರ ಹೆಚ್ಚಿನ ಅನುಕೂಲ ಕಂಡುಬರುವುದು. ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಡಿ.

ವೃಷಭ:

ದಿನ ಭವಿಷ್ಯ

ವೃಷಭ:- ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ನಿರೀಕ್ಷೆ ಮಾಡಬಹುದು. ಈಗಾಗಲೇ ಆಪತ್‌ ಧನವೆಂದು ಕೂಡಿಟ್ಟ ಹಣದಿಂದ ಹೊಸ ಯೋಜನೆ ಆರಂಭಿಸಲು ಅಡ್ಡಿಯಿಲ್ಲ. ಮನಶ್ಯಾಂತಿಗೆ ಆಧ್ಯಾತ್ಮ ಮಂದಿರಗಳಿಗೆ ಭೇಟಿ ಕೊಡುವಿರಿ. ಪುಸ್ತಕಗಳ ಖರೀದಿ ನಡೆಯಲಿದೆ. ಸಮಾಜ ಸೇವೆಯಲ್ಲಿ ಜನಪ್ರಿಯತೆ ಗಳಿಸುವಿರಿ. ಮಕ್ಕಳ ನಿಮಿತ್ತವಾಗಿ ಕೌಟುಂಬಿಕ ಕಲಹ. ಬಡ ವಿದ್ಯಾರ್ಥಿಗಳಿಗೆ ಮಾಡುವ ಸಹಾಯ ಪುಣ್ಯಕರ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉದಾಸೀನ ತೋರಬಾರದು. ಸರ್ಕಾರಿ ಕೆಲಸಗಳಲ್ಲಿ ವಿಳಂಬತೆ ಉಂಟಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಬಹಳ ಕಾಲದಿಂದ ಅಸಾಧ್ಯವಾಗಿದ್ದ ಕೆಲಸ ಮುಗಿಯಲಿದೆ. ನಿರುತ್ಸಾಹದಿಂದ ಏನೂ ಪ್ರಯೋಜನವಿಲ್ಲ. ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿರಿ. ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಮದುವೆಗೆ ಸಂಬಂಧಿಸಿದ ಪ್ರಸ್ತಾಪವೊಂದು ಮನೆಯಲ್ಲಿ ತೀವ್ರ ಚರ್ಚೆಗೆ ಬರಲಿದೆ. ಸ್ವಯಂ ಉದ್ಯೋಗಿಗಳಿಗೆ ಅಧಿಕ ಲಾಭ ಕಂಡುಬರುವುದು. ಸಂಶೋಧಕರು ಕರ್ತವ್ಯದಲ್ಲಿ ಗೊಂದಲಕ್ಕೆ ಒಳಗಾಗುವರು. ಕುಟುಂಬದಲ್ಲಿ ಶಾಂತಿ ನೆಮ್ಮದಿ ಕಂಡು ಬರಲಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಗುರುವಿನ ಬಲ ಕಡಿಮೆ ಆಗಿರುವುದರಿಂದ ಸದ್ಯದ ಮಟ್ಟಿಗೆ ನಿಮ್ಮ ಅದೃಷ್ಟ ಅಷ್ಟಕಷ್ಟೆ. ಸಹೋದ್ಯೋಗಿಗಳ ಅಸಹಕಾರ ನಿಮ್ಮ ತಾಳ್ಮೆ ಪರೀಕ್ಷಿಸುತ್ತದೆ. ರಾಜಕಾರಣಿಗಳ ಸಹಕಾರ ನಿಮ್ಮಲ್ಲಿ ತುಸು ನೆಮ್ಮದಿ ತರಲಿದೆ. ಮನೆಯಲ್ಲಿ ನಡೆಯಲಿರುವ ಮಂಗಳ ಕಾರ್ಯಗಳಿಗೆ ಹೆಚ್ಚು ಖರ್ಚು ಆಗುವುದು. ದೂರದ ಊರಿನ ಪ್ರಯಾಣ ಅನಿವಾರ್ಯವಾಗುವುದು. ತಕ್ಕ ಸಿದ್ಧತೆಯೊಂದಿಗೆ ಪ್ರಯಾಣ ಆರಂಭಿಸಿರಿ. ಖರ್ಚು-ವೆಚ್ಚಗಳಿಗೊಂದು ಕಡಿವಾಣ ಹಾಕಿರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.

