ವಾರ-ಭವಿಷ್ಯ: 5 ಮೇ ರಿಂದ 11 ಮೇ ರವರೆಗೆ, 2019!!

0
798

Astrology in kannada | kannada news ವಾರ-ಭವಿಷ್ಯ: 5 ಮೇ ರಿಂದ 11 ಮೇ ರವರೆಗೆ, 2019!!

ವಾರ-ಭವಿಷ್ಯ: 5 ಮೇ ರಿಂದ 11 ಮೇ ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಪ್ರತಿಯೊಂದರಲ್ಲೂ ಹೆಚ್ಚಿನ ಉತ್ಸಾಹದಿಂದ ಮುಂದುವರೆಯುವ ನಿಮಗೆ ಆರೋಗ್ಯದ ಬಗ್ಗೆ ಗಮನ ಬರದೇ ಹೋಗಬಹುದು. ಸಣ್ಣ ಸಣ್ಣ ವಿಷಯಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡುವುದರಲ್ಲಿ ಏನೂ ಅರ್ಥವಿಲ್ಲ. ನೈಜ ಪ್ರಸಂಗಗಳ ಕಡೆಗೆ ಗಮನ ಹರಿಸಿ. ಮಗನ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ಅನಿರೀಕ್ಷಿತ ತಿರುವು ಕಂಡು ಬರಲಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ನಾಯಕತ್ವದಲ್ಲಿ ನಡೆಯಲಿರುವ ಶುಭ ಸಮಾರಂಭಕ್ಕೆ ಸಮಸ್ತ ಬಾಂಧವರ ನೆರವು ದೊರೆಯಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರುವುದು. ಬಿಡುವಿಲ್ಲದ ಕೆಲಸ ನಿಮ್ಮದಾಗುವುದು. ಮನೆಗೆ ಅತಿಥಿಗಳ ಆಗಮನ ವಿಶೇಷವಾಗಿ ನಡೆಯಲಿದೆ. ಹಣಕಾಸಿನ ಅನುಕೂಲತೆ ಕಂಡು ಬರುವುದರಿಂದ ನೆನೆಗುದಿಗೆ ಬಿದ್ದಿದ್ದ ಹೊಸ ಯೋಜನೆಗಳಿಗೆ ಮರು ಚಾಲನೆ ದೊರೆಯಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಒಂದೇ ರೀತಿಯಾದ ಏಕತಾನತೆಯಿಂದ ವೃತ್ತಿಯಲ್ಲಿ ಆಸಕ್ತಿ ಕಳೆದುಕೊಂಡು ವಿಭಿನ್ನವಾಗಿ ಆಲೋಚಿಸುವಿರಿ. ಇದಕ್ಕೆ ಮನೆಯವರ ಬೆಂಬಲ ಸಂಪೂರ್ಣ ಸಿಗಲಿದೆ. ಖಾಸಗಿ ಕಂಪನಿ ನೌಕರರು ಮೇಲಧಿಕಾರಿಗಳ ಕೃಪೆ ಅಥವಾ ಮರ್ಜಿಗಾಗಿ ಕಾಯಬೇಕಾಗುವುದು. ಸ್ನೇಹಿತರ ವಿಷಯಕ್ಕೆ ಸಂಬಂಧಪಟ್ಟಂತೆ ಜಾಮೀನಾಗುವುದು. ಖಾಲಿ ಚೆಕ್ಕುಗಳನ್ನು ಕೊಡುವುದು ಇತ್ಯಾದಿಗಳನ್ನು ಮಾಡುವುದರಿಂದ ಹೆಚ್ಚಿನ ತೊಂದರೆಗೆ ಸಿಲುಕುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಜೀವನದಲ್ಲಿ ಬರಲಿರುವ ಕೆಲವು ಪ್ರಸಂಗಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಕ್ರೀಡಾ ಮನೋಭಾವದಿಂದ ಸ್ವೀಕರಿಸಿರಿ. ಅನಿರೀಕ್ಷಿತವಾಗಿ ಮತ್ತೊಬ್ಬರ ಒತ್ತಾಸೆಗೆ ಒಳಗಾಗಿ ಜವಾಬ್ದಾರಿಯೊಂದನ್ನು ತೆಗೆದುಕೊಳ್ಳಬೇಕಾಗುವುದು. ಆದಾಯದಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಅದಕ್ಕೆ ಪೂರಕವಾದ ಖರ್ಚು ಆಗುವುದರಿಂದ ಈ ವಾರ ಹಣ ಉಳಿತಾಯ ಮಾಡಲು ಆಗುವುದಿಲ್ಲ.

