ಈ ನಿಯಮ/ಹಕ್ಕುಗಳನ್ನು ಸದಾ ನೆನಪಿಟ್ಟುಕೊಳ್ಳಿ, ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆದಾಗ ಇದು ಉಪಯೋಗಕ್ಕೆ ಬರುತ್ತೆ!!

0
1441

ಟ್ರಾಫಿಕ್ ಪೋಲಿಸ್ , ಈ ಪದ ಕೇಳಿದ್ರೆ ಸಾಕು ಜನ ಭಯದಿಂದ ತಮ್ಮ ವಾಹನಗಳನ್ನ ಹಿಂದೆತಿರುಗಿಸಿ ಓಡಿ ಹೋಗುತ್ತಾರೆ. ಆದರೆ ಈ ಪೋಸ್ಟ್ ಓದಿದ ನಂತರ ನಿಮ್ಮ ನಿಲುವು ಬದಲಾಗಬಹುದು , ಸಂಚಾರಿ ಪೊಲೀಸರು ನಿಮ್ಮ ವಾಹನ ನಿಲ್ಲಿಸಲು ಹೇಳಿದಾಗ ನೀವು ಏನ್ಮಾಡ್ಬೇಕು ಅಂತ ನಾವು ಹೇಳ್ತಿವಿ ಕೇಳಿ.

ಟ್ರಾಫಿಕ್ ಪೋಲಿಸ್ ನಿಮ್ಮನ್ನು ಬಹಳ ಅಂದ್ರೆ ಹೆಲ್ಮೆಟ್ , ಡ್ರೈವಿಂಗ್ ಲೈಸೆನ್ಸ್ , ವಾಹನದ ದಾಖಲಾತಿ , ಇನ್ಸೂರೆನ್ಸ್ , ಎಮಿಶನ್ ಟೆಸ್ಟ್ ತೋರಿಸಲು ಹೇಳಬಹುದು. ಆದರೆ ನೆನಪಿಡಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಅವರು ನಿಮ್ಮ ದಾಖಲಾತಿಗಳನ್ನ ಪರಿಶೀಲಿಸಬಹುದು ಅಷ್ಟೇ ಅವರು ದಾಖಲಾತಿ ಜಪ್ತಿ ಅಥವಾ ಅವರ ಬಳಿ ಇಟ್ಟು ಕೊಳ್ಳುವ ಅಧಿಕಾರ ಅವರಿಗೆ ಇರುವುದಿಲ್ಲ. ಒಂದು ವೇಳೆ ಯಾವ ಪೋಲಿಸ್ ಆದರು ಹಾಗೆ ಮಾಡಿದರೆ ಕೂಡಲೇ ಅವರ ಹೆಸರು , ಮತ್ತು ಬಕ್ಕಲ್ ನಂಬರ್ ಅನ್ನು ನೋಟ್ ಮಾಡಿಕೊಳ್ಳಿ. ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಸೆಕ್ಷನ್ ೧೩೦ ರ ಪ್ರಕಾರ ಇದು ಕಾನೂನು ಬಾಹಿರ.

ಒಂದು ವೇಳೆ ನಿಮ್ಮ ಬಳಿ ಯಾವುದಾದರು ದಾಖಲಾತಿ ಇಲ್ಲದಿದ್ದರೆ ಪೋಲೀಸರ ಜೊತೆ ವಾದ ಮಾಡದೆ ಸುಮ್ಮನಿದ್ದು ದಂಡ ಕಟ್ಟಿ ಸಹಕರಿಸುವುದು ಒಳ್ಳೆಯದು , ಹಾಗಂತ ಲಂಚ ಕೊಡ ಬೇಡಿ ನೀವು ಕೊಟ್ಟ ಹಣದ ರಸೀದಿ ಪಡೆಯಿರಿ , ಪೊಲೀಸ್-ನವರು ನಿಮ್ಮಿಂದ ದಂಡ ಪಡೆಯಲು ಅವರ ಹತ್ತಿರ ಡಿಪಾರ್ಟ್ಮೆಂಟ್ ಬಿಲ್ ಬುಕ್ ಅಥವಾ ಮಷೀನ್ ಇರಬೇಕು.

ನೀವು ಕಾರಿನಲ್ಲಿ ಕುಳಿತಿರುವಾಗ ನಿಮ್ಮ ವೆಹಿಕಲ್ ಟೌ ಮಾಡುವ ಹಾಗಿಲ್ಲ , ನೀವು ಹೆಲ್ಮೆಟ್ ಇಲ್ಲದೆ , ಡ್ರಿಂಕ್ ಅಂಡ್ ಡ್ರೈವ್ , ಮೊಬೈಲ್ ಮಾತನಾಡುತ್ತ ಡ್ರೈವಿಂಗ್ , ಸಿಗ್ನಲ್ ಜಂಪ್ ಹೀಗೆ ಯಾವುದೇ ತಪ್ಪು ಮಾಡಿದರು ಅವರು ಬಿಲ್ ಬುಕ್ , ಅಥವಾ ಮಷೀನ್ ಇಲ್ಲದೆ ಹಾಗೆ ಹಣ ತೆಗೆದುಕೊಳ್ಳುವ ಹಾಗಿಲ್ಲ.

ನಿಮ್ಮನ್ನು ಒಂದು ವೇಳೆ ಅರೆಸ್ಟ್ ಮಾಡಿದರೆ , ನಿಮ್ಮನ್ನು ಅರೆಸ್ಟ್ ಮಾಡಿದ ಹಾಗು ದಂಡ ಹಾಕಿದ ಬಗ್ಗೆ ವಿವರಿಸಬೇಕು , ರಶೀದಿಯಲ್ಲಿ ಹೆಸರು ಮತ್ತು ಕೋರ್ಟ್ ವಿವರ , ದಿನಾಂಕ , ವಾಹನ ಸಂಖ್ಯೆ , ನಿಮ್ಮ ಹೆಸರು ಮತ್ತು ವಿಳಾಸ , ಜಪ್ತಿ ಮಾಡಿದ ದಾಖಲಾತಿ ವಿವರ ಮತ್ತು ಚಾಲನಾಧಿಕಾರಿ ಸಹಿ ಇರಬೇಕು ಮತ್ತು ಅರೆಸ್ಟ್ ಮಾಡಿದ ೨೪ ಘಂಟೆಯೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಬೇಕು.