ಪೆಟ್ರೋಲ್-ಡೀಸೆಲ್ ಬೆಲೆ 80ಕ್ಕಿಂತ ಹೆಚ್ಚು ಹೋದಾಗ ಮೋದಿಗೆ ಬೈದಿದ್ದ ಜನತೆ ಈಗ ಕುಮಾರಸ್ವಾಮಿ ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿ ಮಾಡ್ತಿರೋದಕ್ಕೆ ಏನಂತಾರೆ?

0
651

ಹಲವು ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ನಿರಾಳರಾಗಿದ್ದ ರಾಜ್ಯದ ಜನರಿಗೆ ಮೈತ್ರಿ ಸರ್ಕಾರ ಶಾಕ್ ಕೊಟ್ಟಿದೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ದರವನ್ನು ರಾಜ್ಯ ಸರಕಾರ ಕ್ರಮವಾಗಿ ಶೇ.32 ಮತ್ತು ಶೇ.21ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ರಾಜ್ಯದಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ರೂ.1.14 ಮತ್ತು ಡೀಸೆಲ್‌ ಬೆಲೆ ರೂ.1.12 ಹೆಚ್ಚಳಮಾಡಿದ. ಕುಮಾರಸ್ವಾಮಿ ಸರ್ಕಾರ ಇಂದಿನಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯನ್ನು ಹೆಚ್ಚಿಸಲು ಆದೇಶ ಪ್ರಕಟಿಸಿದೆ.


Also read: ವಾಹನ ಸವಾರರೆ ಎಚ್ಚರ; ಪೆಟ್ರೋಲ್ ಪಂಪ್-ಗಳಲ್ಲಿ ನಡೆಯುತ್ತಿದೆ ರಿಮೋಟ್ ಕಂಟ್ರೋಲ್ ಮೋಸ..

ಹೌದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಶೇ.32 ಮತ್ತು ಡೀಸೆಲ್ ಮೆಲೆ ಶೇ.21 ತೆರಿಗೆ ಹೆಚ್ಚಳಕ್ಕೆ ಸರ್ಕಾರ ಆದೇಶ ಪ್ರಕಟಿಸಿದೆ. ತೆರಿಗೆ ಹೆಚ್ಚಳದಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಒಂದು ರೂ. ಏರಿಕೆಯಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆಯನ್ನು ಏರಿಸುತ್ತಿದ್ದೇವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈ ತೆರಿಗೆ ಏರಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.84 ರೂ. ಆಗಿದ್ದರೆ ಡೀಸೆಲ್ ಬೆಲೆ 64.66 ರೂ.ಗೆ ಏರಿಕೆಯಾಗಲಿದೆ.
ತೆರಿಗೆ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರಕಾರವು, ಬೊಕ್ಕಸಕ್ಕೆ ಸಂಗ್ರಹವಾಗುತ್ತಿದ್ದ ರಾಜಸ್ವ ಮೊತ್ತ ಕಡಿಮೆಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ತೆರಿಗೆ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಈಗ ತೆರಿಗೆ ಏರಿಕೆಯ ನಡುವೆಯೂ ನೆರೆ ರಾಜ್ಯಗಳಿಗಿಂತಲೂ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇರಲಿದೆ ಎಂದು ರಾಜ್ಯ ಸರಕಾರ ವಾದಿಸಿದೆ.


Also read: ಪೆಟ್ರೋಲ್ ಪಂಪ್-ನಲ್ಲಿ ಚಿಪ್ ಹಾಕಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಪಂಪ್-ಅನ್ನು ಸೀಜ್ ಮಾಡಿದ ಪೊಲೀಸರು, ಇನ್ನೆಷ್ಟು ಹೀಗೆ ಮೋಸ ಮಾಡುತ್ತಿವೆಯೋ??

2018ರ ಜುಲೈ15ರಂದು ರಾಜ್ಯ ಸರಕಾರವು ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ. 30ರಿಂದ ಶೇ. 32ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 19ರಿಂದ ಶೇ. 21ಕ್ಕೆ ಹೆಚ್ಚಳ ಮಾಡಿತ್ತು. ಈ ಕ್ರಮದಿಂದ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್​ನಿಂದ 1.14 ಹಾಗೂ 1.12 ರೂಪಾಯಿಯಷ್ಟು ಹೆಚ್ಚುವರಿ ಆದಾಯ ದೊರಕುತ್ತಿತ್ತು. ಅದಾದ ನಂತರ ಜಾಗತಿಕ ಮಾರುಕಟ್ಟೆಯ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದರಿಂದ ಜನರಿಗೆ ಹೊರೆಯಾಗಿತ್ತು. ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ.


Also read: ಪೆಟ್ರೋಲ್ ಬಂಕ್-ನಲ್ಲಿ ಮೊಬೈಲ್ ಬಳಸುವುದು ಬ್ಯಾನ್ ಆಗಿದ್ದರೂ, PayTM ಅಥವಾ BHIM ಆಪ್-ಗಳನ್ನು ಬಳಸುವುದು ಎಷ್ಟು ಸುರಕ್ಷಿತ

ಅದರಂತೆ ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ರಾಜ್ಯದಲ್ಲೂ ಪ್ರತಿ ಲೀಟರ್, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿಯಾಗಿ ವಿಧಿಸಿದ್ದ ಸೆಸ್ ಇಳಿಕೆ ಮಾಡಿ ರಾಜ್ಯದ ಜನತೆಯ ಭಾರ ಇಳಿಸಲು ರಾಜ್ಯ ಸರಕಾರ ಲೀಟರ್​ಗೆ 2 ರೂಪಾಯಿಯಷ್ಟು ಹಣ ಕಡಿಮೆ ಮಾಡಿದ್ದರು. ಈಗ ಪೆಟ್ರೋಲ್ ಮೂಲ ಬೆಲೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವುದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಬೀಳುವ ಹಣ ಕಡಿಮೆಯಾಗುತ್ತಿದೆ. ಹೀಗಾಗಿ, ಮೊದಲಿದ್ದ ತೆರಿಗೆಯನ್ನೇ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರವು ಪ್ರಕಟಣೆ ಹೊರಡಿಸಿದೆ.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ:

  • ಕರ್ನಾಟಕದಲ್ಲಿ ಪರಿಷ್ಕೃತ ದರ : ಪೆಟ್ರೋಲ್‌ -70.84 ರೂ. ಡೀಸೆಲ್‌ -64.66 ರೂ.
  • ಕಾಸರಗೋಡು (ಕೇರಳ) : ಪೆಟ್ರೋಲ್‌ -71.16 ರೂ. ಡೀಸೆಲ್‌-66.82 ರೂ.
  • ಹೊಸೂರು (ತಮಿಳುನಾಡು) : ಪೆಟ್ರೋಲ್‌ -72.87 ರೂ. ಡೀಸೆಲ್‌-67.71 ರೂ.
  • ಅನಂತಪುರ (ಆಂಧ್ರಪ್ರದೇಶ) : ಪೆಟ್ರೋಲ್‌ -72.63 ರೂ. ಡೀಸೆಲ್‌-67.59 ರೂ.
  • ಕಾಗಲ್‌ (ಮಹಾರಾಷ್ಟ್ರ) : ಪೆಟ್ರೋಲ್‌ -74.60 ರೂ. ಡೀಸೆಲ್‌- 64.86 ರೂ.