ಸಿಂಹ:

ದಿನ ಭವಿಷ್ಯ

ಸಿಂಹ:- ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರಲಿದೆ. ಬಂಧುಗಳೊಂದಿಗೆ ಇರುವ ಆತ್ಮೀಯತೆ ವೃದ್ಧಿಯಾಗಲಿದೆ. ಮಾಡುವ ಕೆಲಸದಲ್ಲಿ ವಿಶೇಷ ಆಸಕ್ತಿ ವಹಿಸುವಿರಿ. ವೈಯಕ್ತಿಕ ಜೀವನದಲ್ಲಿ ಸಮಾನ ಅವಕಾಶಗಳು ಲಭಿಸಲಿದೆ. ಕಾರ್ಯಸಿದ್ಧಿಗೆ ಹಿರಿಯರ ಆಶೀರ್ವಾದವನ್ನು ವಿಶೇಷವಾಗಿ ಪಡೆಯಿರಿ. ವಿದೇಶದಲ್ಲಿ ಬಂಡವಾಳ ಹೂಡುವಾಗ ಅನೇಕ ಬಾರಿ ಆಲೋಚಿಸುವುದು ಉತ್ತಮ. ಪ್ರತಿಯೊಂದಕ್ಕೂ ಮತ್ತೊಬ್ಬರನ್ನು ಅವಲಂಬಿವುದನ್ನು ಬಿಡಿ. ಸ್ವಂತಿಕೆಯನ್ನು ರೂಢಿಸಿಕೊಳ್ಳಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ಜವಾಬ್ದಾರಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುವುದು. ಉನ್ನತ ಪದವಿ ಅಧಿಕಾರಗಳು ಬಂಧುಗಳಿಂದ ನಿಮ್ಮನ್ನು ದೂರ ಮಾಡುವ ಸಾಧ್ಯತೆ ಇದೆ. ಮಿತ್ರರ ಸಹಾಯದಿಂದ ಕೆಲಸಗಳು ಸುಸೂತ್ರವಾಗಿ ನೆರವೇರಲಿದೆ. ಮತ್ಯಾರದೋ ಒತ್ತಡಕ್ಕೆ ಒಳಗಾಗಿ ನಿಮ್ಮತನವನ್ನು ಕಳೆದುಕೊಳ್ಳದಿರಿ. ಲೇಖಕರಿಗೆ ಸಂತಸದ ವಾರ್ತೆ ಕೇಳಿಬರಲಿದೆ. ಈ ವಾರವೆಲ್ಲಾ ಉತ್ಸಾಹದಿಂದಲೇ ಜೀವನ ಕಳೆಯುವಿರಿ. ವಿಪರೀತವಾದ ದೇಹಾಲಸ್ಯದಿಂದಾಗಿ ಕಾರ್ಯಭಾರವನ್ನು ಪರರಿಗೆ ವಹಿಸುವಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ದೈನಂದಿನ ಪುನರಾವೃತ್ತಿ ಕೆಲಸಗಳಿಂದ ಬೇಸತ್ತ ನೀವು ಹೊಸ ಬದಲಾವಣೆ ಬಯಸುವಿರಿ. ಸ್ನೇಹಿತರಿಗೆ ವ್ಯವಹಾರದ ಪಟ್ಟುಗಳನ್ನು ಕಲಿಸುವಿರಿ. ಇದರಿಂದ ಪ್ರೀತಿ ವಿಶ್ವಾಸ ನಿಮ್ಮ ಮೇಲೆ ಹೆಚ್ಚಲಿದೆ. ದೈಹಿಕ ಸಮಸ್ಯೆಗಳನ್ನು ಮುಚ್ಚಿಡುವುದರಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗಬಹುದು. ಮಕ್ಕಳು ಉನ್ನತ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವರು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಪ್ರಯಾಣ ಕಾಲದಲ್ಲಿ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಹಳೇ ಸಾಲಗಳು ಬೇಗನೇ ತೀರಲಿವೆ. ಇದಕ್ಕೆ ಗುರುವಿನ ಬಲ ಬಂದಿರುವುದು ಸಾಕ್ಷಿಯಾಗಲಿದೆ. ಆರ್ಥಿಕ ಬೆಳವಣಿಗೆಗೆ ಪಾಲುದಾರರ ವಿಶೇಷ ಸಹಾಯದಿಂದ ವ್ಯವಹಾರದಲ್ಲಿ ವ್ಯವಸ್ಥೆ ಸರಿಹೋಗುವುದು. ದೇಹಾಲಸ್ಯದಿಂದಾಗಿ ಪ್ರಯಾಣ ಸುಖಕರವಾಗುವುದಿಲ್ಲ. ಬಾಲ್ಯ ಸ್ನೇಹಿತರ ಭೇಟಿ ಮುದ ನೀಡಲಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ನೌಕರಿ ದೊರೆಯಲಿದೆ. ಮಿತ್ರರಿಂದ ಪಡೆದ ಸಹಾಯವನ್ನು ಎಂದಿಗೂ ಮರೆಯದಿರಿ. ಹಿರಿ-ಕಿರಿತೆರೆಗಳಿಂದ ವಿಶೇಷ ಆಹ್ವಾನ ಬರಲಿದೆ. ಶುಭ ಸಮಾಚಾರ ಕೇಳುವಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಉದ್ಯೋಗಾನ್ವೇಷಣೆಯಲ್ಲಿರುವ ನಿರುದ್ಯೋಗಿಗಳಿಗೆ ಆಶ್ವಾಸನೆಗಳು ವಿಶೇಷವಾಗಿ ಕೇಳಿ ಬರುವುದರಿಂದ ತಕ್ಕಮಟ್ಟಿಗೆ ಆತ್ಮವಿಶ್ವಾಸ ಹೊಂದಬಹುದು. ಬೇಡದ ವಿಷಯದ ಬಗ್ಗೆ ಚಿಂತೆ ಬೇಡ. ಗುರುಗಳ ಅನುಗ್ರಹ ಸಂಪಾದಿಸಲು ಯತ್ನಿಸುವುದು ಉತ್ತಮ. ಉದ್ಯಮಿಗಳಿಗೆ ಪ್ರಮುಖ ಬೆಳವಣಿಗೆ ಕಂಡುಬರಲಿದೆ. ಹಣ ಹೂಡಿಕೆ ಬಗ್ಗೆ ಮತ್ತೊಮ್ಮೆ ವಿಚಾರ ಮಾಡವುದು ಉತ್ತಮ. ಮತ್ತೊಬ್ಬರ ಒತ್ತಾಯಕ್ಕೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಬೇಡಿ. ಮನೆಯಲ್ಲಿ ವಿಶೇಷ ಶಾಂತಿ ಹವನ, ಪೂಜೆ ಪುನಸ್ಕಾರಗಳು ನಡೆಯುವವು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಅವಕಾಶಗಳು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರಲಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿರಿ. ನಿಮ್ಮ ಆಸೆ ಹಾಗೂ ಆಕಾಂಕ್ಷೆಗಳಿಗೆ ಪುಷ್ಟಿ ದೊರೆಯಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಈಗಲೇ ಒಂದು ವ್ಯವಸ್ಥೆ ಮಾಡುವುದು ಒಳಿತು. ನಿಮ್ಮ ನಿಷ್ಟೆ ಹಾಗೂ ಪ್ರಾಮಾಣಿಕತೆಯು ಎಲ್ಲರ ಪ್ರೀತಿಗೆ ಕಾರಣವಾಗಲಿದೆ. ಸಾಮಾಜಿಕ ಸೇವೆ ಮುಂದುವರೆಯುವುದು. ತಾಂತ್ರಿಕ ಉದ್ಯಮಿಗಳಿಗೆ ವಿದೇಶದಿಂದ ಭಾರಿ ಬೇಡಿಕೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಯಾವುದೇ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳುವುದಕ್ಕಿಂತ ಮನೆಯವರೊಂದಿಗೆ ಚರ್ಚಿಸಿ ತೆಗೆದುಕೊಳ್ಳುವುದರಿಂದ ಮಾಡುವ ಕೆಲಸಕ್ಕೆ ಒಂದು ಉತ್ತಮ ರೂಪುರೇಷೆ ಬರಲಿದೆ. ಸೋದರನಿಗೆ ಮನೆ ಕಟ್ಟಲು ಧನ ಸಹಾಯ ಮಾಡುವಿರಿ. ಕುಲದೇವರಿಗೆ ಹೋಗಿ ಬರುವುದರಿಂದ ಕೆಲಸಗಳು ಸುಗಮವಾಗಿ ಸಾಗುವುದು. ಜೀವನದಲ್ಲಿ ಕಾಣಬೇಕೆಂದಿರುವ ಯಶಸ್ಸು ನಿಮ್ಮ ನಿಷ್ಠೆ ಹಾಗು ಪರಿಶ್ರಮದ ಮೇಲೆ ಅವಲಂಬಿಸಿದೆ. ಮನೆಯಲ್ಲಿನ ಖರ್ಚು-ವೆಚ್ಚಗಳ ಕಡೆ ಗಮನ ಕೊಡುವುದು ಒಳ್ಳೆಯದು.