ಸಿಂಹ:

ದಿನ ಭವಿಷ್ಯ

ಸಿಂಹ:- ಬಹಳ ಕಾಲದಿಂದಲೂ ಬಗೆ ಹರಿಯದಿದ್ದ ಸಮಸ್ಯೆಗಳಿಗೊಂದು ಅಂತ್ಯ ಹಾಡುವುದು ಉತ್ತಮ. ನಿಮ್ಮ ಕಾರ್ಯಾಲಯದಲ್ಲಿ ನೌಕರರು ಸ್ಥಿರವಾಗಿ ನಿಲ್ಲುವುದಿಲ್ಲ ಎಂಬ ನಿಮ್ಮ ಕೊರಗು ಸಹಜವಾದದ್ದು. ಆದರೆ ಅವರಿಗೆ ಹೆಚ್ಚಿನ ಪಗಾರ ಕೊಟ್ಟು ಅವರ ವಿಶ್ವಾಸವನ್ನು ಹೊಂದುವುದು ಅನಿವಾರ್ಯ. ಆಗ ಸಮಾಜದ ಗಣ್ಯರು ನಿಮ್ಮ ನಾಯಕತ್ವವನ್ನು ಕೊಂಡಾಡುವರು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮತ್ತೊಬ್ಬರ ಹಿತದಲ್ಲೇ ಸುಖ ಕಾಣುತ್ತಿದ್ದ ನಿಮಗೆ ನಿಮ್ಮ ವೈಯಕ್ತಿಕ ಕೆಲಸಗಳು ಬಾಕಿ ಇರುವುದು ಗಮನಕ್ಕೆ ಬರುವುದು ಮತ್ತು ಆಗಿರುವ ನಷ್ಟ ಕಂಡು ಗಾಬರಿಯಾಗುವಿರಿ. ಸಮಾಜಕ್ಕೆ ನಿಮ್ಮಿಂದ ದೇಣಿಗೆ ಸಂದಾಯವಾಗಲಿದೆ. ಇದರಿಂದ ನಿಮ್ಮ ಪ್ರತಿಷ್ಠೆ ಹಾಗೂ ಕೀರ್ತಿ ಹೆಚ್ಚಲಿದೆ. ಅನುಭವಿಗಳ ಸಲಹೆಯಂತೆ ನಡೆಯುವುದು ಉತ್ತಮ. ಆದಾಯದ ವಿಷಯದಲ್ಲಿ ತೊಂದರೆಯಿಲ್ಲ. ಪರಿಶ್ರಮಕ್ಕೆ ತಕ್ಕಷ್ಟು ಆದಾಯ ಬರಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಈ ಹಿಂದೆ ಕಂಡು ಬಂದಿದ್ದ ಕಷ್ಟದ ದಿನಗಳು ದೂರವಾಗಲಿದ್ದು ಕುಟುಂಬದಲ್ಲಿ ನೆಮ್ಮದಿ ಸೌಖ್ಯ ನೆಲೆಸಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವುದು. ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ನಡೆಯುವುದು. ಆಪೇಕ್ಷಿತ ಕೆಲಸ ಕಾರ್ಯಗಳು ಸರಿಯಾದ ಕ್ರಮದಲ್ಲಿ ನಡೆಯಲಿದೆ. ನಿಮ್ಮ ಶ್ರಮ ಹಗುರವಾಗುವುದು. ಮಡದಿ ಮತ್ತು ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಅನಿರೀಕ್ಷಿತ ವ್ಯತ್ಯಾಸ ಕಂಡು ಬರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸ್ವಂತವಾಗಿ ಆಲೋಚಿಸುವುದನ್ನು ಬಿಟ್ಟು ಮತ್ತೊಬ್ಬರ ಸಲಹೆ, ಸೂಚನೆ ಅವಲಂಬಿಸಿ ಕೆಲಸ ಮಾಡುವ ಸ್ವಭಾವವನ್ನು ಮೊದಲು ಬಿಡಿ. ಚಾಡಿ ಮಾತುಗಳನ್ನು ನಂಬಿ ಏನಾದರೂ ನಿರ್ಣಯ ತೆಗೆದುಕೊಂಡಲ್ಲಿ ಅನಾಹುತ ಆಗುವುದು. ಆಡುವ ಮಾತಿನಲ್ಲಿ ನಡೆ, ನುಡಿಗಳಲ್ಲಿ ಬದಲಾವಣೆ ತಂದುಕೊಳ್ಳಿರಿ. ಗುರುವಿನ ಲಾಭ ಸ್ಥಾನದ ಪಯಣವು ನಿಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬುವುದು.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನಿರುದ್ಯೋಗಿಗಳಿಗೆ ಉತ್ತಮ ವೇತನದ ನೌಕರಿ ಸಿಗುವುದು. ಇದರಿಂದ ಆರ್ಥಿಕ ಸ್ಥಿತಿ ಹೆಚ್ಚಿನ ಮಟ್ಟದಲ್ಲಿ ಸುಧಾರಿಸಲಿದೆ. ವಾಹನ ಖರೀದಿ ಸದ್ಯಕ್ಕೆ ಬೇಡ. ಹೊಸ ಮನೆ ಖರೀದಿಯ ಬಗ್ಗೆ ಚಿಂತಿಸಿದಲ್ಲಿ ಇದು ಉತ್ತಮ ಕಾಲ ಅಥವಾ ಬೇರೊಂದು ನೂತನ ಬಾಡಿಗೆ ಮನೆಗೆ ಹೋಗುವ ಆಲೋಚನೆಯು ಸಿದ್ಧಿಸುವುದು. ಕಚೇರಿಯ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಬರವಣಿಗೆಯನ್ನು ಎರಡು ಬಾರಿ ಓದಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನೀವು ಮಾಡ ಬಯಸುವ ಎಲ್ಲಾ ಕೆಲಸಗಳಿಗೂ ಸ್ನೇಹಿತರಿಂದ ಸಂಪೂರ್ಣ ಸಹಾಯ ಸಿಗಲಿದೆ. ಎಲ್ಲರ ಪ್ರೋತ್ಸಾಹ ನಿಮ್ಮಲ್ಲಿ ನವ ಚೈತನ್ಯ ಮೂಡಿಸಲಿದೆ. ಪರಿವಾರದವರೊಂದಿಗೆ ಮಾಡಲಿರುವ ತೀರ್ಥಯಾತ್ರೆ ನೆಮ್ಮದಿ, ಸಂತೋಷ ತರಲಿದೆ. ನೆರೆಹೊರೆಯವರು ಸಹಾಯ ಕೋರಿ ನಿಮ್ಮಲ್ಲಿಗೆ ಬರುವರು. ಸಾಧ್ಯವಾದಲ್ಲಿ ಅವರಿಗೆ ಸ್ಪಂದಿಸಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಸಮಾಜದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆಯಿದೆ. ನಿಮ್ಮ ಈ ಗುಣವೇ ನಿಮ್ಮ ಎಲ್ಲಾ ಕೆಲಸವನ್ನು ಸುಲಲಿತವಾಗಿ ಮಾಡಿಸುವುದು. ಆದರೆ ಇದು ಬೇರೆಯವರಿಂದ ದುರುಪಯೋಗವಾಗದಂತೆ ಎಚ್ಚರ ವಹಿಸಿರಿ. ವ್ಯಕ್ತಿಗಳ ಸ್ವಭಾವಕ್ಕೆ ತಕ್ಕಂತೆ ನಡೆದುಕೊಳ್ಳಿರಿ. ಮಹತ್ವದ ವಿಚಾರಗಳಿಗೆ ಮಂತ್ರಾಲೋಚನೆಯಿರಲಿ. ಸ್ವಯಂ ಉದ್ಯೋಗಿಗಳಿಗೆ ಗುರುವಿನ ಅವಕೃಪೆಯಿಂದ ಕೆಲಕಾಲ ಹಿನ್ನಡೆ ಉಂಟಾಗುವುದು.

