ಈಗ ವಾಟ್ಸಾಪ್ ಮೂಲಕವೇ ಹಣ ಕಳಿಸಬಹುದು/ಸ್ವೀಕರಸಬಹುದು, ಈ ಹೊಸ ಫೀಚರ್-ಅನ್ನು ಬಳಸುವುದು ಹೇಗೆ ಅಂತ ಹೇಳ್ತೀವಿ ಓದಿ..

0
1837

ಸಾಮಾಜಿಕ ಜಾಲತಾಣ ಲೋಕದ ದಿಗ್ಗಜ ವೆಬ್-ಸೈಟ್ ಆದ ಫೇಸ್-ಬುಕ್ ಯಾವಾಗಲೂ ತನ್ನ ಬಳಕೆದಾರರಿಗೆ ಏನಾದರೊಂದು ಹೊಸತನ್ನು ನೀಡುತ್ತಿರುತ್ತದೆ. ಪ್ರತಿ ಬಾರಿ ಹೊಚ್ಚ ಹೊಸ ಫೀಚೆರ್ ಗಳನ್ನು ನೀಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈಗ ಫೇಸ್-ಬುಕ್ ಒಡೆತನದ ಫೇಮಸ್ ಆಪ್ ಆದ ವಾಟ್ಸ್-ಆಪ್ ನಲ್ಲಿ ಒಂದು ಹೊಸ ಫೀಚೆರ್ ತಂದಿದೆ ಅದನ್ನು ಕೇಳಿದರೆ ನಿಮಗೆ ಖುಷಿಯಾಗುವುದಂತೂ ಖಚಿತ.

ಫೇಸ್-ಬುಕ್ ತನ್ನ ಆಪ್ ಆದ ವಾಟ್ಸ್-ಆಪ್ ನಲ್ಲಿ ಅಂತಹುದೇನು ಬಿಟ್ಟಿದೆ ಅಂತೀರ. ಈಗ ನೀವು ವಾಟ್ಸ್-ಆಪ್ ಅನ್ನು ಕೇವಲ, ಮೆಸೇಜ್ ಕಳುಹಿಸಲು, ಕರೆ ಮಾಡಲು, ಫೋಟೋ ಕಳುಹಿಸಲು ಮತ್ತು ವೀಡಿಯೊ ಕಳಿಸಲು ಮಾತ್ರವಲ್ಲದೆ ಅದರ ಮೂಲಕ ನೀವು ಹಣ ವರ್ಗಾವಣೆ ಕೂಡ ಮಾಡಬಹುದಾಗಿದೆ.

ಹೌದು, ಈಗ ನೀವು ನಿಮ್ಮ ಸ್ನೇಹಿತರಿಗೆ, ಸಂಬಂಧಿಗಳಿಗೆ ಅಥವಾ ಯಾರಿಗಾದರೂ ಹಣ ವರ್ಗಾವಣೆ ಮಾಡಬಹುದಾಗಿದೆ ಇದನ್ನು ಖುದ್ದು ಫೇಸ್-ಬುಕ್ ನವರು ತಮ್ಮ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಹೊಸ ವಿಶೇಷತೆಯನ್ನು IOS ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಈ ಹೊಸ ವಿಶೇಷತೆಯನ್ನು ವಾಟ್ಸಪ್
2.18.21 ಐಓಎಸ್ ಮತ್ತು ಆಂಡ್ರಾಯ್ಡ್ ನ 2.18.41 ಆವೃತ್ತಿಯ ಆಪ್ ಬಳಸುವ ಜನರಿಗೆ ಸಿಗಲಿದೆ.

ಈ ಫೀಚೆರ್ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಇಲ್ಲಿ ನಿಮಗೆ ತಿಳಿಸುತ್ತೇವೆ. ವಾಟ್ಸಪ್‍ನ ಈ ವಿಶೇಷ ಚಾಟ್ ವಿಂಡೋನಲ್ಲಿ ಕಾಣಿಸಲಿದ್ದು, ಅಟ್ಯಾಚ್‍ಮೆಂಟ ಮೆನುವಿನಲ್ಲಿ ಸಿಗುವ ಗ್ಯಾಲರಿ, ವೀಡಿಯೊ, ಡಾಕ್ಯುಮೆಂಟ್‍ಗಳ ಜೊತೆಯಲ್ಲಿ ಈ ವಿಶೇಷತೆ ಸಿಗುತ್ತದೆ. ಇದರಲ್ಲಿ ಹಣ ಪಾವತಿಸುವ ವಿಶೇಷತೆಯನ್ನು ಕ್ಲಿಕ್ ಮಾಡಿದರೆ, ವಿವಿಧ ಬ್ಯಾಂಕ್‍ಗಳ ಆಯ್ಕೆ ಸಿಗಲಿದೆ.

ಭಾರತದಲ್ಲಿ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್(UPI) ಮುಖಾಂತರ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನುತನ್ನ ಆಪ್ ಗೆ ಸೇರಿಸಿದೆ. ಬೇಕಾದ ಬ್ಯಾಂಕ್ ಅನ್ನು ಆಯ್ಕೆ ಮಾಡಿ ನಂತರ UPI ಲಿಂಕ್ ಮಾಡಬೇಕು, ನಂತರ ಹೊಸ UPI ಖಾತೆ ತೆರೆದು ಪಿನ್ ಸೆಟ್ ಮಾಡಿ, ಹಣ ಕಳುಹಿಸುವ ಹಾಗು ಹಣ ಪಡೆದು ಕೊಳ್ಳುವ ವ್ಯಕ್ತಿಗಳಿಬ್ಬರು ಈ ಹೊಸ ಫೀಚೆರ್ ಅನ್ನು ಬಳಸಬೇಕಾದರೆ ಆಪ್ ಅಪ್‍ಡೇಟ್ ಮಾಡಿಕೊಳ್ಳಿ.