ಮೀನ:

ದಿನ ಭವಿಷ್ಯ

ಮೀನ:- ಸಹೋದ್ಯೋಗಿಗಳೊಡನೆ ಇದ್ದ ಭಿನ್ನಾಭಿಪ್ರಾಯವು ಈ ವಾರ ಗುರುವಿನ ಅನುಗ್ರಹದಿಂದ ಪರಿಹಾರವಾಗುವುದು. ಕಾರ್ಯ ಒತ್ತಡದ ನೆಪ ಮಾಡಿಕೊಂಡು ಕುಟುಂಬದ ಸದಸ್ಯರನ್ನು ಕಡೆಗಣಿಸಬೇಡಿರಿ. ಗುರು-ಹಿರಿಯರ ಆಶೀರ್ವಾದ ಬಲದಿಂದ ಕೆಲಸಗಳು ಸುಲಲಿತವಾಗಿ ಕೈಗೂಡಲಿವೆ. ಸೋದರಿಯೊಂದಿಗಿದ್ದ ಭಿನ್ನಾಭಿಪ್ರಾಯವೂ ದೂರವಾಗಲಿದೆ. ಆಪ್ತ ಬಂಧುವಿನ ಅನಾರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡುವುದು. ಸರ್ಕಾರಿ ಗುತ್ತಿಗೆದಾರರಿಗೆ ಬಾಕಿ ಹಣ ಶೀಘ್ರದಲ್ಲಿಯೇ ಕೈ ಸೇರಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 24 ಜನವರಿ ರಿಂದ 30 ಜನವರಿ, ರವರೆಗೆ, 2021!!