ಮೀನ:

ದಿನ ಭವಿಷ್ಯ

ಮೀನ:- ನಿಮ್ಮ ಹಿರಿತನ ಹಾಗೂ ಬೌದ್ಧಿಕ ಮಟ್ಟದಿಂದ ಜನರು ನಿಮ್ಮನ್ನು ಆದರಿಸುವರು. ಕಚೇರಿ ಕೆಲಸಗಳಲ್ಲಿ ಬಾಸ್‌ ನಿಮ್ಮ ಮೇಲೆ ಪೂರ್ಣ ಭರವಸೆ ಇಟ್ಟು ಹೆಚ್ಚಿನ ಗುರುತರ ಜವಾಬ್ದಾರಿಯನ್ನು ವಹಿಸುವರು. ಇದನ್ನು ಸದುಪಯೋಗ ಪಡಿಸಿಕೊಂಡಲ್ಲಿ ನಿಮ್ಮಂತಹ ಭಾಗ್ಯವಂತರು ಯಾರೂ ಇಲ್ಲ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಸಾಗಿದಲ್ಲಿ ಅಧಃಪತನದ ಜೊತೆಗೆ ಅವಮಾನ ಮತ್ತು ನಗೆಪಾಟಲು ಅನುಭವಿಸಬೇಕಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 5 ಮೇ ರಿಂದ 11 ಮೇ ರವರೆಗೆ, 2019!!